Bigg Boss Kannada 12 close : ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಸಾಗುತ್ತಿದ್ದ ಬಿಗ್ ಬಾಸ್ ಸೀಸನ್ 12 ಮನೆಗೆ ರಾಮನಗರ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದ ತಂಡ ಬೀಗ ಜಡಿದಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನು ಪಡೆಯದೇ ಶೋ ನಡೆಲಾಗಿತ್ತು, ಅಲ್ಲದೆ, ಇದಕ್ಕೆ ಸಂಬಂಧಿಸಿ ಇಲಾಖೆ ಮ್ಯಾನೆಜ್ಮೆಂಟ್‌ಗೆ ನೋಟಿಸ್ ಸಹ ನೀಡಲಾಗಿತ್ತು ಎನ್ನಲಾಗಿದೆ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿದ್ದ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಡೆಟ್ ಕಂಪನಿಗೆ ಪರಿಸರ ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಅಧಿಕಾರಿಗಳು ಬೀಗ ಜಡಿದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಶ್ಮಿಕಾ-ವಿಜಯ್ ಮದುವೆಯಾದರೂ ಹೆಚ್ಚು ದಿನ ಒಟ್ಟಿಗೆ ಇರಲ್ಲ! ನಿಶ್ಚಿತಾರ್ಥ ಬೆನ್ನಲ್ಲೇ ಆಘಾತಕಾರಿ ವಿಚಾರ ಬಯಲು
ಇದೇ ಸ್ಟುಡಿಯೋದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ನಡೆಯುತ್ತಿತ್ತು. ಪ್ರಸ್ತುತ ಮನೆಯಲ್ಲಿ 17 ಮಂದಿ ಸೇರಿದಂತೆ ನೂರಾರು ತಂತ್ರಜ್ಞರು ಇದ್ದರು. ಅಲ್ಲದೆ, ಜಾಲಿವುಡ್ ಸ್ಟುಡಿಯೋ ಸರಿಯಾದ ವಿಧಾನದಲ್ಲಿ ತಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಮಾಡಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ.
ಅಲ್ಲದೆ, ಸಂಜೆ 7:30 ರ ಒಳಗೆ ಖಾಲಿ ಮಾಡುವಂತೆ ಮ್ಯಾನೇಜ್ಮೆಂಟ್‌ಗೆ ನೋಟೀಸ್ ನೀಡಿದೆ. ಇದರಿಂದ ಸೀಸನ್ 12 ಅರ್ಧಕ್ಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. 2021 ರಲ್ಲಿ ಕೋವಿಡ್ ಹಿನ್ನೆಲೆ ಬಿಗ್ ಬಾಸ್ ಶೋವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಪ್ರಸ್ತುತ ಶೋ ಕುರಿತು ಕಲರ್ಸ್ ಕನ್ನಡ ಹೆಚ್ಚಿನ ಮಾಹಿತಿ ನೀಡಬೇಕಿದೆ.









