ಬಿಗ್ ಬಾಸ್ ಕನ್ನಡ ಸೀಸನ್ 12 ಮೂರನೇ ವಾರದ ಅಂತಿಮ ಘಟ್ಟದಲ್ಲಿದೆ. ಒಂದು ದೊಡ್ಡ ಎಲಿಮಿನೇಷನ್ ಇರಲಿದೆ. ದೊಡ್ಡ ಎಲಿಮಿನೇಷನ್ ಬದಲಿಗೆ ಒಂದು ಬ್ಯಾಚ್ ವೈಲ್ಡ್ ಕಾರ್ಡ್ ಎಂಟ್ರಿಗೆ ಸಿದ್ಧವಾಗಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದರು.
ವಾರಾಂತ್ಯದಲ್ಲಿ ಎಲಿಮಿನೇಷನ್ ನಡೆಯಲಿದೆ. ಅದಕ್ಕೂ ಮೊದಲು, ವಾರದ ಮಧ್ಯದ ಎಲಿಮಿನೇಷನ್ ಆಗಬಹುದು ಎಂದು ಹೇಳಲಾಗಿತ್ತು. ಬಿಗ್ ಬಾಸ್ ಇದನ್ನು ಮೊದಲೇ ಹೇಳಿದ್ದಂತೆ, ಈಗ ಸತೀಶ್ ಔಟ್ ಆಗಿದ್ದಾರೆ.
"ನಾನು ಬಿಗ್ ಬಾಸ್ ಶೋಗೆ ಬಂದರೆ, ಅದು ಪ್ರಪಂಚದಾದ್ಯಂತ ಸುದ್ದಿಯಾಗುತ್ತದೆ" ಎಂದಿದ್ದರು ಸತೀಶ್. ಆದರೆ ಈಗ ಎಲ್ಲ ಉಲ್ಟಾ ಆಗಿದೆ. "ಬಿಗ್ ಬಾಸ್ ಶೋ ಗೆಲ್ಲೋದು ನಾನೇ, ಆದರೆ ಇದನ್ನು ಮೊದಲೇ ಹೇಳಿದರೆ ಮುಜುಗರವಾಗುತ್ತದೆ ಎಂದು ಸುಮ್ಮನ್ನಿದ್ದೆ" ಎಂದು ಸತೀಶ್ ಹೇಳಿದ್ದರು. ಈಗ ಅವರು ಮೂರನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ.
"ನನ್ನ ಬಳಿ ನೂರು ಕೋಟಿ ರೂಪಾಯಿ ಮೌಲ್ಯದ ನಾಯಿ ಇದೆ" ಎಂದು ಸತೀಶ್ ಹೇಳುತ್ತಿದ್ದರು. ಇದನ್ನು ಆರ್ ಜೆ ಅಮಿತ್ " ಅವರು ಡವ್ ಮಾಡುತ್ತಿದ್ದಾರೆʼ ಎಂದು ಆರೋಪ ಮಾಡಿದ್ದರು.
ಇದನ್ನೂ ಓದಿ: KBC 17: 'ಮಹಾಭಾರತ' ಬಗ್ಗೆ ನಿಮ್ಗೆ ಗೊತ್ತೆ..? ಹಾಗಿದ್ರೆ 12.50 ಲಕ್ಷ ಮೌಲ್ಯದ ಈ ಪ್ರಶ್ನೆಗೆ ಉತ್ತರ ನೀಡಿ ನೋಡೋಣ..









