)
Bigg Boss Kannada: ಈ ವಾರ ಬಿಗ್ಬಾಸ್ ಮನೆ ಸಂಪೂರ್ಣವಾಗಿ ಬಿಬಿ ಕಾಲೇಜು ಮತ್ತು ಬಿಬಿ ಹಾಸ್ಟೇಲ್ ಆಗಿ ಬದಲಾಗಿತ್ತು. ಕ್ಯಾಪ್ಟನ್ ರಘು ಅವರಿಗೆ ಕಾಲೇಜಿನ ಪ್ರಿನ್ಸಿಪಾಲ್ ಪವರ್ ನೀಡಲಾಗಿತ್ತು. ಇನ್ನುಳಿದ ಎಲ್ಲಾ ಸ್ಪರ್ಧಿಗಳು ವಿದ್ಯಾರ್ಥಿಗಳಾಗಿ ಆಟದಲ್ಲಿ ಪಾಲ್ಗೋಂಡಿದ್ದರು. ಈ ವಾರ ಟಾಸ್ಕ್ನ ಆರಂಭದಲ್ಲೇ ಕಂಟಸ್ಟಂಟ್ಗಳ ಮಧ್ಯ ಬಿನ್ನಾಭಿಪ್ರಾಯಗಳು ಮೂಡಿ ಕೆಲವರ ನಡುವೆ ಜಗಳಕ್ಕೆ ಕಾರಣವಾಯಿತು. ಇದೆಲ್ಲದರ ನಡುವೆಯೇ ಕೆಲವರು ತಮ್ಮ ಆಟವನ್ನು ಚೆನ್ನಾಗಿ ಆಡಿದ್ದಲ್ಲದೇ, ಮನರಂಜನೆಯನ್ನೂ ನೀಡಿದ್ದಾರೆ.. ಹಾಗಾಗಿ ಇಂದಿನ ವೀಕೆಂಡ್ ಸಂಚಿಕೆಯು ಬಹಳ ಕುತೂಹಲ ಮೂಡಿಸಿದೆ. ಕಳೆದ ವಾರ ಸ್ಪರ್ಧಿಗಳ ಕಳಪೆ ಆಟದಿಂದ ಕಿಚ್ಚನ ಚಪ್ಪಾಳೆ ಯಾರಿಗೂ ಸಿಕ್ಕಿರಲಿಲ್ಲ. ಈ ವಾರ ಯಾರಿಗೆ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ..
ಈ ವಾರ ಬಿಗ್ಬಾಸ್ ಸ್ಪರ್ಧಿಗಳನ್ನು ಎರಡು ತಂಡಗಳನ್ನಾಗಿ ಮಾಡಲಾಗಿತ್ತು. ಆ ತಂಡಗಳಿಗೆ ನೀಲಿ ಮತ್ತು ಕೆಂಪು ಬಣ್ಣದ ಹೆಸರು ನಿಡಲಾಗಿತ್ತು. ಈ ಎರಡು ಗುಂಪುಗಳ ಜಟಾಪಟಿಯ ಮಧ್ಯದಲ್ಲಿ ಅಂತಿಮವಾಗಿ ನೀಲಿ ತಂಡದ ಧನುಷ್ ಕ್ಯಾಪ್ಟನ್ ಪಟ್ಟಕ್ಕೆರಿದ್ದಾರೆ. ಆದರೆ ಧ್ರುವಂತ್ ಕಳಪೆ ಹಣೆಪಟ್ಟಿ ತೆಗೆದುಕೊಂಡು ಜೈಲು ಸೇರಿದ್ದಾರೆ.. ಈ ಬಿಬಿ ಕಾಲೇಜಿನ ಪೇಸ್ಟೀವಲ್ಗೆ ಭಾಗ್ಯಲಕ್ಷ್ಮೀ ಸೀರಿಯಲ್ನ ಭಾಗ್ಯ ಮತ್ತು ಪ್ರೇಮಕಾವ್ಯದ ಪ್ರೇಮಾ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ನಿರ್ಣಾಯಕರಾಗಿದ್ದರು. ಸ್ಪರ್ಧಿಗಳ ಡ್ಯಾನ್ಸ್ ಕಾಂಪಿಟೇಷನ್ ನಡೆಸಿ ನಂತರ ಬಿಗ್ಬಾಸ್ ಮನೆಯಿಂದ ಬಿಳ್ಕೋಡಲಾಯಿತು.
