Bigg Boss: ಬಿಗ್ಬಾಸ್ನಲ್ಲಿ ವೈಯಕ್ತಿಕ ವಿಚಾರ ಹೊಂಚಿಕೊಂಡ ಸಿರಿ: ಮದುವೆ ಬಗ್ಗೆ ಏನ್ ಹೇಳಿದ್ರು?
Bigg Boss Kannada: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಮದುವೆ ಬಗ್ಗೆ ವಿಚಾರದಿಂದ ದೂರವಿರಲು ಬಯಸುತಾರೆ. ಹಲವಾರು ಜನರು ಈ ವಿಚಾರದಲ್ಲಿ ನಿರಾಸಕ್ತಿ ತೋರಿಸುತ್ತಾರೆ. ಇಂತಹ ವಿಚಾರಗಳ ಬಗ್ಗೆ ಎಲ್ಲಿಯೂ ಹಂಚಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಈ ರೀತಿ ವಿಚಾರಗಳ ಬಗ್ಗೆ ಯಾರಾದರು ಜೊತೆ ಶೇರ್ ಮಾಡಿಕೊಳ್ಳವುದಕ್ಕೆ ಒಳ್ಳೆಯ ಬಾಂಡಿಂಗ್ ಹಾಗೂ ನಂಬಿಕೆ ಇರಬೇಕು. ಹಾಗಿದ್ದಾಗ ಮಾತ್ರ ಮನಬಿಚ್ಚಿ ಮಾತನಾಡುವುದಕ್ಕೆ ಸಾಧ್ಯ.
Bigg Boss Kannada: ಸಾಕಷ್ಟು ಜನರು ತಮ್ಮ ವೈಯಕ್ತಿಕ ವಿಚಾರವನ್ನು ಎಲ್ಲರ ಜೊತೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಸದ್ಯ ಬಿಗ್ಬಾಸ್ ಮನೆಯಲ್ಲಿ ನಟಿ ಸಿರಿ ತಮ್ಮ ಮದುವೆ ಬಗ್ಗೆ ಚರ್ಚೆ ಮಾಡಿದ್ದಾರೆ. ತಮಗೆ ಮದುವೆ ಬಗ್ಗೆ ಇರುವ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಈ ನಟಿ ಏನು ಮಾತನಾಡಿದ್ದಾರೆ? ಅವರ ಅನಿಸಿಕೆಯೇನು? ಇಲ್ಲಿದೆ ನೋಡಿ ಕಹಾನಿ...
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಮದುವೆ ಬಗ್ಗೆ ವಿಚಾರದಿಂದ ದೂರವಿರಲು ಬಯಸುತ್ತಾರೆ. ಹಲವಾರು ಜನರು ಈ ವಿಚಾರದಲ್ಲಿ ನಿರಾಸಕ್ತಿ ತೋರಿಸುತ್ತಾರೆ. ಇಂತಹ ವಿಚಾರಗಳ ಬಗ್ಗೆ ಎಲ್ಲಿಯೂ ಹಂಚಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಈ ರೀತಿ ವಿಚಾರಗಳ ಬಗ್ಗೆ ಯಾರಾದರು ಜೊತೆ ಶೇರ್ ಮಾಡಿಕೊಳ್ಳವುದಕ್ಕೆ ಒಳ್ಳೆಯ ಬಾಂಡಿಂಗ್ ಹಾಗೂ ನಂಬಿಕೆ ಇರಬೇಕು. ಹಾಗಿದ್ದಾಗ ಮಾತ್ರ ಮನಬಿಚ್ಚಿ ಮಾತನಾಡುವುದಕ್ಕೆ ಸಾಧ್ಯ.
