Mid week elimination : ಬಿಗ್ ಬಾಸ್ ಕನ್ನಡ ಶೋನಂತೆ ಈಗಾಗಲೇ ಬಿಗ್ ಬಾಸ್ ತೆಲುಗು ಸೀಸನ್ 9 ಅಂತಿಮ ಹಂತ ತುಲುಪಿದೆ. ಈ ವಾರವೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಿದೆ. ಮನೆಯಲ್ಲಿ 7 ಸದಸ್ಯರು ಮಾತ್ರ ಉಳಿದಿದ್ದು, ಅವರಲ್ಲಿ ಇಬ್ಬರು ಹೊರಗೆ ಹೋದರೆ, ಟಾಪ್ 5 ಯಾರೆಂದು ತಿಳಿಯುತ್ತದೆ. ಬಿಗ್ ಬಾಸ್ ಈ ವಾರ ಇಬ್ಬರನ್ನು ಹೊರಗೆ ಕಳುಹಿಸಲು ಮಿಡ್ ವೀಕ್ ಎಲಿಮಿನೇಷನ್ ಮಾಡಲಿದೆ..
ಹೌದು.. ಇಬ್ಬರು ಮನೆಯಿಂದ ಹೊರ ಹೋದರೆ, ಟಾಪ್ 5 ಯಾರು ಎಂಬುವುದು ತಿಳಿಯಲಿದೆ. ಹೀಗಾಗಲೇ ವಿಜೇತರ ವಿಷಯದಲ್ಲಿ ಮೂರು ಹೆಸರುಗಳು ಸಹ ಕೇಳಿಬರುತ್ತಿವೆ. ಪವನ್ ಕಲ್ಯಾಣ್ ಮುನ್ನಡೆಯಲ್ಲಿದ್ದರೆ, ತನುಜಾ ಮತ್ತು ಎಮ್ಯಾನುಯೆಲ್ ಕೂಡ ರೇಸ್‌ನಲ್ಲಿದ್ದಾರೆ. ಆದರೆ ಕಲ್ಯಾಣ್ ಕಪ್ ಗೆಲ್ಲುವ ಸಾಧ್ಯತೆಗಳು ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:‘ಯಜಮಾನ’ ಧಾರಾವಾಹಿಗೆ ಹೊಸ ಪಾತ್ರದಲ್ಲಿ ಯಮುನಾ ಶ್ರೀನಿಧಿ
ಈಗ, ಈ ವಾರ ಟಾಪ್ 5 ಯಾರು ಎಂದು ತಿಳಿಯಲು, ಇಬ್ಬರು ಜನರನ್ನು ಮನೆಯಿಂದ ಹೊರಗೆ ಕಳುಹಿಸಬೇಕು. ಈ ಪ್ರಕ್ರಿಯೆಯಲ್ಲಿ, ಪವನ್ ಕಲ್ಯಾಣ್ ಹೊರತುಪಡಿಸಿ, ಇತರ ಆರು ಸ್ಪರ್ಧಿಗಳು ಈ ವಾರದ ನಾಮನಿರ್ದೇಶನದಲ್ಲಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ಖಂಡಿತವಾಗಿಯೂ ನಡೆಯಲಿದೆ. ಅದಕ್ಕಾಗಿಯೇ ಬಿಗ್ ಬಾಸ್ ಗುರುವಾರ ಮಧ್ಯ ವಾರದ ಎಲಿಮಿನೇಷನ್ ಅನ್ನು ಯೋಜಿಸುತ್ತಿದೆ. .
ಮೀಡ್ ವೀಕ್ ಎಲಿಮಿನೇಷನ್‌ಗಳನ್ನು ಹೆಚ್ಚಾಗಿ ಮಧ್ಯರಾತ್ರಿ ನಡೆಯುತ್ತೆ. ಸ್ಪರ್ಧಿಗಳು ಚೆನ್ನಾಗಿ ನಿದ್ದೆ ಮಾಡುತ್ತಿರುವಾಗಲೇ ಬಿಗ್ ಬಾಸ್ ಶಾಕ್ ನೀಡುತ್ತದೆ. ಈ ಪೈಕಿ ಈ ಗುರುವಾರ ಯಾವ ಸ್ಪರ್ಧಿಗೆ ಕೊನೆಯ ದಿನವಾಗುತ್ತೆ ಅಂತ ಕಾಯ್ದು ನೋಡಬೇಕಿದೆ.









