)
Bigg Boss Kannada 12 : ಬಿಗ್ ಬಾಸ್ ಕನ್ನಡ ಸೀಸನ್ 12 ದಿನಕ್ಕೊಂದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದರ ನಡುವೆ ಸ್ಪರ್ಧಿಗಳ ಮಧ್ಯೆ ಸಾಕಷ್ಟು ಗೊಂದಲಗಳಿವೆ. ವೀಕೆಂಡ್ ಬರುತ್ತಿದಂತೆ ಎಲ್ಲರಿಗೂ ಖುಷಿ ಜೊತೆ ಭಯ ಮತ್ತು ಪ್ರಶ್ನೆಗಳು ಇರುತ್ತವೆ. ಇದೆಲ್ಲದಕ್ಕೆ ವಾರದ ಕೊನೆಯ ದಿನ ಸುದೀಪ್ ಅವರು ಉತ್ತರ ನೀಡಿ, ಸ್ಪರ್ಧಿಗಳ ಸರಿ ತಪ್ಪು ತಿಳಿಸಿ, ಜೊತೆಗೆ ಎಲ್ಲರನ್ನು ರಂಜಿಸೋ ಕೆಲಸ ಮಾಡುತ್ತಾರೆ. ಈ ವಾರವೂ ಇದೇ ರೀತಿ ತಮ್ಮ ಜವಾಬ್ದಾರಿ ನಿಭಾಯಿಸಿದರು. ಆದ್ರೆ, ಈ ವೇಳೆ ಕಿಚ್ಚ ತೆಗೆದುಕೊಂಡ ಒಂದು ದೊಡ್ಡ ನಿರ್ಧಾರ ಬಿಗ್ ಹೌಸ್ ಮಂದಿಗೆ ಶಾಕ್ ನೀಡಿತು.
ಹೌದು.. ಬಿಗ್ಬಾಸ್ ಸೀಸನ್-12ರ ವಾರಾಂತ್ಯದ ಕಾರ್ಯಕ್ರಮವನ್ನ ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಾರೆ. ಹಾಗೇ ಎಂದಿನಂತೆ ನಿನ್ನೆಯ ವಿಕೇಂಡ್ ಎಪಿಸೋಡ್ನಲ್ಲಿ ಮನೆಯ ಸ್ಪರ್ಧಿಗಳ ಆಟದಿಂದ ಬೇಸರ ವ್ಯಕ್ತಪಡಿಸಿದ್ದು, ಸ್ವತಃ ಸುದೀಪ್ ಅವರೆ ಸ್ಪರ್ಧಿಗಳಿಗೆ ಓಪನ್ ಚಾಲೇಂಜ್ ಹಾಕಿದ್ದಾರೆ.
ಅದು ಏನೆಂದರೆ, ಈ ವಾರ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ ಇರುವುದಿಲ್ಲ, ಎಲ್ಲರನ್ನು ನಾನೆ ನಾಮಿನೇಟ್ ಮಾಡುತ್ತಿದ್ದೇನೆ, ಇವಾಗ ನೀವು ಯಾವ ರೀತಿ ಮುಂದಿನ ವಾರವನ್ನು ಕಳೆಯುತ್ತೀರಿ ಮತ್ತು ಜನರನ್ನ ಹೇಗೆ ಮೆಚ್ಚಿಸಿ ನಾಮಿನೇಷನ್ನಿಂದ ಪಾರಾಗುತ್ತೀರಿ ಅಂತ ನೋಡೋಣಾ ಎಂದು ಕಿಚ್ಚ ಸವಾಲ್ ಎಸೆದರು.
ಈ ಹಿಂದೆ ನಾಮಿನೇಷನ್ ಮಾಡುವಾಗ ಬಿಗ್ ಬಾಸ್ ವಾರದ ಚಟುವಟಿಕೆ ನೀಡುತ್ತಿತ್ತು. ಆದರೆ, ಬಿಗ್ ಬಾಸ್ ಈ ಬಾರಿ ಯಾವುದೇ ಚಟುವಟಿಕೆ ನೀಡೋದಿಲ್ಲ ಎಂದು ಸುದೀಪ್ ಹೇಳಿದರು. ಜೊತೆಗೆ ಎಲ್ಲರನ್ನೂ ನಾಮಿನೇಟ್ ಮಾಡೋದಾಗಿ ಅವರು ಘೋಷಣೆ ಮಾಡಿಯೇ ಬಿಟ್ಟದ್ದಾರೆ.
ಹಾಗಾದರೇ ಈ ವಾರ ಸ್ಪರ್ಧಿಗಳು ಯಾವ ರೀತಿ ಆಟವಾಡುತ್ತಾರೆ. ಚಟುವಟಿಕೆಯನ್ನ ನೀಡದೆ ಸಾಮರ್ಥ್ಯವನ್ನ ನಿರ್ಧರಿಸುವುದು ಹೇಗೆ? ಈ ಎಲ್ಲ ಶಾಕಿಂಗ್ ಪ್ರಶ್ನೆಗಳಿಗೆ ಕಂಟೆಸ್ಟೇಟ್ಗಳು ಫುಲ್ ಕನ್ಫ್ಯೂಸ್ ಆಗಿದ್ದು, ಹೇಗೆ ಉತ್ತರಿಸುತ್ತಾರೆ, ಮನೆಯಲ್ಲಿ ಉಳಿಯಲು ಸ್ಪರ್ಧಿಗಳು ಏನೇನು ಸಾಹಸ ಮಾಡುತ್ತಾರೆ? ಎನ್ನುವುದು ಕಾದು ನೋಡಬೇಕು.