BBK 10 : ತುಕಾಲಿ ಸಂತು ಕೇಳಿದ ಪ್ರಶ್ನೆಗೆ ನೀವು ಉತ್ತರ ಕೊಡುವಿರಾ..? ತಲೆ ಇದ್ದವರಿಗೆ ಮಾತ್ರವಂತೆ.. ನೋಡಿ
Tukali Santhosh : ತುಕಾಲಿ ಸಂತೋಷ್ ಬಿಗ್ಬಾಸ್ ಮನೆಯಲ್ಲಿ ಬರೀ ಕಾಮಿಡಿ ಮಾಡುವುದಲ್ಲ, ಪ್ರಶ್ನೆನೂ ಮಾಡ್ತಾರೆ ಗುರು. ಸಧ್ಯ ತುಕಾಲಿ ಕೇಳಿರುವ ಈ ಪ್ರಶ್ನೆಗೆ ಇಂಟಲಿಜೆಂಟ್ ಹುಡುಗ ಡ್ರೋನ್ ಪ್ರತಾಪ್ ಕೈಯಲ್ಲೇ ಉತ್ತರ ಕೊಡೊಕೆ ಆಗಿಲ್ಲ, ನಿಮ್ಮ ಕೈಯಲ್ಲಿ ಆದ್ರೆ ಒಮ್ಮೆ ಪ್ರಯತ್ನ ಮಾಡಿ ನೋಡಿ..
Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಹಾಸ್ಯ ಅಂತ ಬಂದಾಂಗ ಎಲ್ಲರಿಗೂ ತುಕಾಲಿ ಸಂತು ನೆನಪಾಗ್ತಾನೆ. ಮೊದಲು ಡ್ರೋನ್ ಪ್ರತಾಪ್ ಮೇಲೆ ಪ್ರತಾಪ ತೋರಿ ಕಿಚ್ಚನ ಕೈಯಲ್ಲಿ ಸರಿಯಾಗಿ ಉಗಿಸಿಕೊಂಡು ಸುಮ್ಮನಾಗಿದ್ದ. ಸಧ್ಯ ಮತ್ತೆ ಗೇಮ್ ಸ್ಟಾರ್ಟ್ ಮಾಡಿರುವ ಸಂತು, ಈ ಬಾರಿ ಬೇರೆಯವರ ಮೇಲೆ ಹಾಸ್ಯ ಮಾಡಿ ನಗಿಸದೇ ಚನ್ನಾಗಿಯೇ ಆಟವಾಡುತ್ತಿದ್ದಾರೆ.
ವರ್ತೂರು ಸಂತೋಷ್ ಮತ್ತು ತುಕಾಲಿ ಸಂತು ನಡುವೆ ಒಳ್ಳೆಯ ಗೆಳೆತನವಿದೆ. ಅದಕ್ಕಾಗಿ ಅವರು ಮನೆಯಲ್ಲಿ ಎಲ್ಲಿ ನೋಡಿದರೂ ಒಟ್ಟಿಗೆ ಇರುತ್ತಾರೆ. ಅಲ್ಲದೆ, ಇಬ್ಬರು ಸಹ ಆಗಾಗ ತಮ್ಮ ಹಾಸ್ಯ ಭರಿತ ಮಾತುಗಳಿಂದ ಪ್ರೇಕ್ಷಕರ ನಗುವಿಗೂ ಸಹ ಕಾರಣರಾಗಿದ್ದಾರೆ. ಒಟ್ಟಿಗೆ ಬೇರೆಯವರ ಕಾಲೇಳೆಯುತ್ತಾರೆ.
ಇದನ್ನೂ ಓದಿ: "ಎಲ್ಲರಿಗೂ ಒಳ್ಳೊಳ್ಳೆ ಫ್ರೆಂಡ್ಸ್ ಕಳುಹಿಸಿದ್ದೀರಾ. ನನಗೆ ಮಾತ್ರ ಈ ಹಾಳ್ಬಿದ್ದವನ್ನ ಕಳಿಸಿದ್ದೀರಲ್ಲ": ವಿನಯ್ ಅಸಮಧಾನ!
