)
Bigboss kannada 12 : ಒಂದೆಡೆ ಸೀಕ್ರೆಟ್ ರೂಮ್ ಮತ್ತೊಂದೆಡೆ ಟಫ್ ಟಾಸ್ಕ್ಗಳಿಂದ ರಂಗೇರಿತ್ತು..ಅವಾಗ ಯಾವುದೇ ಕಾರಣಕ್ಕೂ ಕಾವ್ಯಾ ಮಾತ್ರ ಗೆಲ್ಲಾಬಾರದು ಅಂತಾ ರಕ್ಷಿತಾ ಪಟ್ಟುಹಿಡಿದ್ದಾರೆ.ಬಿಗ್ಬಾಸ್ ಕೊಟ್ಟ ಅವಕಾಶವನ್ನ ಉಪಯೋಗಿಸಿಕೊಂಡು ಕಾವ್ಯಾಳನ್ನ ಸೋಲಿಸಲೇಬೇಕು ಅಂತಾ ದ್ರುವಂತ್ ಜೊತೆ ಜಗಳವಾಡಿ ರಘು ಮತ್ತೆ ಗಿಲ್ಲಿಯನ್ನ ಒಂದು ಟೀಮ್ ಆಗಿ ಆಟವಾಡಿಸಿದರೆ ಕಾವ್ಯಾ ಸೂರಜ್ ಅವರನ್ನ ಒಂದು ಟೀಮ್ ಆಗಿ ಆಟವಾಡಿಸಿದ್ದಾರೆ..
ಬಿಗ್ಬಾಸ್ ಕೊಟ್ಟ ಟಾಸ್ಕ್ಗಳನೆಲ್ಲಾ ಉತ್ತಮವಾಗಿ ಆಟವಾಡಿ ಕಾವ್ಯಾ ಆದ್ರೆ ರಕ್ಷಿತಾಳ ಊಹೆಯನ್ನ ಸುಳ್ಳು ಮಾಡಿದ್ದಾರೆ..ಸ್ಪರ್ಧಿಗಳಿಂದ ಬಹುತೇಕ ಮತ ಪಡೆದು,ʻಬಿಗ್ ಬಾಸ್ʼ 12ನೇ ಸೀಸನ್, 12ನೇ ವಾರ ಕಾವ್ಯ ಶೈವ ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ ಈ ವಾರದ ಕ್ಯಾಪ್ಟನ್ ಆಗಿದ್ದಾರೆ ಕಾವ್ಯ ಶೈವ. ಜೊತೆಗೆ ಸ್ಪರ್ಧಿಗಳಿಂದ ಉತ್ತಮ ಎಂದೆನಿಸಿಕೊಂಡಿದ್ದಾರೆ.
ಇನ್ನೊಂದ್ಕಡೆ, ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಮೊದಲ ವಾರವೇ ಸ್ಪರ್ಧಿಗಳಿಂದ ಉತ್ತಮ ಎಂದೆನಿಸಿಕೊಂಡಿದ್ದ ಚೈತ್ರಾ ಕುಂದಾಪುರ ಈ ವಾರ ಕಳಪೆ ಆಗಿದ್ದಾರೆ.ಅಂತಿಮವಾಗಿ, ಕಾವ್ಯ, ಸೂರಜ್, ರಘು ಹಾಗೂ ಗಿಲ್ಲಿ ಕ್ಯಾಪ್ಟನ್ಸಿ ರೇಸ್ನಲ್ಲಿದ್ದರು. ಟ್ವಿಸ್ಟ್ ಅಂತಂದರೆ, ಈ ನಾಲ್ವರಲ್ಲಿ ಯಾರಿಬ್ಬರು ತಂಡವಾಗಿ ಟಾಸ್ಕ್ ಆಡಬೇಕು ಅನ್ನೋದನ್ನ ನಿರ್ಧಿರಿಸುವ ಅವಕಾಶವನ್ನ ʻಬಿಗ್ ಬಾಸ್ʼ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ಗೆ ನೀಡಿದ್ದರು. ಕಾವ್ಯನ ಟಾಸ್ಕ್ನಿಂದ ಸೋಲಿಸಲೇಬೇಕು ಅಂತ ಹಠ ಹಿಡಿದಿದ್ದ ರಕ್ಷಿತಾ ಶೆಟ್ಟಿ, ಸೂರಜ್-ಕಾವ್ಯ ಒಂದು ತಂಡವಾಗಿ, ರಘು-ಗಿಲ್ಲಿ ಒಂದು ತಂಡವಾಗಿ ಆಟ ಆಡಬೇಕು ಅಂತ ರಕ್ಷಿತಾ ಶೆಟ್ಟಿ ಕುತಂತ್ರದಿಂದ ಸೋಲಿಸಲು ಪಟ್ಟು ಹಿಡಿದಳು. ಆದ್ರೆ ಲೆಕ್ಕಾಚಾರವನ್ನ ತಲೆಕೆಳಗೆ ಮಾಡಿ ರಕ್ಷಿತಾ ಶೆಟ್ಟಿ ಕ್ಯಾಪ್ಟನ್ ಮನೆಯವರಿಂದ ಉತ್ತಮಪಡೆದಿದ್ದಾರೆ..