)
BBK 12: ಕನ್ನಡ ಬಿಗ್ಬಾಸ್ನ ಇಂದಿನ ಕಿಚ್ಚನ ಪಂಚಾಯಿತಿ ಸಂಚಿಕೆಯಲ್ಲಿ ಅಶ್ವಿನಿಗೌಡಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾದ ಅಶ್ವಿನಿ ಗೌಡ ಈ ವಾರ ಆರಂಭದಲ್ಲೇ ಮೈಂಡ್ಗೇಮ್ ಆರಂಭಿಸಿ ಮನೆಯಲ್ಲಿ ಹೈಡ್ರಾಮಾ ಸೃಷ್ಟಿಸಿದ್ದರು. ಈ ಎಲ್ಲಾ ಹೈಡ್ರಾಮಾಕ್ಕೆ ಸುದೀಪ್ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಗೆ ಸಂಬಂಧಪಟ್ಟ ಪ್ರೋಮೋವೊಂದನ್ನ ಬಿಟ್ಟಿದೆ. ಆ ಪ್ರೋಮೋದಲ್ಲಿ ಅಶ್ವಿನಿ ಗೌಡ ವಿರುದ್ಧ ಸುದೀಪ್ ಗರಂ ಆಗಿರುವುದು ಕಂಡುಬಂದಿದೆ.
ದೊಡ್ಮನೆಯಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲವೆಂಬ ಆರೋಪವನ್ನ ಅಶ್ವಿನಿ ಮಾಡುತ್ತಿದ್ದಾರೆ. ಬೇರೆಯವರಿಗೆ ಏಕವಚನದಲ್ಲಿ ಮಾತನಾಡುವ ಅವರು, ತಮಗೆ ಮಾತ್ರ ಗೌರವ ಬೇಕು ಎಂದು ನಿರೀಕ್ಷೆ ಮಾಡ್ತಿದ್ದಾರೆ. ಈ ಬಗ್ಗೆ ಸುದೀಪ್ ಅವರು ವೀಕೆಂಡ್ನಲ್ಲಿ ಮಾತನಾಡಿದ್ದಾರೆ. ‘ಗೌರವ ನಿರೀಕ್ಷೆ ಮಾಡುವ ನೀವು ಪ್ರತಿಯೊಬ್ಬರಿಗೂ ಗೌರವ ಕೊಡೋದು ಕಲಿಯಿರಿ. ಈ ಮನೆಯಲ್ಲಿ ವುಮನ್ ಕಾರ್ಡ್ ಪ್ಲೇ ಮಾಡಬೇಡಿ’ ಅಂತಾ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೌದು, ರಘು ಹಾಗೂ ಅಶ್ವಿನಿ ನಡುವೆ ನಡೆದ ಗಲಾಟೆ ಬಳಿಕ ಬಿಗ್ ಬಾಸ್ ಮನೆಯ ಕದತಟ್ಟಿ ಹೈಡ್ರಾಮಾ ಸೃಷ್ಟಿಸಿದರು. ಇದೆಲ್ಲಾ ಆದ ಬಳಿಕ ರಘು ತನ್ನ ಬಳಿ ಕ್ಷಮೆ ಕೇಳಬೇಕು ಅಂತಾ ಮೊಂಡು ಹಠಹಿಡಿದು ಉಪವಾಸದ ಮೊರೆ ಹೋಗಿದ್ದರು. ಬಿಗ್ ಬಾಸ್ ಮನೆಯಲ್ಲಿನ ಅಶ್ವಿನಿಗೌಡರ ಈ ನಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸುದೀಪ್ ಏನು ಮಾತನಾಡಬಹುದು? ಈ ಬಾರಿ ಅಶ್ವಿನಿಗೌಡಗೆ ಕ್ಲಾಸ್ ತಪ್ಪಿದ್ದಲ್ಲ ಅಂತಾ ಅಂದುಕೊಂಡವರಿಗೆ ಕಲರ್ಸ್ ಕನ್ನಡ ವಾಹಿನಿ ಬಿಟ್ಟ ಪ್ರೋಮೋ ಇದೀಗ ತೀವ್ರ ಕುತೂಹಲ ಮೂಡಿಸಿದೆ.
ಸದ್ಯ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿಗೌಡ ಏನೇ ಮಾಡಿದ್ರೂ ಸುದೀಪ್ ಪ್ರಶ್ನಿಸಿಲ್ಲ. ಅದೇ ಗಿಲ್ಲಿ, ರಕ್ಷಿತಾ ಆದರೆ ಸುದೀಪ್ ಕ್ಲಾಸ್ ತೆಗೆದುಕೊಳ್ತಾರೆ ಅಂತಾ ಬಿಗ್ ಬಾಸ್ ಫ್ಯಾನ್ಸ್ ಕಾಮೆಂಟ್ಸ್ ಮೂಲಕ
ಟೀಕಿಸಿದ್ದರು. ಆದರೆ ಇವತ್ತಿನ ಸಂಚಿಕೆ ಮಾತ್ರ ಈ ಎಲ್ಲಾ ಟೀಕೆಗೆ ತೆರೆ ಎಳೆದಂತಿದೆ.