ಇನ್ನು ಇಷ್ಟು ದಿನ ಪ್ರತಾಪ್ಗೆ ಹೀಯಾಳಿಸಿ ಕಿಚ್ಚ್ ಸುದೀಪ್ ಅವರಿಂದ ಪಾಠ ಕಲಿತಿದ್ದ ಸಂತೋಷ್ ಮತ್ತೆ ಪ್ರತಾಪ್ ಮೇಲೆ ಹಾಸ್ಯ ಮಾಡಲು ಶುರುಮಾಡಿದ್ದಾರೆ. ಆದರೆ ಈ ಬಾರಿ ಡ್ರೋನ್ಗೆ ಹರ್ಟ್ ಮಾಡಿಲ್ಲ, ಬದಲಾಗಿ ಅವರ ಬುದ್ದಿ ಶಕ್ತಿಯನ್ನು ಪರೀಕ್ಷೆ ಮಾಡಲು ಮುಂದಾಗಿ, ಮಸ್ತ್ ಪ್ರಶ್ನೆಯೊಂದನ್ನು ಕೇಳಿದ್ದಾನೆ.
ಮೊದಲಿಗೆ ಸೈನ್ಸ್ ಇಸ್ ಡಿವೈಡೆಡ್ ಬೈ ಥ್ರೀ ಪಾರ್ಟ್ಸ್ ಅಂತ ಮಾತು ಶುರು ಮಾಡಿದ ತುಕಾಲಿ, ಪ್ರತಾಪ್ಗೆ ಒಂದು ಪ್ರಶ್ನೆ ಕೇಳ್ತೀನಿ ಹೇಳ್ತಿಯೆನೋ ಅಂತಾರೆ.. ಅದಕ್ಕೆ ಡ್ರೋನ್ ಪ್ರತಾಪ್, ಊ ಅಂತ ಒಪ್ಪಿಕೊಳ್ಳುತ್ತಾನೆ. ನಂತರ ತುಕಾಲಿ, ಒಬ್ಬ ಮನುಷ್ಯ ಒಂದು ಸೆಕೆಂಡ್ಗೆ ಒಂದು ಹೆಚ್ಚೆಯನ್ನ ಹಾಕಿದ್ರೆ, 40 ಕಿ.ಮೀ ಕ್ರಮಿಸೋಕೆ ಎಷ್ಟು ಹೊತ್ತು ಆಗುತ್ತೆ..? ಅಂತ ಪ್ರಶ್ನೆ ಕೇಳ್ತಾನೆ..
ಇದನ್ನೂ ಓದಿ:ಸ್ಯಾಂಡಲ್ವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್.. 30 ವರ್ಷ ದಾಟಿದ್ರೂ ಮದುವೆಯಾಗದ ನಟ ನಟಿಯರು ಇವರು.!
ಆಗ ವರ್ತೂರ್ ಸಂತೋಷ್ ಸಹ ಪ್ರತಾಪ್ಗೆ.. ಈ ಪ್ರಶ್ನೆಗೆ ಉತ್ತರ ಗೊತ್ತಾ ಅಥವಾ ಗೊತ್ತಿಲ್ಲ..? ಅಂತ ಕೇಳಿ ನಾನು ಉತ್ತರ ಕೊಡ್ತೀನಿ ಅಂತ, 329538 ಹೆಚ್ಚೆ ಆಗುತ್ತೆ, ನಿಂಗೆ ಇದು ತಪ್ಪು ಅನಿಸಿದ್ರೆ, ಬೇಕಾದ್ರೆ ನಡ್ಕೊಂಡು ಹೋಗಿ ಪರೀಕ್ಷೆ ಮಾಡಿ ನೋಡು ಅಂತ ನಕ್ಕು ಸಂತೋಷ ಮತ್ತು ತುಕಾಲಿ ಇಬ್ಬರು ಸೇರಿ ಪ್ರತಾಪ್ ಕಾಲೆಳೆದಿದ್ದಾರೆ. ಆಗ ಪ್ರತಾಪ್.. ಬರೀ ಇಂತವೇ.. ಅಂತ ಗೊತ್ತಿತ್ತು ನಂಗೆ ಅಂತ ನಗುತ್ತಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.