)
ಇತ್ತೀಚೆಗೆ ತನ್ನ ಮಾಜಿ ಪತಿ ಕಾರ್ತಿಕ್ನಿಂದ ವಿಚ್ಛೇದನ ಪಡೆದು ಎರಡನೇ ಮದುವೆಯ ಗಾಸಿಪ್ನಿಂದ ಸುದ್ದಿಯಲ್ಲಿದ್ದ ಜಾಹ್ನವಿ, ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯೂ ಆಗಿದ್ದಾರೆ. ಐದನೇ ಸ್ಪರ್ಧಿಯಾಗಿ ಸ್ಟೈಲಿಶ್ ಎಂಟ್ರಿ ನೀಡುವ ಮೂಲಕ ಜಾಹ್ನವಿ ದೊಡ್ಮನೆಗೆ ಗ್ಲಾಮರ್ ಟಚ್ ನೀಡಿದ್ದಾರೆ.
ಸುದ್ದಿ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದ ಜಾಹ್ನವಿ, `ಗಿಚ್ಚಿ ಗಿಲಿಗಿಲಿ' ಮತ್ತು `ನನ್ನಮ್ಮ ಸೂಪರ್ ಸ್ಟಾರ್' ನಂತಹ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು. `ಬಿಗ್ ಬಾಸ್' ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿದ `ಅಧಿಪತ್ರ' ಚಿತ್ರದಲ್ಲಿ ನಟಿಸುವ ಮೂಲಕ ಜಾಹ್ನವಿ ಸ್ಯಾಂಡಲ್ವುಡ್ ಗಮನ ಸೆಳೆದರು. ಜಾಹೀರಾತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಜಾಹ್ನವಿ ಇತ್ತೀಚೆಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ 'ಬಿಗ್ ಬಾಸ್' ರಿಯಾಲಿಟಿ ಶೋ ಬಗ್ಗೆ ಮಾತನಾಡಿದ್ದರು.
ಸಂದರ್ಶನದಲ್ಲಿ, ಬಿಗ್ ಬಾಸ್ ಗೆ ಹೋಗುತ್ತೀರಾ? ಎಂಬ ಪ್ರಶ್ನೆ ಕೇಳಲಾಗಿತ್ತು. "ಆ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ. ಏಕೆಂದರೆ, ಬಿಗ್ ಬಾಸ್ ಅಂದ್ರೆನೇ ಹಾಗೆ. ಯಾರು ಬರುತ್ತಾರೆ? ಯಾರು ಬರುವುದಿಲ್ಲ? ಇದು ಆಶ್ಚರ್ಯಕರ. ಹಾಗಾಗಿ ನನಗೆ ಇನ್ನೂ ಯಾವುದೇ ಕರೆಗಳು ಬಂದಿಲ್ಲ. ಅದು ಬಂದರೆ, ನಾನು ಹೋಗಲೇಬೇಕು. ಆದರೆ ಕೆಲವೊಮ್ಮೆ ನಾನು ಬಿಗ್ ಬಾಸ್ಗೆ ಹೋದರೆ ನನ್ನ ತಾಯಿ ಮತ್ತು ಮಗನನ್ನು ಹೇಗೆ ನಿರ್ವಹಿಸುತ್ತೇನೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಈ ಎಲ್ಲಾ ಗೊಂದಲಗಳ ನಡುವೆ, ನನ್ನ ತಾಯಿ ನನಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಅವಕಾಶ ಬಂದರೆ ಬಿಡಬೇಡ ಎಂದು ಅವರು ಹೇಳುತ್ತಾರೆ" ಎಂದು ನಿರೂಪಕಿ ಜಾಹ್ನವಿ ಹೇಳಿದರು.
