)
Bigg Boss kannada season 12 contestants : ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಕನ್ನಡಿಗರೂ ಕಾರ್ಯಕ್ರಮದ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕಲರ್ಸ್ ಕನ್ನಡ ಜನಪ್ರಿಯ ರಿಯಾಲಿಟಿ ಶೋ.
ಬಿಗ್ ಬಾಸ್ ಕನ್ನಡ ಸೀಸನ್ 12 ರ ಗ್ರ್ಯಾಂಡ್ ಓಪನಿಂಗ್ ಇದೇ ಸೆಪ್ಟೆಂಬರ್ 28 ರಂದು ನಡೆಯಲಿದೆ. ಬಿಗ್ ಬಾಸ್ ಆರಂಭಕ್ಕೆ ಕೇವಲ ಮೂರೇ ದಿನ ಬಾಕಿಯಿರುವಾಗ ಸ್ಪರ್ಧಿಗಳ ಹೆಸರು ವೈರಲ್ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ರ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಯಾರೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಕನ್ನಡದ ಬಿಗ್ ಬಾಸ್ಗೆ ಬರುವ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಯಾರೆಲ್ಲಾ ಈ ಬಾರಿ ಬಿಗ್ಬಾಸ್ಗೆ ಬರುವ ಸಾಧ್ಯತೆ ಇದೆ ನೋಡೋಣ. ಸಂಭಾವ್ಯ ಪಟ್ಟಿ ಇಲ್ಲಿದೆ.
ಧನುಷ್
ಗೀತಾ ಧಾರಾವಾಹಿಯ ನಾಯಕ ನಟ ಧನುಷ್ ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಪ್ರಿಯಾ ಸವದಿ
ಉತ್ತರ ಕರ್ನಾಟಕ ಪ್ರತಿಭೆ ಪ್ರಿಯಾ ಸವದಿ ಯೂಟೂಬ್ ಶಾರ್ಟ್ ಫಿಲ್ಮ್ಸ್ ಮೂಲಕ ಫೇಮಸ್ ಆದವರು. ಈ ಬಾರಿ ಬಿಗ್ ಬಾಸ್ ಗೆ ಬರೋದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಸೂರಜ್
ಕಾಮಿಡಿ ಶೋಗಳ ಮೂಲಕ ಗಮನ ಸೆಳೆದ ಸೂರಜ್ ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆದವರು. ಈ ಬಾರಿ ಬಿಗ್ ಬಾಸ್ ಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಸ್ಪಂದನಾ ಸೋಮಣ್ಣ
ಕನ್ನಡ ಮತ್ತು ತೆಲುಗು ಸಿನಿಮಾ ರಂಗದ ನಟಿ ಸ್ಪಂದನಾ ಸೋಮಣ್ಣ ‘ನಾನು ನನ್ನ ಕನಸು' ಮೂಲಕ ಖ್ಯಾತರಾದರು. ಈ ಬಾರಿ ಬಿಗ್ ಬಾಸ್ ಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಸತೀಶ್
ದುಬಾರಿ ಶ್ವಾನಗಳನ್ನು ಸಾಕಿ ಫೇಮಸ್ ಆಗಿರುವ ಸತೀಶ್ ಈ ಬಾರಿ ಬಿಗ್ ಬಾಸ್ಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
ನಟ ಸಾಗರ್
ಸತ್ಯ ಸೀರಿಯಲ್ ಹೀರೋ ನಟ ಸಾಗರ್ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಬರಬಹುದು ಎನ್ನಲಾಗುತ್ತಿದೆ.
ಶ್ವೇತಾ ಪ್ರಸಾದ್
ಕಿರುತೆರೆ ನಟಿ ಶ್ವೇತಾ ಪ್ರಸಾದ್ ಕೂಡ ಈ ಸಲ ಬಿಗ್ ಬಾಸ್ ಸ್ಪರ್ಧಿ ಆಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಹಾಸ್ಯ ನಟ ಕೆಂಪೇಗೌಡ
ನಟ ಕೆಂಪೇಗೌಡ ಬಿಗ್ ಬಾಸ್ ಮನೆಗೆ ಹೋಗೋದು ಕನ್ಫರ್ಮ್ ಎನ್ನಲಾಗುತ್ತಿದೆ. ಈ ಹಾಸ್ಯ ನಟ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ.