ಫಿನಾಲೆ ಹತ್ತಿರ ಇರುವಾಗಲೇ ಬಿಗ್‌ ಬಾಸ್‌ಗೆ ನೋಟಿಸ್‌ ಜಾರಿ..! ಸುದೀಪ್‌ಗೆ ಎದುರಾಗುತ್ತಾ ಸಂಕಷ್ಟ..?

BBK 12 Latest updates : ಬಿಗ್ ಬಾಸ್ ಕನ್ನಡ 12 ಪ್ರೀ ಫಿನಾಲೆ ಇಂದು ರಾತ್ರಿ ನಡೆಯಲಿದೆ. ಇದರ ನಡುವೆ ಕಾರ್ಯಕ್ರಮ ಆಯೋಜಕರಿಗೆ ವಿಘ್ನ ಎದುರಾಗಿದೆ. ಅಲ್ಲದೆ, ನಾಳೆ ಫಿನಾಲೆ ಬೇರೆ ಇರುವಾಗ ಈ ರೀತಿಯ ಘಟನೆ ವೀಕ್ಷರಲ್ಲಿ ಆತಂಕ ಮೂಡಿಸಿದೆ. ಅಸಲಿಗೆ ಆಗಿದ್ದೇನು..? ಹೆಚ್ಚಿನ ಮಾಹಿತಿ ಇಲ್ಲಿದೆ.

Written by - Krishna N K | Last Updated : Jan 17, 2026, 08:15 PM IST
    • ಬಿಗ್ ಬಾಸ್ ಕನ್ನಡ 12 ಪ್ರೀ ಫಿನಾಲೆ ಇಂದು ರಾತ್ರಿ ನಡೆಯಲಿದೆ.
    • ಇದರ ನಡುವೆ ಕಾರ್ಯಕ್ರಮ ಆಯೋಜಕರಿಗೆ ವಿಘ್ನ ಎದುರಾಗಿದೆ.
    • ಈ ರೀತಿಯ ಘಟನೆ ವೀಕ್ಷರಲ್ಲಿ ಆತಂಕ ಮೂಡಿಸಿದೆ.
ಫಿನಾಲೆ ಹತ್ತಿರ ಇರುವಾಗಲೇ ಬಿಗ್‌ ಬಾಸ್‌ಗೆ ನೋಟಿಸ್‌ ಜಾರಿ..! ಸುದೀಪ್‌ಗೆ ಎದುರಾಗುತ್ತಾ ಸಂಕಷ್ಟ..?

Bigg Boss Kiccha Sudeep : ಜನವರಿ 18 ರಂದು ಅಂದ್ರೆ ನಾಳೆ ಬಿಗ್ ಬಾಸ್ ಕನ್ನಡ 12 ಗ್ರ್ಯಾಂಡ್ ಫಿನಾಲೆ ಜರುಗಲಿದೆ. ಗಿಲ್ಲಿ, ಅಶ್ವಿನಿ, ರಘು, ಧನುಷ್, ಕಾವ್ಯ ಹಾಗೂ ರಕ್ಷಿತಾ ಸೇರಿದಂತೆ ಒಟ್ಟು, 6 ಸ್ಪರ್ಧಿಗಳು ಫಿನಾಲೆ ತಲುಪಿದ್ದಾರೆ. ಈ ಸೀಸನ್‌ನ  ವಿನ್ನರ್ ಯಾರು ಆಗ್ತಾರೆ ಅಂತ ರಾಜ್ಯದ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. 

Add Zee News as a Preferred Source

ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ವೀಕೆಂಡ್ ಕಾರ್ಯಕ್ರಮದಲ್ಲಿ ಮಾತಿನ ಭರದಲ್ಲಿ ರಣಹದ್ದುಗಳನ್ನು ಉದಾರಹಣೆ ತೆಗೆದುಕೊಂಡು ಕೆಲ ಮಾತುಗಳನ್ನು ಹೇಳಿದ್ದರು. ಈ ಕುರಿತು ಅವರ ವಿರುದ್ಧ ಕೇಸ್‌ ದಾಖಲಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಆಯೋಜಕರಿಗೆ ಅರಣ್ಯ ಇಲಾಖೆ ನೋಟೀಸ್ ನೀಡಿದೆ.

