)
Chandraprabha on elimination : ಕೊನೆಯವರೆಗೂ ಇರ್ತಾರೆ ಎಂದುಕೊಂಡಿದ್ದ ಚಂದ್ರಪ್ರಭ ಕೇವಲ 6 ವಾರಗಳಲ್ಲಿ ಎಲಿಮಿನೇಟ್ ಆಗಿದ್ದಾರೆ. ಪ್ರಸ್ತುತ ಮನೆಯಿಂದ ಹೊರಬಂದ ವಿಚಾರವಾಗಿ ಮಾತನಾಡಿರುವ ಅವರು ಅಚ್ಚರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಜೊತೆಗೆ ದೊಡ್ಮನೆಯಿಂದ ಹೊರ ಬಂದ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ..
ಬಿಗ್ ಬಾಸ್ ನನ್ನಂತರವರಿಗೆ ಅಲ್ಲ, ಆದ್ದರಿಂದ ಮನೆಯಿಂದ ಹೊರ ಬರಲು ನಾನೇ ನಿರ್ಧರಿಸಿದ್ದೆ. ಅದಕ್ಕೆ ಕಾರಣ ಏನು ಅಂತ ಮುಂದೊಂದು ದಿನ ಹೇಳ್ತೇನೆ.. ಆದರೆ ಇನ್ಮುಂದೆ ನಾನು ಬಿಗ್ ಬಾಸ್ ನೋಡುವುದಿಲ್ಲ ಎಂದು ಹೇಳುವ ಮೂಲಕ ಚಂದ್ರಪ್ರಭ ಅಚ್ಚರಿ ಮೂಡಿಸಿದರು.
ಶಾಕಿಂಗ್ ಅಂದ್ರೆ ಈ ಬಾರಿಯ ಎಲಿಮಿನೇಷನ್ನಲ್ಲಿ ಚಂದ್ರಪ್ರಭ ಹಾಗೂ ಸುಧಿ ಸೇಫ್ ಆಗಿದ್ದರು. ಆದರೆ ಕಾಕ್ರೋಚ್ ವಿಶೇಷ ಅಧಿಕಾರವನ್ನು ಬಳಸಿಕೊಂಡು ಬಚಾವಾದರು. ಇದರಿಂದಾಗಿ ಚಂದ್ರಪ್ರಭ ಹೊರಬರಬೇಕಾಯಿತು. ಆದರೆ ಇದೀಗ ಬೇರೆಯದ್ದೇ ರೀತಿಯಲ್ಲಿ ರಿಯಾಕ್ಷನ್ ಕೊಟ್ಟಿದ್ದಾರೆ.
ಎಲಿಮಿನೇಟ್ ಆಗುವ ಮುನ್ನ ನಾನೇ ಮನೆ ಮೇನ್ ಡೋರ್ ಬಡಿದು ಹೊರ ಬರುವ ನಿರ್ಧಾರ ಮಾಡಿದ್ದೇ. ಏಕೆ ಅಂತ ಮುಂದಿನ ದಿನ ತಿಳಿಸುವೆ. ಆದರೆ ಒಂದು ವಿಚಾರ ಬಿಗ್ ಬಾಸ್ ನಮ್ಮಂಥವರಿಗೆ ಅಲ್ಲ.. ಇನ್ಮುಂದೆ ಯಾವತ್ತೂ ಬಿಗ್ ಬಾಸ್ ನೋಡಲ್ಲ ಎಂದರು..
ಇಷ್ಟಕ್ಕೆ ಸುಮ್ಮನಾಗದ ಚಂದ್ರಪ್ರಭ, ಬಿಗ್ ಬಾಸ್ನಲ್ಲಿ ಇಷ್ಟುದಿನ ನಾನು ಹೇಗೆ ಆಡಿದೆ ಅಂತ ನೋಡಲೂ ಸಹ ನನಗೆ ಇಷ್ಟವಿಲ್ಲ. ಆದರೆ ಬಿಗ್ ಬಾಸ್ ಸ್ಪರ್ಧೆಯಲ್ಲಿ ನಾನು ಸೋತಿರಬಹುದು ಆದರೆ, ಸತ್ತಿಲ್ಲ. ಮೆನೆಯಿಂದ ಹೊರ ಬರುವುದಕ್ಕೆ ನನ್ನದೇ ಆದ ಕೆಲವು ಕಾರಣಗಳು ಇವೆ ಮುಂದಿನ ಹೇಳುತ್ತೇನೆ ಎಂದು ಚಂದ್ರಪ್ರಭ ನೋವಿನ ಮಾತುಗಳನ್ನಾಡಿದರು.