)
Bigg Boss Kannada Season 12 : ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಾರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆ ಹೇಗಿರಲಿದೆ ಎಂಬುದಕ್ಕೆ ಉತ್ತರ ದೊರಕಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಯಾರೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ. ಮನೆಯ ಒಳಗೆ ಯಾರ್ಯಾರು ಹೋಗಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ನಿನ್ನೆ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬರು ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದು ಸಾರ್ವಜನಿಕರ ಬಳಿ ಹೋಗುವ ವಿಡಿಯೋವನ್ನು ಕಲರ್ಸ್ ಕನ್ನಡ ತನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ಬಿಗ್ ಬಾಸ್ ಮನೆ ಪ್ರತಿ ಸೀಸನ್ನಲ್ಲೂ ವಿಭಿನ್ನವಾಗಿರುತ್ತದೆ. ಐಷಾರಾಮಿಯಾದ ಕಲರ್ ಫುಲ್ ಮನೆಯನ್ನು ನಿರ್ಮಾಣ ಮಾಡಲಾಗುತ್ತದೆ. ಕಳೆದ ಬಾರಿ ಬೆಂಗಳೂರಿನ ಹೊರಭಾಗದ ಖಾಸಗಿ ಜಾಗದಲ್ಲಿ ಬಿಗ್ ಬಾಸ್ ಮನೆ ನಿರ್ಮಿಸಲಾಗಿತ್ತು. ಇದರಿಂದಾಗಿ ಬಿಗ್ ಬಾಸ್ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯ್ತು, ಸ್ಥಳೀಯ ಆಡಳಿತದವರು ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆ ಬಿಗ್ ಬಾಸ್ ಮನೆಯನ್ನು ಈ ಬಾರಿ ಇನ್ನೋವೇಟಿವ್ ಫಿಲಂ ಸಿಟಿಗೆ ಶಿಫ್ಟ್ ಮಾಡಲಾಗಿತ್ತು.
ಪ್ರತಿ ಬಾರಿಯ ಮನೆಗಿಂತ ಈ ಬಾರಿಯ ಮನೆ ಸಾಕಷ್ಟು ವಿಭಿನ್ನವಾಗಿದೆ. ಕರುನಾಡ ವೈಭವ ಸಾರುವ ಭವ್ಯ ಬಂಗಲೆಯನ್ನೇ ನಿರ್ಮಿಸಲಾಗಿದೆ. ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯನ್ನು ಪ್ರೇಕ್ಷಕರಿಗೆ ರಿವೀಲ್ ಮಾಡಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆ ಇಡೀ ಕರ್ನಾಟಕವನ್ನು ಪ್ರತಿಬಿಂಬಿಸುತ್ತಿದೆ.
ಮೈಸೂರು ಅರಮನೆ, ದಸರಾ, ಹೊಯ್ಸಳ, ಬೇಲೂರು ಹಳೆಬೀಡಿನ ಶಿಲ್ಪಗಳು, ಯಕ್ಷಗಾನ, ಭರತ ನಾಟ್ಯ, ಡೊಳ್ಳು ಕುಣಿತ ಹೀಗೆ ಕರ್ನಾಟಕದ ಅನೇಕ ಸಂಸ್ಕೃತಿಯ ಸಾರವನ್ನು ಬಿಗ್ ಬಾಸ್ ಮನೆಯಲ್ಲಿ ತೋರಿಸಲಾಗಿದೆ. ಕರ್ನಾಟಕದ ಸಂಸ್ಕೃತಿಕ ವೈಭವವನ್ನು ನೆನಪಿಸುವ ಚಿತ್ರಗಳನ್ನು ರಚಿಸಲಾಗಿದೆ.
ಪ್ರೋಮೊದಲ್ಲಿ ಮಾತನಾಡಿರುವ ಸುದೀಪ್, ‘ಅರಮನೆಯನ್ನು ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ನಡೆದು ಹೋಗಿವೆ. ಆದರೆ ಈ ಅರಮನೆಯಲ್ಲಿ ಉಳಿದುಕೊಳ್ಳಲು ಯುದ್ಧಗಳೇ ನಡೆಯಲಿವೆ’ ಎಂದಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆ ನಿರ್ಮಾಣಕ್ಕೆ ಸುಮಾರು 2 - 2.5 ಕೋಟಿ ರೂಪಾಯಿ ಹಣ ಖರ್ಚಾಗಿರಬಹುದು ಎಂದು ಅಂದಾಜಿಸಬಹುದು. ಇದರಲ್ಲಿ ಕೆಲಸಗಾರರ ಸಂಬಳವೂ ಸೇರಿಎಬಹುದು.