ಇದನ್ನೂ ಓದಿ:ವಂಶದ ಕುಡಿ ಜೋಡಿ ಇಡೀ ಕರುನಾಡಿನ ಮನಸ್ಸು ಕದ್ದಿದ್ದ ಹೇಗೆ? ಈ ಜೋಡಿಯೇ ಟಾಪ್‌ 2 ಫಿಕ್ಸ್

ಹೌದು.. ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ಸಮಯದಲ್ಲಿ ಕಿಚ್ಚ ಸುದೀಪ್‌ ಅವರು ರಣಹದ್ದಿನ ಬಗ್ಗೆ ಹೇಳಿಕೆ ನೀಡಿದ್ದರು. ರಣಹದ್ದುಗಳು.. ಹೊಂಚು ಹಾಕಿ ಸಂಚು ರೂಪಿಸಿ ಸರಿಯಾದ ಸಮಯಕ್ಕೆ ಹಿಡಿಯುತ್ತವೆ.. ಅಂತ ಸ್ಪರ್ಧಿಗಳಿಗೆ ಹೇಳಿದ್ದರು. ಈ ವಿಚಾರಕ್ಕೆ ರಾಜ್ಯ ರಣಹದ್ದು ಸಂರಕ್ಷಣಾ ಟ್ರಸ್ಟ್‌ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ರಣಹದ್ದಿನ ಬಗ್ಗೆ ತಪ್ಪಾಗಿ ಮಾಹಿತಿ ನೀಡಲಾಗುತ್ತಿದೆ ಎಂದು ದೂರಿತ್ತು. 

ರಣಹದ್ದಿನ ಸ್ವಭಾವದ ಕುರಿತು ನಟ ಕಿಚ್ಚ ಸುದೀಪ್‌ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿದ ಟ್ರಸ್ಟ್‌, ರಣಹದ್ದುಗಳು ಸತ್ತ ಜೀವಿಗಳ ಶವ ತಿಂದು, ಸಾಂಕ್ರಾಮಿಕ ರೋಗ ಹರಡದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪರಿಸರ ಸ್ವಚ್ಛಗೊಳಿಸುತ್ತವೆ... ಆದರೆ ಲಕ್ಷಾಂತರ ಜನರು ವೀಕ್ಷಿಸುವ ಶೋನಲ್ಲಿ ಅವುಗಳ ಬಗ್ಗೆ ತಪ್ಪು ಮಾಹಿತಿ ನೀಡುವುದು ತಪ್ಪು ಎಂದು ದೂರಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಇದನ್ನೂ ಓದಿ:ಈ 4 ಮಂದಿ ಫೈನಲಿಸ್ಟ್‌ಗಳ ನಡುವೆ ನಾಳೆ ಕಪ್‌ಗಾಗಿ ಸೆಣಸಾಟ..! ಸ್ಪರ್ಧಿಗಳ ಹೆಸರು ರಿವೀಲ್‌ ಮಾಡಿದ ಬಿಗ್‌ಬಾಸ್‌

ಇದರ ಬೆನ್ನಲ್ಲೇ ಬಿಗ್‌ ಬಾಸ್‌ ಶೋ ಮುಖ್ಯಸ್ಥರಿಗೆ ಜನವರಿ 12 ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ ರಾಮಕೃಷ್ಣಪ್ಪ ಅವರು ನೋಟಿಸ್‌ ನೀಡಿದ್ದರು. ಇನ್ನು ಈ ಮುಂದಿನ ಸಂಚಿಕೆಯಲ್ಲಿ ಇದಕ್ಕೆ ಸುದೀಪ್‌ ಯಾವ ರೀತಿ ಪ್ರತಿಕ್ರಿಯೆ ನೀಡ್ತಾರಾ ಅಂತ ಕಾಯ್ದು ನೋಡಬೇಡಿಕೆ..

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News