ಕ್ವಾಟರ್‌ ಕೊಟ್ಟರೆ ನನ್ನ ಮಕ್ಕಳೇ ದೇವರು ಅಂತಾರೆ..! ತಂದೆಯ ಬಗ್ಗೆ ಚೈತ್ರಾ ಶಾಕಿಂಗ್‌ ಹೇಳಿಕೆ

Chaithra Kundapura : ಬಿಗ್‌ ಬಾಸ್‌ ಮಾಡಿ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ತಮ್ಮ ತಂದೆಯ ವಿರುದ್ಧ ಹಾಕಿರೋ ಪೋಸ್ಟ್ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಪೋಸ್ಟ್‌ನಲ್ಲಿ ಚೈತ್ರಾ, ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿ ದವರಿಗಷ್ಟೇ ಗೊತ್ತು... ಎಂದು ಶಾಕಿಂಗ್‌ ವಿಚಾರ ಬಹಿರಂಗ ಪಡಿಸಿದ್ದಾರೆ.

Written by - Krishna N K | Last Updated : May 15, 2025, 08:30 PM IST
    • ತಂದೆಯ ವಿರುದ್ಧ ಚೈತ್ರಾ ಕುಂದಾಪುರ ಗರಂ
    • ಚೈತ್ರಾ ಪೋಸ್ಟ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
    • ಕುಡುಕ ತಂದೆ ಯಾರಿಗೂ ಸಿಗಬಾರದು ಎಂದು ಹೇಳಿಕೊಂಡಿದ್ದಾರೆ.
ಕ್ವಾಟರ್‌ ಕೊಟ್ಟರೆ ನನ್ನ ಮಕ್ಕಳೇ ದೇವರು ಅಂತಾರೆ..! ತಂದೆಯ ಬಗ್ಗೆ ಚೈತ್ರಾ ಶಾಕಿಂಗ್‌ ಹೇಳಿಕೆ

Chaithra Kundapura father : ಮದುವೆ ಬೆನ್ನಲ್ಲೆ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ಧ ಸ್ವತಃ ಅವರ ತಂದೆ ಅಚ್ಚರಿ ವಿಷಯಗಳನ್ನು ಹಂಚಿಕೊಂಡಿದ್ದರು. ಇದೀಗ ತಂದೆಯ ಮಾತಿಗೆ ಚೈತ್ರಾ ಪ್ರತ್ಯುತ್ತರ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ, ಇಂತಹ ಕುಡುಕ ತಂದೆ ಯಾರಿಗೂ ಸಿಗಬಾರದು ಎಂದು ಹೇಳಿಕೊಂಡಿದ್ದಾರೆ. 

Add Zee News as a Preferred Source

ಇತ್ತೀಚಿಗೆ ಮಗಳ ಕುರಿತು ಮಾದ್ಯಮದವರ ಜೊತೆ ಮಾತನಾಡಿದ ಬಾಲಕೃಷ್ಣ ಅವರು, ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು. ಎಲ್ಲರೂ ಹಣದ ಆಸೆಗೆ ಈ ರೀತಿ ಮಾಡುತ್ತಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಆಸರೆ ತಂದೆಯನ್ನೇ ದೂರವಿಟ್ಟ ಮಗಳು ಸಂಸ್ಕೃತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ ಕಿಡಿಕಾರಿದ್ದರು.

ಇದನ್ನೂ ಓದಿ:ಟಿವಿಗಿಂತ ಮೊದಲು Zee5 ನಲ್ಲಿ 'ಸ ರಿ ಗ ಮ ಪ ಫಿನಾಲೆ' ನೇರಪ್ರಸಾರ !ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ OTT ಪ್ಲಾಟ್ಫಾರ್ಮ್ ಗೆ

ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೈತ್ರಾ, ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿ ದವರಿಗಷ್ಟೇ ಗೊತ್ತು... ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು.. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆಬೆಲೆ ಕೊಡುವವರು ಮೂರ್ಖರಾಗ್ತಾರೆ.. ಎಂದು ಬರೆದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಅಲ್ಲದೆ, ಚೈತ್ರಾ ತಾಯಿಯೂ ಸಹ ಈ ವಿಚಾರವಾಗಿ ಮಾತನಾಡಿ, ನನ್ನ ಗಂಡ ನನ್ನ ಮಕ್ಕಳಿಗೆ ಎನೂ ಮಾಡಿಲ್ಲ. ದುಡಿದದ್ದೂ ಎಲ್ಲವನ್ನೂ ದೊಡ್ಡ ಮಗಳಿಗೆ ಕೋಡುತ್ತಾರೆ. ಹೇಳಿಕೊಟ್ಟು ಈ ರೀತಿ ಅವರ ಕೈಯಿಂದ ಮಾತನಾಡಿದ್ದಾರೆ. ಎಲ್ಲವೂ ನನ್ನ ಮಗಳು ಗಾಯತ್ರಿ ಯಿಂದ ಆಗುತ್ತಿದೆ.

ಇದನ್ನೂ ಓದಿ:ರೂಲ್ಸ್‌ ಬ್ರೇಕ್‌ ಮಾಡಿದ್ದಲ್ಲದೆ, ಸಂಚಾರಿ ಪೊಲೀಸ್‌ ಜೊತೆ ಸ್ಟಾರ್‌ ನಟನ ವಾಗ್ವಾದ..! ದೂರು ದಾಖಲು

ಗಾಯತ್ರಿ ಜಾಗದ ವಿಚಾರವಾಗಿ ನಾನು ಸಹಿ ಮಾಡಲಿಲ್ಲ ಎನ್ನುವ ವಿಚಾರಕ್ಕೆ ಈ ರೀತಿ ಮಾಡುತ್ತಿದ್ದಾಳೆ. ನನ್ನ ಗಂಡನಿಗೆ ಚೈತ್ರಾ ಮದುವೆ ವಿಚಾರದಲ್ಲಿ ಸಮ್ಮತಿ ಇತ್ತು. ಮದುವೆಗೆ ಅವರು ಬರಬಾರದು ಅಂತ ಕೂಡಿ ಹಾಕಿದ್ದಾರೆ. ಚೈತ್ರಾಗೆ ಅವಮಾನ ಆಗಬೇಕು ಅಂತ ಹೀಗೆ ಮಾಡುತ್ತಿದ್ದಾಳೆ ಎಂದು ಚೈತ್ರಾ ಕುಂದಾಪುರ ಅವರ ತಾಯಿ ರೋಹಿಣಿಯವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News