ಇದು ಯಾಕೋ ಅತಿಯಾಯ್ತು..! ಹೊಸ ಡ್ರೇಸ್‌ ತೋರಿಸಲು ಬಂದ ಸ್ಪಂದನಾಗೆ ಗಿಲ್ಲಿ ಮಾಡಿದ್ದೇನು ನೋಡಿ.. ವಿಡಿಯೋ ವೈರಲ್‌

Ghilli Spandana video : ಸದಾ ಒಂದಲ್ಲ ಒಂದು ವಿಚಾರವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಸುದ್ದಿಯಲ್ಲಿರುತ್ತಾರೆ. ಇಷ್ಟು ದಿನ ಕಾವು ಕಾವು ಅಂತಿದ್ದ ಈಗ ವರಸೆ ಬದಲಾಯಿಸಿಕೊಂಡಿದ್ದಾರೆ. ಇತ್ತೀಚಿಗೆ ಬಟ್ಟೆಯನ್ನು ತೋರಿಸಲು ಬಂದ ಸ್ಪಂದನಾ ಸೋಮಣ್ಣ ಜೊತೆ ಗಿಲ್ಲಿ ತೋರಿದ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ..  

Written by - Krishna N K | Last Updated : Nov 13, 2025, 05:49 PM IST
    • ಸದಾ ಒಂದಲ್ಲ ಒಂದು ವಿಚಾರವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಸುದ್ದಿಯಲ್ಲಿರುತ್ತಾರೆ.
    • ಇಷ್ಟು ದಿನ ಕಾವು ಕಾವು ಅಂತಿದ್ದ ಈಗ ವರಸೆ ಬದಲಾಯಿಸಿಕೊಂಡಿದ್ದಾರೆ.
    • ಸ್ಪಂದನಾಗೆ ಗಿಲ್ಲಿ ಮಾಡಿದ್ದನ್ನು ನೋಡಿ ಪ್ರೇಕ್ಷಕರು ಶಾಕ್‌ಗೆ ಒಳಗಾಗಿದ್ದಾರೆ..
ಇದು ಯಾಕೋ ಅತಿಯಾಯ್ತು..! ಹೊಸ ಡ್ರೇಸ್‌ ತೋರಿಸಲು ಬಂದ ಸ್ಪಂದನಾಗೆ ಗಿಲ್ಲಿ ಮಾಡಿದ್ದೇನು ನೋಡಿ.. ವಿಡಿಯೋ ವೈರಲ್‌

Bigg Boss Ghilli Spandana video : ಬಿಗ್‌ ಬಾಸ್‌ ರಿಯಾಲಿಟಿ ಶೋ ಫಿನಾಲೆಗೆ ಹತ್ತಿರವಾಗುತ್ತಿದೆ. ಇದರಿಂದಾಗಿ ಮನೆಯಲ್ಲಿ ಟಾಸ್ಕ್‌ಗಳು ಹೆಚ್ಚಾಗುತ್ತಿವೆ. ಅಲ್ಲದೆ, ಸ್ಪರ್ಧಿಗಳ ನಡುವೆ ಪೈಪೋಟಿ ಸಹ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ನಡುವೆ ಗಿಲ್ಲಿ ತನ್ನದೇ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಿದ್ದಾನೆ.. 

Add Zee News as a Preferred Source

ಪ್ರಸ್ತುತ ಗಿಲ್ಲಿ ಮತ್ತು ಸ್ಪಂದನಾಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಆ ವಿಡಿಯೋ ಜನರು ಅಸಲಿಗೆ ಏನಾಗ್ತಿದೆ ಇಲ್ಲಿ ಅಂತ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಬಟ್ಟೆ ಹೇಗಿದೆ ಅಂತ ತೋರಿಸಲು ಬಂದ ಸ್ಪಂದನಾಗೆ ಗಿಲ್ಲಿ ಮಾಡಿದ್ದನ್ನು ನೋಡಿ ಪ್ರೇಕ್ಷಕರು ಶಾಕ್‌ಗೆ ಒಳಗಾಗಿದ್ದಾರೆ..