ಇನ್ನು ನಾಮಿನೇಷನ್ ವಿಚಾರಕ್ಕೆ ಬಂದರೇ.. ಮನೆಯಿಂದ ಈ ವಾರ ಹೊರ ಹೋಗಲು ರಾಶಿಕಾ, ರಿಷಾ ಗೌಡ, ಅಶ್ವಿನಿ ಗೌಡ, ಧ್ರುವಂತ್, ಧನುಷ್, ಗಿಲ್ಲಿ ನಟ, ಮಾಳು ನಿಪನಾಳ ಮತ್ತು ಮಲ್ಲಮ್ಮ ಇವರೆಲ್ಲರು ನಾಮಿನೇಟ್ ಆಗಿದ್ದಾರೆ. ಹಿಂದಿನ ವಾರ ವೋಟಿಂಗ್ ಲೈನ್ ಓಪನ್ ಇಲ್ಲದ ಕಾರಣ ಯಾರು ಮನೆಯಿಂದ ಹೂರ ಹೋಗಲ್ಲಿಲ್ಲ. ಹಾಗಾಗಿ ಈ ವೀಕೆಂಡ್ನಲ್ಲಿ ಒಬ್ಬರು ಮನೆಯಿಂದ ಔಟ್ ಆಗೋದು ಕನ್ಫರ್ಮ್ ಎನ್ನಲಾಗಿದೆ.. ಇಡೀ ವಾರದ ಒಂದು ಸಣ್ಣ ಝಲಕ್ನ್ನು ಪ್ರೋಮೋದ ಮೂಲಕ ತೋರಿಸಿದ್ದಾರೆ. ಇದನ್ನು ನೋಡಿದ ವೀಕ್ಷಕರು ಕಾಮೆಂಟ್ ಮೂಲಕ ಯಾರು ಹೊರಹೋಗಬಹುದು ಎನ್ನುವುದಕ್ಕೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಈ ಭಾರಿ ಕೆಲವರಿಗೆ ಆಟ ಆಡಲು ಅವಕಾಶ ಸಿಗದಿರುವ ಕಾರಣ ಅಥವಾ ಮನೆಗೆ ತಮ್ಮ ಕೊಡುಗೆ ಕಡಿಮೆ ಇರುವ ಕಾರಣಕ್ಕೆ ಈ ಸ್ಪರ್ಧಿಗಳು ಹೊರಬಹುದು ಎನ್ನಲಾಗುತ್ತದೆ. ಅದರಲ್ಲಿ ಮಲ್ಲಮ್ಮ ಹೋಗಬಹುದು ಎನ್ನಲಾಗುತ್ತದೆ.. ಆದರೆ ಮತ್ತೊಂದೆಡೆ ರಾಶಿಕಾ ಮತ್ತು ರಿಷಾ ಹೋದ್ರೆ ಒಳ್ಳೆಯದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ರಾಶಿಕಾ ಹೋಗಬೇಕು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ಗಳು ಹರಿದಾಡುತ್ತಿವೆ. ಇನ್ನೂ ಕೆಲವರು ರಘು ಅವರ ಕ್ಯಾಪ್ಟನ್ಸಿ ಚೆನ್ನಾಗಿತ್ತು ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಕೊಡಬೇಕು. ಇನ್ನೂ ಗಿಲ್ಲಿ, ಕಾವ್ಯಾ ಆಂಡ್ ರಕ್ಷಿತಾ ಸಖತ್ ಆಗಿ ಆಟ ಆಡಿದ್ದಾರೆ.. ಅಲ್ಲದೇ ಮನೆಯಲ್ಲಿ ಸೈಲೆಂಟ್ ಆಗಿರೋ ಮಾಳು ಸಹ ಹೋಗಬೇಕು ಎನ್ನಲಾಗುತ್ತಿದೆ. ಜೊತೆಗೆ ಮನೆಯಿಂದ ಹೊರ ಬರಬಹುದಾದ ಎಲ್ಲ ಸಾಧ್ಯತೆಗಳಿರೋದು ಕಂಟೆಸ್ಟೆಂಟ್ ಧ್ರುವಂತ್ ಎನ್ನಲಾಗುತ್ತಿದೆ. ಏಕೆಂದರೆ ಅವರ ಆಟದ ಬಗ್ಗೆ ವೀಕ್ಷಕರಿಗೆ ಬೇಸರವುಂಟಾಗಿದ್ದು, ಮನೆಯ ವಾತಾವರ್ಣಕ್ಕೆ ಹೊಂದಿಕೊಂಡಿಲ್ಲ ಎಂದು ನೆಟಿಗರು ಕಾಮೆಂಟ್ ಹಾಕುತ್ತಿದ್ದಾರೆ.
ಸದ್ಯ ಪ್ರೇಕ್ಷಕರ ಅಭಿಪ್ರಾಯದಂತೆ ಈ ವಾರ ರಾಶಿಕಾ ಮನಯಿಂದ ಆಚೆ ಹೋಗಬೇಕು.. ಕಿಚ್ಚನ ಚಪ್ಪಾಳೆ ರಘು ಅವರಿಗೆ ಸಿಗಬೇಕು. ಹಾಗೇ ಮಲ್ಲಮ್ಮ ಮತ್ತು ಮಾಳು ಇಬ್ಬರ ಆಟ ಕಾಣಸ್ತಾಯಿಲ್ಲ ಅವರಿಂದ ಯಾವ ಪ್ರಯೋಜನವು ಇಲ್ಲ ಎಂದು ವೀಕ್ಷಕರು ಸೋಶಿಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದೆ..