)
Bigg Boss Kannada 12 : ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ 12 ಇಂದಿನಿಂದ ಪ್ರಸಾರವಾಗಲಿದೆ. ಸ್ಪರ್ಧಿಗಳ ವಿಚಾರವಾಗಿ ಬಹಳಷ್ಟು ಕುತೂಹಲ ಮೂಡಿಸಿದ್ದ ಈ ಶೋನ ಗ್ರ್ಯಾಂಡ್ ಓಪನಿಂಗ್ ಇಂದು ಸಂಜೆ ನಡೆಯಲಿದೆ. ಮೊದಲನೇ ಸ್ಪರ್ಧಿಯಾಗಿ ನಟ ಸುಧೀ, ಎರಡನೇ ಸ್ಪರ್ಧಿಯಾ ಮಂಜು ಭಾಷಿಣಿ ಮತ್ತು ಮೂರನೇ ಸ್ಪರ್ಧಿಯಾ ಮಲ್ಲಮ್ಮ ದೊಡ್ಮನೆ ಪ್ರವೇಶ ಮಾಡಲಿದ್ದಾರೆ.
ಈಗಾಗಲೇ ಸುಧೀ ಮತ್ತು ಮಂಜು ಅವರು ಕರ್ನಾಟಕಕ್ಕೆ ಚಿರಪರಿಚಿತರಾಗಿದ್ದಾರೆ. ಆದರೆ, ಮಲ್ಲಮ್ಮ ಅವರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದ್ದ. ಅಲ್ಲದೆ, ಇವರು ಯಾವುದೇ ಸಿನಿಮಾ ಮತ್ತು ಧಾರಾವಾಹಿಯಲ್ಲಿ ನಟಿಸಿಲ್ಲ, ಬದಲಿಗೆ ತಮ್ಮ ಮಾತಿನ ಶೈಲಿ ಮೂಲಕ ಯೂಟ್ಯೂಬ್ನಲ್ಲಿ ಗಮನಸೆಳೆದಿದ್ದಾರೆ.
ಹೌದು.. ಮಲ್ಲಮ್ಮ ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಚಾನೆಲ್ ಹೊಂದಿರುವ ಇವರಿಗೆ Insta ದಲ್ಲಿ 1.69 ಲಕ್ಷ ಫಾಲೋವರ್ಸ್ ಹಾಗೂ Mallamma talks Youtube ಚಾನೆಲ್ ನಲ್ಲಿ 16 ಸಾವಿರ ಹಿಂಬಾಲಕರು ಇದ್ದಾರೆ.
ಮಲ್ಲಮ್ಮ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಇಲ್ಲಿಯೇ ನೆಲೆಸಿದ್ದಾರೆ. ಪ್ರಸ್ತುತ ತಮ್ಮ ಮಾತಿನ ಶೈಲಿಯ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದ ಇವರು ಮೂರನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆ ಪ್ರವೇಶ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ, ಈ ಇಳಿ ವಯಸ್ಸಿನಲ್ಲಿ ಇತರೆ ಸ್ಪರ್ಧಿಗಳ ಜೊತೆ ಮಲ್ಲಮ್ಮ ದೊಡ್ಮನೆಯಲ್ಲಿ ಯಾವ ರೀತಿ ಸ್ಪರ್ಧೆ ನಡೆಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಒಟ್ಟಾರೆಯಾಗಿ ಕಳೆದ ಬಾರಿ ಹನುಮಂತನಂತೆ ಮಲ್ಲಮ್ಮ ಗೆದ್ದು ಉತ್ತರ ಕರ್ನಾಟಕ ಕೀರ್ತಿ ಹೆಚ್ಚಿಸುತ್ತಾರಾ ಅಂತ ಕಾಯ್ದು ನೋಡಬೇಕಿದೆ..