ಇದನ್ನೂ ಓದಿ:ಗಿಲ್ಲಿ ಅತಿಯಾದ ವರ್ತನೆ, ಲವ್‌ ಬ್ರೇಕಪ್‌ ಮಾಡಿಕೊಂಡ ಕಾವ್ಯಾ!? ಆ ಒಂದು ಮಾತಿಂದ ಮುರಿದು ಬಿತ್ತು ಸಂಬಂಧ

ಹೌದು.. ಬಿಗ್ ಬಾಸ್ 12 ಮನೆಯಲ್ಲಿ ಸ್ಪಂದನಾ ಸೈಲೆಂಟ್ ಆಗಿಯೇ ತಮ್ಮ ಆಟ ಮುಂದುವರೆಸಿದ್ದಾರೆ. ತಮ್ಮದೆಯಾದ ಸ್ಟ್ರಾಟಜಿ ಬಳಸಿಕೊಂಡು ಟಾಸ್ಕ್‌ ಗೆಲ್ಲುತ್ತಿದ್ದಾರೆ. ಸ್ಪಂದನಾ ದೊಡ್ಮನೆಯ ಗ್ಲಾಮರ್‌ ಗೊಂಬೆ ಅಂದ್ರೆ ತಪ್ಪಾಗಲ್ಲ.. ಆಗಾಗ ತಮ್ಮ ವಿಭಿನ್ನ ಲುಕ್‌ ಮೂಲಕ ಪಡ್ಡೆ ಹುಡುಗರ ಹಾರ್ಟ್‌ ಬೀಟ್‌ ಹೆಚ್ಚಿಸುತ್ತಾರೆ..

 
 
 
 

 
 
 
 
 
 
 
 
 
 
 

A post shared by Kalki King (@_gilli_kavyaz)

ಪ್ರಸ್ತುತ ವೈರಲ್‌ ಆಗುತ್ತಿರುವ ವಿಡಿಯೋ ನೋಡಿದ್ರೆ.. ಏನಾಗ್ತಿದೆ ಇಲ್ಲಿ.. ಏನ್‌ ನಡೀತಿದೆ ಅಂತ ನೀವು ಕನ್ಫ್ಯೂಸ್ ಆಗೋದು ಗ್ಯಾರಂಟಿ... ವಿಡಿಯೋದಲ್ಲಿ.. ಗಾರ್ಡನ್‌ ಏರಿಯಾದಲ್ಲಿ ರಘು ತೋಡೆಯ ಮೇಲೆ ಮಲಗಿದ್ದ ಗಿಲ್ಲಿಗೆ ಸ್ಪಂದನಾ ತನ್ನ ಹೊಸ ಬಟ್ಟೆಯನ್ನು ತೋರಿಸಲು ಬರುತ್ತಾಳೆ..

ಇದನ್ನೂ ಓದಿ:ಮೂವತ್ತಕ್ಕೂ ಹೆಚ್ಚು ಕೊಲೆ, ಜೈಲುವಾಸ! ಟೀಸರ್‌ ಮೂಲಕ ಸಂಚಲನ ಸೃಷ್ಟಿಸಿದ್ದ "ರಾಧೇಯ" ಬಿಡುಗಡೆ ಡೇಟ್‌ ಅನೌನ್ಸ್‌

ರೆಡ್‌ ತುಂಡು ಬಟ್ಟೆ ತೊಟ್ಟಿದ್ದ ಸ್ಪಂದನಾ ಸಖತ್ತಾಗಿಯೇ ಕಾಣುತ್ತಿದ್ದರು. ಇನ್ನು ಇದನ್ನು ನೋಡಿದ ಗಿಲ್ಲಿ ಆಕೆಯನ್ನು ಹತ್ತಿರ ಕಳೆದು ಕಿವಿಯಲ್ಲಿ ಏನೋ ಹೇಳಿದ್ದಾರೆ.. ಆದರೆ ಅವರ ಮಾತುಗಳು ಕೇಳಿಸಿಲ್ಲ.. ವೀಕೆಂಡ್‌ನಲ್ಲಿ ಗಿಲ್ಲಿ-ಸಂದನಾಗೆ ಏನ್‌ ಹೇಳಿದ ಅನ್ನೋದು ಬಹುಷಃ ರಿವೀಲ್‌ ಆಗಬಹುದು.. 

ಅಂದಹಾಗೆ, ಸ್ಪಂದನಾ ಕರಿಮಣಿ ಸೀರಿಯಲ್ ಮೂಲಕ ಕರುನಾಡಿನಲ್ಲಿ ಮನೆ ಮಾತಾದರು. ವಿದ್ಯಾಭ್ಯಾಸ ಮುಗಿದ ಬಳಿಕ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತ ಇದೀಗ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದಾರೆ.. ತಮ್ಮದೇಯಾದ ಶೈಲಿಯ ಆಟದ ಪ್ರದರ್ಶನ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ..

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News