)
Bigboss kannada 12 no elimination: ಬಿಗ್ಬಾಸ್ ಕನ್ನಡ 12 ಈಗಾಗಲೇ ಅನೇಕ ಟ್ವಿಸ್ಟ್ಗಳೊಂದಿಗೆ ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ..ಇದೀಗ ರಕ್ಷಿತಾ ಹಾಗೂ ಧ್ರುವಂತ್ ಮನೆಯಿಂದ ಹೊರಬಂದಿಲ್ಲಾ..ಬದಲಿಗೆ ಸೀಕ್ರೆಟ್ ರೂಮ್ಗೆ ತೆರಳಿದ್ದಾರೆ. ಇತ್ತಿಚೆಗೆ ʻಬಿಗ್ ಬಾಸ್ʼ ಎಲಿಮಿನೇಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜೋರು ಚರ್ಚೆಯಾಗುತ್ತಿದೆ. ಒಂದ್ಕಡೆ, ರಜತ್ ಮತ್ತು ಚೈತ್ರಾ ಕುಂದಾಪುರ ಅಸಲಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಲ್ಲ. ಶೀಘ್ರದಲ್ಲೇ ದೊಡ್ಮನೆಯಿಂದ ಹೊರಬರ್ತಾರೆ ಎಂದೆಲ್ಲಾ ಗಾಸಿಪ್ ಹರಿದಾಡುತ್ತಿತ್ತು. ಆದ್ರೀಗ ರಕ್ಷಿತಾ ಹಾಗೂ ಧ್ರುವಂತ್ ಮನೆಯ ಮೈನ್ ಗೇಟ್ನಿಂದ ಹೊರಬಂದಿದ್ದಾರೆ.. ಅವರನ್ನ ಸೀಕ್ರೆಟ್ ರೂಮ್ಗೆ ಕಳುಹಿಸ್ತಾರಾ ಮತ್ತೆ ರಿರ್ಟನ್ ಮನೆಗೆ ಕಳುಹಿಸ್ತಾರಾ ಅನ್ನೋದು ಬಿಗ್ಬಾಸ್ ನೋಡ್ಕೊತ್ತಾರೆ ಅಂತಾ ಸುದೀಪ್ ಹೇಳಿದ್ದರು..
ಲಾಸ್ಟ್ ಬಾಟಮ್ನಲ್ಲಿ ರಜತ್ ರಕ್ಷಿತಾ ಹಾಗೂ ಧ್ರುವಂತ್ ಇವರಲ್ಲಿ ರಜತ್ ಮನೆಯಲ್ಲಿ ಉಳಿಸಿಕೊಂಡು..ರಕ್ಷಿತಾ ಹಾಗೂ ಧ್ರುವಂತ್ ಅವರನ್ನ ಮನೆಯಂದ ಹೊರಗೆ ಕಳುಹಿಸಲಾಗಿದೆ...ಈ ಇಬ್ಬರು ಮನೆಯಿಂದ ಹೊರ ಬರುತ್ತಿದ್ದಂತೆ ಮನೆ ಮಂದಿ ಭಾವುಕರಾಗಿದ್ದಾರೆ..
ಸದ್ಯ ಮನೆಯಿಂದ ರಕ್ಷಿತಾ ಹೊರಬಂದಿದಕ್ಕೆ ರಜತ್ ಗಿಲ್ಲಿ ರಘು ತುಂಬಾನೆ ಬೇಸರ ವ್ಯಕ್ತಪಡಿಸಿದ್ದಾರೆ..ಮತ್ತೊಂದೆಡೆ ಮಾಳು ಕೂಡ ಅಳುತ್ತಾ ಮಲಗಿರೊದು ಕಂಡುಬಂದಿದೆ..ಸಡನ್ ಇಬ್ಬರು ಮನೆಯಿಂದ ಹೊರಗೆ ಹೋಗಿದ್ದನ್ನ ಕಂಡು ಎಲ್ಲಾರೂ ಶಾಕ್ ಆಗಿದ್ದಾರೆ.ಇನ್ನು, ಬಿಗ್ಬಾಸ್ ರಕ್ಷಿತಾ ಹಾಗೂ ಧ್ರುವಂತ್ ಮತ್ತೆ ಮನೆಯೊಳಗೆ ಕಳುಹಿಸಿ ಇನ್ಯಾವ ತರ ಶಾಕ್ ಕೊಡ್ತಾರೆ ಅನ್ನೋದು ವೀಕ್ಷಕರು ಮುಂದಿನ ಸಂಚಿಕೆಯವರೆಗೆ ಕಾಯಬೇಕಾಗಿದೆ
ಇದನ್ನೂ ಓದಿ: ಕರ್ಣ ಸೀರಿಯಲ್ನಲ್ಲಿ ಬಿಗ್ ಟ್ವಸ್ಟ್ ಮೇಲೆ ಟ್ವಿಸ್ಟ್ ವೀಕ್ಷಕರಲ್ಲಿ ಆತಂಕ..!