ಬಿಗ್ ಬಾಸ್ ಶೋ ನಡೆಸಿಕೊಡಲು ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ...!

Bigg boss 18: ಬಾಕ್ಸ್ ಅಫೀಸ್ ಸುಲ್ತಾನ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 18ನೇ ಸೀಸನ್ ಫಿನಾಲೆ ಮುಗಿದಿದ್ದು ಬಿಗ್ ಬಾಸ್ ಶೋ ಇನ್ನಷ್ಟು ಖ್ಯಾತಿ ಗಳಿಸಿದೆ. ಹಾಗೆಯೇ ಹೋಸ್ಟ್ ಸಲ್ಮಾನ್ ಖಾನ್ ಪೇಮೆಂಟ್ ಕೂಡ ಸಿಕ್ಕಾಪಟ್ಟೆ ಹೆಚ್ಚಾಗಿದೆ ಎನ್ನುತ್ತದೆ ಬಾಲಿವುಡ್.

Written by - Yashaswini V | Last Updated : Jan 20, 2025, 11:54 AM IST
  • ಸಲ್ಮಾನ್ ಖಾನ್ ಸಿನಿಮಾದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ 10 ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವುದನ್ನು ಬಿಟ್ಟಿಲ್ಲ.
  • ಸಲ್ಮಾನ್ ಖಾನ್ ಅವರಿಂದಾಗಿ ಬಿಗ್ ಬಾಸ್ ಶೋಗೆ ಹೆಚ್ಚಿನ ವೀಕ್ಷಕರು ಬರುತ್ತಿದ್ದಾರೆಂದು ಅವರ ಪೇಮೆಂಟ್ ಜಾಸ್ತಿಯಾಗಿದೆಯಂತೆ.
  • ಸಲ್ಮಾನ್ ಖಾನ್ ಬಿಗ್ ಬಾಸ್ ಗೆ ಪಡೆಯೋ ಪೇಮೆಂಟ್ ಬಾಲಿವುಡ್ ಹಿಟ್ ಚಿತ್ರಗಳ ಬಂಡವಾಳಕ್ಕಿಂತಲೂ ಜಾಸ್ತಿಯಾಗಿದೆ.
ಬಿಗ್ ಬಾಸ್ ಶೋ ನಡೆಸಿಕೊಡಲು ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ...!

Bigg boss 18 Salman Khan: ಹಿಂದಿ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ಕಾರ್ಯಕ್ರಮ ಎಂದರೆ ಅದು ಬಾಲಿವುಡ್ ಬಾಕ್ಸ್ ಅಫೀಸ್ ಸುಲ್ತಾನ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್. ಈಗ ಬಿಗ್ ಬಾಸ್ 18ನೇ ಸೀಸನ್ ಫಿನಾಲೆ ಮುಕ್ತಾಯಗೊಂಡಿದೆ. 105 ದಿನ ನಡೆದ ಬಿಗ್ ಬಾಸ್ 18ರ ಸೀಸನ್ ಬಳಿಕ ಇನ್ನಷ್ಟು ಖ್ಯಾತಿ ಗಳಿಸಿದೆ. ಹಾಗೆಯೇ ಹೋಸ್ಟ್ ಸಲ್ಮಾನ್ ಖಾನ್ ಪೇಮೆಂಟ್ ಕೂಡ ಹೆಚ್ಚಾಗಿದೆ ಎನ್ನುತ್ತದೆ ಬಾಲಿವುಡ್.

Add Zee News as a Preferred Source

ಸಲ್ಮಾನ್ ಖಾನ್ ಸಿನಿಮಾದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ 10 ವರ್ಷಗಳಿಂದ ಬಿಗ್ ಬಾಸ್ ಅನ್ನೂ ಬಿಟ್ಟಿಲ್ಲ. ಸಲ್ಮಾನ್ ಖಾನ್ ಅವರಿಂದಾಗಿಯೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೆಚ್ಚಿನ ವೀಕ್ಷಕರು ಬರುತ್ತಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ 18ನೇ ಸೀಸನ್ ಗೆ ಪೇಮೆಂಟ್ ಜಾಸ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಬಿಗ್ ಬಾಸ್ ಕಾರ್ಯಕ್ರಮದ ಕೊನೆಯ ನಿರೂಪಣೆ ಬಗ್ಗೆ ಕಿಚ್ಚನ ಮನದಾಳದ ಮಾತು! ಏನಂದಿದ್ದಾರೆ ಸುದೀಪ್?

ಬಾಲಿವುಡ್ ಗಾಳಿ ಮಾತುಗಳ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ 105 ದಿನ ಬಿಗ್ ಬಾಸ್ ಹೋಸ್ಟ್ ಮಾಡಲು ತಿಂಗಳಿಗೆ 60 ಕೋಟಿ ರೂಪಾಯಿಗಳಂತೆ ಬರೋಬ್ಬರಿ 200 ಕೋಟಿ ರೂಪಾಯಿ ಸಂಭಾವನೆಯನ್ನು ನೀಡಲಾಗಿದೆಯಂತೆ. ಈ ಮೂಲಕ ಇಲ್ಲಿಯವರೆಗೆ ಬಾಲಿವುಡ್ ಬಾಕ್ಸ್ ಅಫೀಸ್ ಸುಲ್ತಾನ ಎನ್ನುವ ಹೆಸರು ಪಡೆದಿದ್ದ ಸಲ್ಮಾನ್ ಖಾನ್ ಈಗ ಕಿರುತೆರೆಯಲ್ಲೂ ಆ ಕಿರೀಟವನ್ನು ಕಿತ್ತುಕೊಂಡಿದ್ದಾರೆ.

ಇದನ್ನೂ ಓದಿ- ಬಿಗ್‌ಬಾಸ್‌ ಫಿನಾಲೆ ತಲುಪಲು ಹಣದ ಒಪ್ಪಂದ ಮಾಡಿಕೊಂಡಿದ್ದಾರಾ ಈ ಲೇಡಿ ಸ್ಪರ್ಧಿ! ಕೊನೆಗೂ ಬಹಿರಂಗವಾಯ್ತು ಮಹಾಮೋಸ!   

ಸಲ್ಮಾನ್ ಖಾನ್ ಬಿಗ್ ಬಾಸ್ ಗೆ ಪಡೆದಿರುವ ಸಂಭಾವನೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಹಿಟ್ ಆದ ಚಿತ್ರಗಳ ನಿರ್ಮಾಣಕ್ಕೆ ಹೂಡಿರುವ ಬಂಡವಾಳಕ್ಕಿಂತಲೂ ಜಾಸ್ತಿಯಾಗಿದೆ. ಉದಾಹರಣೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಬಂಡವಾಳ ಕೇವಲ 200 ಕೋಟಿ ರೂಪಾಯಿ. ರಾಜಮೌಳಿ ನಿರ್ದೇಶನದ ಬಾಹುಬಲಿ 180 ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಿಸಿರುವ ಚಿತ್ರ.  ಬಾಲಿವುಡ್ ಬಾದಷಾ ಶಾರುಖ್ ಖಾನ್ ನಟನೆಯ ಡಂಕಿ ಚಿತ್ರಕ್ಕೆ ಹೂಡಿರುವ ಬಂಡವಾಳ ಕೇವಲ 120 ಕೋಟಿ ರೂಪಾಯಿ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News