Bigg Boss contestant death : ಮನರಂಜನಾ ಜಗತ್ತಿನಲ್ಲಿ ಇತ್ತೀಚೆಗೆ ಸಾಲು ಸಾಲು ಸಾವುಗಳು ಸಂಭವಿಸುತ್ತಿವೆ. ಇತ್ತೀಚಿಗೆ ಒಂದು ದುರಂತ ಘಟನೆ ನಡೆದಿದೆ. 42 ವರ್ಷದ ನಟಿ ಶೆಫಾಲಿ ಜರಿವಾಲಾ ಜೂನ್ 27, 2025 ರಂದು ಹೃದಯಾಘಾತದಿಂದ ನಿಧನರಾದರು. ಈ ಘಟನೆ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ.

Bigg Boss Shefali Jariwala : ಅಷ್ಟೇ ಅಲ್ಲ, ಸಾಲು ಸಾಲು ನಟ-ನಟಿಯರು ಸಾಯುತ್ತಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಬಿಗ್ ಬಾಸ್ 13 ವಿಜೇತ ಸಿದ್ಧಾರ್ಥ್ ಶುಕ್ಲಾ ಮತ್ತು ಬಿಗ್ ಬಾಸ್ 14 ಸ್ಪರ್ಧಿ ಸೋನಾಲಿ ಫೋಗಟ್ ಕೂಡ ಅಕಾಲಿಕ ಮರಣ ಹೊಂದಿದರು. ಇದೀಗ ಈ ಘಟನೆಗಳು ಸೆಲೆಬ್ರಿಟಿ ಜೀವನದ ಒತ್ತಡ ಮತ್ತು ಆರೋಗ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಶೆಫಾಲಿ ಜರಿವಾಲಾ 2002 ರಲ್ಲಿ 'ಕಾಂತ ಲಗಾ' ಎಂಬ ಆಲ್ಬಂ ಹಾಡಿನ ಮೂಲಕ ಮುನ್ನೆಲೆಗೆ ಬಂದವರು. ಬಿಗ್ ಬಾಸ್ 13 ರಲ್ಲಿ ತಮ್ಮ ಮುಕ್ತ ಮನಸ್ಸಿನಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಶೆಫಾಲಿ ಯಾವಾಗಲೂ ತಮ್ಮ ಫಿಟ್ನೆಸ್ ಮತ್ತು ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದರು. ಆದರೆ ಹೃದಯಾಘಾತದಿಂದ ಸಾವನ್ನಪ್ಪಿರುವುದು ದೊಡ್ಡ ಆಘಾತವನ್ನುಂಟು ಮಾಡಿದೆ.
ಸಿದ್ಧಾರ್ಥ್ ಶುಕ್ಲಾ : ಬಿಗ್ ಬಾಸ್ 13 ರ ವಿಜೇತ ಸಿದ್ಧಾರ್ಥ್ ಶುಕ್ಲಾ ಸೆಪ್ಟೆಂಬರ್ 2, 2021 ರಂದು ಹೃದಯಾಘಾತದಿಂದ ನಿಧನರಾದರು. ಆ ಸಮಯದಲ್ಲಿ ಅವರಿಗೆ ಕೇವಲ 40 ವರ್ಷ ವಯಸ್ಸಾಗಿತ್ತು. 'ಬಾಲಿಕಾ ವಧು' ಮತ್ತು 'ಬ್ರೋಕನ್ ಬಟ್ ಬ್ಯೂಟಿಫುಲ್ 3' ನಂತಹ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದ ಸಿದ್ಧಾರ್ಥ್ ಅವರ ಹಠಾತ್ ನಿಧನವು ಆಘಾತಕಾರಿಯಾಗಿತ್ತು. ಬಿಗ್ ಬಾಸ್ನಲ್ಲಿ ತಮ್ಮ ನಾಯಕತ್ವ ಕೌಶಲ್ಯ ಮತ್ತು ವ್ಯಕ್ತಿತ್ವದ ಮೂಲಕ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು.
ಸೋನಾಲಿ ಫೋಗಟ್ : ಬಿಗ್ ಬಾಸ್ 14 ರ ಸ್ಪರ್ಧಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಆಗಸ್ಟ್ 23, 2023 ರಂದು ಹೃದಯಾಘಾತದಿಂದ ನಿಧನರಾದರು. ಆ ಸಮಯದಲ್ಲಿ ಅವರಿಗೆ 42 ವರ್ಷ ವಯಸ್ಸಾಗಿತ್ತು. ಸೋನಾಲಿ ತಮ್ಮ ಸರಳತೆ ಮತ್ತು ಬಲವಾದ ವ್ಯಕ್ತಿತ್ವದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು.
ಪ್ರಸ್ತುತ ಶೆಫಾಲಿ, ಸಿದ್ಧಾರ್ಥ್ ಮತ್ತು ಸೋನಾಲಿಯವರ ಸಾವುಗಳು ಮನರಂಜನಾ ಜಗತ್ತಿನಲ್ಲಿ ಒಂದು ದೊಡ್ಡ ಶೂನ್ಯವನ್ನು ಉಂಟುಮಾಡಿವೆ. ಕೆಲಸದ ನಿರಂತರ ಒತ್ತಡ, ಖ್ಯಾತಿಯ ಜವಾಬ್ದಾರಿ ಮತ್ತು ಮಾನಸಿಕ ಒತ್ತಡವು ಸೆಲೆಬ್ರಿಟಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