)
BBK 12 Latest updates : ಬಿಗ್ ಬಾಸ್ 12ರ ಮನೆ ರಣಾಂಗಣವಾಗುತ್ತಿದೆ. ಪರಸ್ಪರ ಸ್ಪರ್ಧಿಗಳು ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಈ ಪೈಕಿ ಅಶ್ವಿನಿ ಮತ್ತು ಗಿಲ್ಲಿ ನಡುವಿನ ಗಲಾಟೆ ಮುಂದುವರೆಯುತ್ತಿದೆ. ಇತ್ತೀಚಿಗೆ ಟಾಸ್ಕ್ ಉಸ್ತುವಾರಿ ಹೊತ್ತಿದ್ದ ಗಿಲ್ಲಿ ಮತ್ತು ಅಶ್ವಿನಿ ವಾಕ್ ಸಮರ ನೋಡಿ ಮನೆ ಮಂದಿ ದಂಗಾಗಿದ್ದರು.
ಹೌದು.. ತಮ್ಮ ತಮ್ಮ ತಂಡಗಳ ಉಸ್ತುವಾರಿ ಮಾಡುತ್ತಿದ್ದ ಗಿಲ್ಲಿ ವಿರೋಧಿ ತಂಡದ ಕಳಪೆ ಆಟವನ್ನು ಪ್ರಶ್ನೆ ಮಾಡಿದರು. ಇದರ ನಡುವೆ ಬಂದ ಅಶ್ವಿನಿ ಅವರು ಏರು ಧ್ವನಿಯನ್ನು ಗಿಲ್ಲಿಯ ಮೇಲೆ ಮುಗಿ ಬಿದ್ದರು.. ಇದರಿಂದ ತಾಳ್ಮೆ ಕಳೆದುಕೊಂಡ ಗಿಲ್ಲಿಯೂ ಸಹ ಮಾತಿಗೆ ಮಾತು ಬೆಳೆಸಿದರು.
ಇದು ಒಂದು ಕಡೆ ಆದರೆ.. ಇನ್ನೊಂದು ವಿಚಾರ ಅಂದ್ರೆ ಧ್ರುವಂತ್ ಶರ್ಟ್.. ಹೌದು.. ಮೊದ ಮೊದಲು ಗಿಲ್ಲಿ ನಟ ಬಿಗ್ ಬಾಸ್ ಮನೆಗೆ ಬಂದಾಗ ಊರಿಂದ ಬಟ್ಟೆ ಕಳಿಸಿಲ್ಲ ಅಂತ ಧ್ರುವಂತ್ ಹತ್ತಿರ ಶರ್ಟ್ ಕೇಳಿದ್ದನಂತೆ. ಅವರೂ ಸಹ ಪ್ರಿಂಟೆಡ್ ಅಂಗಿಯನ್ನು ನೀಡಿದ್ದರಂತೆ.. ಕಿಚ್ಚ ಸುದೀಪ್ ಸ್ಪರ್ಧಿಗಳ ಈ ನಡೆಯನ್ನು ಮೆಚ್ಚಿದ್ದರು.
ಹಾಕಿಕೊಳ್ಳುವ ವರೆಗೆ ಹಾಕಿಕೊಂಡು ಅದನ್ನು ವಾಶ್ ಮಾಡಿ ಮತ್ತೆ ನೀಡದೇ ಗಿಲ್ಲಿ ಕೊಳೆಯಾದ ಸ್ಥಳದಲ್ಲಿ ಎಸೆದಿದ್ದರಂತೆ.. ಇದನ್ನು ನೋಡಿ ಧ್ರುವಂತ್ಗೆ ಬೇಸರವಾಗಿದೆ. ಅಲ್ಲದೆ, ಸ್ವಂತ ದುಡಿಮೆಯಲ್ಲಿ ಖರೀದಿ ಮಾಡಿದ ಅಂಗಿಯನ್ನು ಹಾಗೆ ಎಸೆದಿದ್ದು ನನಗೆ ಬೇಸರ ತಂದಿದೆ ಎಂದು ಧ್ರುವಂತ್ ಹೇಳಿಕೊಂಡಿದ್ದರು.
ಇದೇ ವಿಚಾರವಾಗಿ ಮಾತನಾಡಿದ ಅಶ್ವಿನಿ ಗೌಡ.. ಗಿಲ್ಲಿ ನಟ ನನ್ನ ಟೀ ಶರ್ಟ್ ತೆಗೆದುಕೊಂಡು ಬಳಸಿ ಅದನ್ನು ವಾಶ್ ಸಹ ಮಾಡಿಲ್ಲ. ಇಂದಿಗೂ ಅದು ಟೆರೆಟ್ನಲ್ಲಿ ಹಾಗೆಯೇ ಬಿದ್ದಿದೆ.. ನಾವು ಕೊಟ್ಟ ವಸ್ತುಗಳ ಬಗ್ಗೆ ಅವನಿಗೆ ಕಿಂಚಿತ್ತೂ ಕೃತಜ್ಞತೆ ಭಾವನೆ ಇಲ್ಲ ಅಂತ ಬೇಸರ ವ್ಯಕ್ತಪಡಿಸಿದರು.
ಶಾಕಿಂಗ್ ಅಂದ್ರೆ, ಈ ವಿಚಾರ ಗಿಲ್ಲಿ ಕಿವಿಗೆ ಬಿದ್ದರೂ ಸಹ ಏನೂ ಮಾತನಾಡಿಲ್ಲ.. ಎಲ್ಲದಕ್ಕೂ ಟಕ್ ಟಕ್ ಅಂತ ಉತ್ತರ ನೀಡುವರು ಗಪ್ ಚುಪ್ ಆಗಿದ್ದು ನೋಡಿದ್ರೆ ತಪ್ಪನ್ನ ಒಪ್ಪಿಕೊಂಡಂತೆ ಇತ್ತು. ಒಟ್ಟಿನಲ್ಲಿ ಇಷ್ಟು ದಿನ ಮನೆ ಕೆಲಸ ಮಾಡದೆ ಕಳ್ಳಾಟ ಮಾಡುತ್ತಿದ್ದ ಗಿಲ್ಲಿನ ಇನ್ನೊಂದು ಮುಖ ಇದೀಗ ಬಯಲಾದಂತಿದೆ..