"ನನಗೆ ಇಲ್ಲಿಯವರೆಗೆ ಯಾವುದೇ ಕರೆಗಳು ಬಂದಿಲ್ಲ. ಬಂದರೆ, ನಾನು ಇಲ್ಲದಿರುವಾಗ ನನ್ನ ತಾಯಿ ಮತ್ತು ಮಗನನ್ನು ನೋಡಿಕೊಳ್ಳಬೇಕು. ಆ ಸಣ್ಣ ಗೊಂದಲವಿದೆ. ಆದರೆ ಆ ಸಮಯದಲ್ಲಿ ಏನು ಮನಸ್ಸಿಗೆ ಬರುತ್ತದೆಯೋ ಅದನ್ನೇ ಮಾಡುತ್ತೇನೆ" ಎಂದು ಜಾನ್ವಿ ಹೇಳಿದ್ದರು.
ಇದೀಗ ಬಿಗ್ ಬಾಸ್ ಕನ್ನಡಕ್ಕೆ ಗ್ರ್ಯಾಂಡ್ ಆಗಿಯೇ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಜಾಹ್ನವಿ ತಮ್ಮ ಮಾಜಿ ಪತಿ ಕಾರ್ತಿಕ್ ಅವರಿಂದ ಡಿವೋರ್ಸ್ ಪಡೆದಿದ್ಯಾಕೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಮಾಜಿ ಪತಿ ಮತ್ತೊಂದು ಮದುವೆಯಾಗಿ ಮಗುವೊಂದು ಇದೆ. ಇದರ ವಿಚಾರವನ್ನು ಜಾಹ್ನವಿ ರಿವೀಲ್ ಮಾಡಿದ್ದಾರೆ. "ಹೌದು.. ಅವರು ಅವರ ಹೆಂಡತಿ ಮಗು ಜೊತೆ ಚೆನ್ನಾಗಿರಲಿ” ಎಂದಿದ್ದಾರೆ.
"ಬೇಜಾರಾದ್ರೂ ಕೂಡ ಅವರವರ ಜೀವನ ಅವರು ನೋಡಿಕೊಳ್ಳಲೇಬೇಕು. ಈಗ ನಾನು ಒಂಟಿಯಾಗಿಯೇ ಖುಷಿಯಾಗಿದ್ದೇನೆ. ಈಗ ನನಗೆ ಮಗ ಇದ್ದಾನೆ. ಅವರಿಗೂ ಅವರ ಜೀವನದಲ್ಲಿ ಯಾರೂ ಇಲ್ಲ, ಫ್ಯಾಮಿಲಿ ಬೇಕು ಅಂತೆನಿಸಿದಾಗ, ಮುಂದುವರೆಯುವುದರಲ್ಲಿ ತಪ್ಪಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಎರಡನೇ ಮದುವೆ ಬಗ್ಗೆಯೂ ಮಾತನಾಡಿದ್ದರು. “ಖಂಡಿತವಾಗಿಯೂ ಎರಡನೇ ಮದುವೆಯಾಗುವ ಆಲೋಚನೆ ಇಲ್ಲ. ನನಗೆ ಮೊದಲ ಮದುವೆಯಿಂದ ಒಳ್ಳೆಯ ಅನುಭವ ಆಗಿದೆ. ಹಾಗಾಗಿ ನನ್ನ ಜೀವನದಲ್ಲಿ ಮತ್ತೆ ಮದುವೆ ಇಲ್ಲವೇ ಇಲ್ಲ. ಒಂಟಿಯಾಗೇ ತುಂಬಾ ಖುಷಿಯಾಗಿದ್ದೇನೆ, ಮಗನ ಭವಿಷ್ಯ ರೂಪಿಸಬೇಕು. ಅವನಿಗೆ ಜಾಸ್ತಿ ಪ್ರೀತಿ ಮತ್ತು ಟೈಮ್ ಕೊಡಬೇಕು ಅನ್ನೋದು ಬಿಟ್ರೆ ಎರಡನೇ ಮದುವೆ ಬಗ್ಗೆ ಯೋಚನೆಯೇ ಇಲ್ಲ” ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.