)
BBK 12 : ಕಿಚ್ಚ ಸುದೀಪ್ ನಿನ್ನೆಯ ಸಂಚಿಕೆಯಲ್ಲಿ ಗಿಲ್ಲಿ ನಟಗೆ ಸಖತ್ ಬೆಂಡೆತ್ತಿ ಕಿವಿಮಾತು ಹೇಳಿದ್ದಾರೆ.. ಬಿಗ್ ಬಾಸ್ ಕನ್ನಡ ಸೀಸನ್ ಗಿಲ್ಲಿ ತುಂಬಾ ಲವಲವಿಕೆಯಿಂದ ಆಗಿ ಇದ್ದು ಜನರ ಮನಸ್ಸು ಗೆದ್ದಿದ್ದಾರೆ. ಈ ಬಾರಿ ಅವರೇ ಗೆಲ್ಲೋದು ಅಂತಾನೂ ಎಂದು ಗಿಲ್ಲಿ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದರು.
ಆದ್ರೆ ಕಳೆದ ವಾರ ಮನೆಗೆ ಬಂದ ಅತಿಥಿಗಳಿಗೆ ಅವಮಾನಿಸಿ ಕೆಂಗಣ್ಣಿಗೆ ಗುರಿಯಾಗಿದ್ದರು. ಉಗ್ರಂ ಮಂಜು ಮದುವೆ ವಿಷಯ ಬಂದಾಗ ಎಷ್ಟನೇ ಮದುವೆ ಎಂದು ಕೇಳಿದರು. ಆ ಬಳಿಕ ‘ಬಿಟ್ಟಿ ತಿನ್ನೋಕೆ ಬಂದಿದ್ದೀರಿ’ ಎಂದೆಲ್ಲ ಹೇಳಿದರು.ಇದು ಮನೆಗೆ ಬಂದ ಅತಿಥಿಗಳಿಗೆ ನಿಯಂತ್ರಿಸೋಕೆ ಸಾಧ್ಯವಾಗಲೇ ಇಲ್ಲ. ಮನೆಯಲ್ಲಿ ಈ ವಾರ ಗಿಲ್ಲಿ ದೊಡ್ಡ ತಪ್ಪು ಮಾಡಿದ್ದರು ಎಂದೇ ಹೇಳಬಹುದು. ‘ಎಲ್ಲರಿಗೂ ಒಳ್ಳೆಯ ಆತಿಥ್ಯ ನೀಡಬೇಕು’ ಎಂದು ಬಿಗ್ ಬಾಸ್ ಆದೇಶವನ್ನು ನೀಡಿದ್ದರು. ಆದರೆ, ಗಿಲ್ಲಿ ನಟ ಅತಿರೇಕವಾಗಿ ವರ್ತಿಸಿ ಅತಿಥಿಯಾಗಿ ಬಂದವರಿಗೆ ಅವಮಾನ ಮಾಡಿದ್ದರು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಸಾಕಷ್ಟು ಕಿತ್ತಾಟ ನಡೆದು ಭಾರೀ ಸುದ್ದಿಯಾಗಿತ್ತು. ನಿನ್ನೆಯ ಸಂಚಿಕೆಯಲ್ಲಿ ಸುದೀಪ್ ಕಿತ್ತಾಟದ ವಿಟಿಯನ್ನು ತೋರಿಸಿ ಗಿಲ್ಲಿಗೆ ಬುದ್ಧಿವಾದ ಹೇಳಿದರು
ಇದನ್ನೂ ಓದಿ: ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಔಟ್ ಗೊತ್ತಾ?
ಗಿಲ್ಲಿಯ ವರ್ತನೆ ಬಗ್ಗೆ ವಿಕೇಂಡ್ನಲ್ಲಿ ಚರ್ಚೆ ಆಗಲಿದೆ ಎಂದು ಹಲವರು ಊಹಿಸಿದ್ದು, ಅದರಂತೆ ಸುದೀಪ್ ಗಿಲ್ಲಿ ಮಾಡಿದ ತಪ್ಪುಗಳನ್ನ ತೋರಿಸಿದರು. ಈ ಮೂಲಕ ಗಿಲ್ಲಿನ ಏನೇ ತಪ್ಪು ಎತ್ತಿ ತೋರಿಸಿದರೂ ಅದನ್ನು ಒಪ್ಪಿಕೊಂಡರು. ‘ನನ್ನದು 20 ಪರ್ಸೆಂಟ್ ಸರಿ ಇತ್ತು. 80 ಪರ್ಸೆಂಟ್ ತಪ್ಪು ಇತ್ತು’ ಎಂದು ಗಿಲ್ಲಿ ಹೇಳಿದರು. ಇನ್ನು, ಗಿಲ್ಲಿಗೆ ʼನಿಮ್ಮ ಹಾಗೂ ಕಲರ್ಸ್ ಮಧ್ಯೆ ಫೆಬ್ರವರಿಯಲ್ಲೇ ಒಪ್ಪಂದ ಆಗಿದೆ. ನೀವು ಒಳ್ಳೆಯ ಸ್ಪರ್ಧಿ ಎಂದು ಕಲರ್ಸ್ ಆಯ್ಕೆ ಮಾಡಿದೆ. ನಿಮ್ಮನ್ನು ನಿಯಂತ್ರಿಸಿ ಏನೂ ಮಾಡಲು ಸಾಧ್ಯವಿಲ್ಲ. ನೀವು ಒಳ್ಳೆಯ ಆಟ ಆಡುತ್ತಿದ್ದೀರಿ ಎಂದರೆ ವಾಹಿನಿಗೆ ನಷ್ಟ ಏನಿದೆ’ ಎಂದು ಹಳೆಯ ಸೀಸನ್ ಸ್ಪರ್ಧಿಗಳು ನಿಯಂತ್ರಿಸೋಕೆ ಬಂದಿದ್ದು ಎಂಬ ಮಾತಿದೆ. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟಿದ್ದಾರೆ.ಇಷ್ಟೇ ಅಲ್ಲದೇ ಆ ಬಳಿಕ ಗಿಲ್ಲಿಗೆ ಸುದೀಪ್ ಅವರು ಕಿವಿಮಾತು ಕೂಡ ಹೇಳಿದರು. ‘ನೀವು ಬೆಳೆದಿದ್ದು ನಾಲಿಗೆಯಿಂದ. ನಾಲಿಗೆಯಿಂದ ಇಲ್ಲಿವರೆಗೆ ಬಂದಿದ್ದೀರಿʼ ನಾಲಿಗೆಯಿಂದಲೇ ನೀವು ಹಾಳಾಗಬಹುದು. ಎಚ್ಚರಿಕೆ ಇರಲಿ. ‘ಆರಂಭದಲ್ಲಿ ನೀವು ತಪ್ಪು ಮಾಡಿದಿರಿ. ಅದನ್ನು ತಿದ್ದುಕೊಳ್ಳಬೇಕಿದೆ’ ಎಂದು ಗಿಲ್ಲಿಗೆ ಕಿವಿಮಾತು ಹೇಳಿದರು ಸುದೀಪ್. ಇದನ್ನು ತಿದ್ದಿಕೊಳ್ಳುತ್ತೇನೆ ಎಂದು ಗಿಲ್ಲಿ ಅವರು ಹೇಳಿದರು.