ಬಿಗ್ಬಾಸ್ ಮನೆಯ ವಿಚಾರಕೆ ಬಂದ್ರೆ ಹಲವಾರು ಜನರು ಬೇರೆ ಬೇರೆ ಮನಸ್ಥಿತಿಯವರಾಗಿರುತ್ತಾರೆ. ಈ ಬಾರಿಯ ಬಿಗ್ಬಾಸ್ ಸೀಸನ್ 10 ಪ್ರತಿ ಸೀಸನ್ನಂತೆ ಸಹಜವಾಗಿಯೆ ಇದೆ. ಇದರಲ್ಲೂ ಹಲವರು ಕೆಲವು ಗುಂಪುಗಳಾಗಿ ಮಾಡಿಕೊಂಡಿದ್ದಾರೆ. ಕೆಲವರು ಹಾಡು ಹರಟೆಯ ಗುಂಪು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಜಗಳ ಮನಸ್ಥಾಪದಿಂದ ಶುತ್ರುಗಳಾಗುತ್ತಾರೆ. ಇನ್ನು ಕೆಲವರು ಒಂಟಿಯಾಗಿ ಯಾರ ಜೊತೆ ಬೆರೆಯದೆಯೂ ಸಹ ಇರುತ್ತಾರೆ.
ಇದನ್ನೂ ಓದಿ- ಬಿಗ್ ಬಾಸ್ ಕನ್ನಡ 10 : ದ್ವೇಷ ಮರೆತು ಒಂದಾದ ವಿನಯ್ - ಸಂಗೀತಾ.. ಸಂಗೀತಾ-ಕಾರ್ತಿಕ್ ಫೈಟ್!
ಬಿಗ್ಬಾಸ್ ಮನೆಯಲ್ಲಿ ನಟಿ ಸಿರಿ ಮೊದಲನೆಯ ವಾರ ಅಷ್ಟಾಗಿ ಟಾಸ್ಕ್ ಹಾಗೂ ಮಾತುಕತೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಎರಡನೇಯ ವಾರ ಟಾಸ್ಕ್ಗಳಲ್ಲಿ ಭಾಗವಹಿಸಿವುದರ ಜೊತೆ ಕೆಲವರ ಜೊತೆಗೆ ಮನಸ್ಸು ಬಿಚ್ಚ ಮಾತನಾಡಲು ಸಹ ಶುರುಮಾಡಿದ್ದಾರೆ. ಜಗಳ, ಮನಸ್ಥಾಪ, ಬಿನ್ನಾಭಿಪ್ರಾಯಗಳ ಮಧ್ಯೆಯು ಮನೆಯ ಸದಸ್ಯರು ಜೊತೆಗೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಸದ್ಯ ನಟಿ ಸಿರಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಬಿಗ್ಬಾಸ್ ಮನೆಯ ಮಂದಿ ಜೊತೆ ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಸಿರಿ ಮನಬಿಚ್ಚಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹಂಚಿಕೊಂಡಿದ್ದಾರೆ. ಸಿರಿ ಮದುವೆ ಬಗ್ಗೆ ಗೌರೀಶ್ ಜೊತೆಗೆ ತಮ್ಮ ಅನಿಕೆಯನ್ನು ಹೇಳಿಕೊಂಡಿದ್ದಾರೆ. ಸಿರಿ " ಜಗಳಗಳು ಬೆಳಗ್ಗೆ ಶುರುವಾಗಿ ರಾತ್ರಿಗೆ ಎಂಡ್ ಆಗಿ ಬಿಡಬೇಕು. ಆದರೆ, ಅದೇಗೆ ಆ ರೀತಿ ಅಡ್ಜೆಸ್ಟ್ ಆಗುವುದು. ನನ್ನ ಸ್ನೇಹಿತರು ಇದ್ದಾರೆ. ದಿನ ಕಳೆದಂತೆ ಅವೆಲ್ಲಾ ಕಾಮನ್ ಆಗಿ ಹೋಗುತ್ತದೆ. ನಾನು ಯಾಕೆ ಮದುವೆಯಾಗಿಲ್ಲ ಅಂದ್ರೆ, ಕಾಂಪ್ರಮೈಸ್ ಆಗಲೇಬೇಕು. ಮದುವೆಯಾಗಲಿ, ರಿಲೇಷನ್ ಶಿಪ್ ಅಂತ ಬಂದಾಗ ಕಾಂಪ್ರಮೈಸ್ ಆಗಬೇಕು. ಅದು ನಂಗೆ ಇಷ್ಟ ಇಲ್ಲ. ಸುಮ್ಮನೆ ಅವನ ಜೀವನವೂ ಹಾಳು, ನನ್ನ ಜೀವನವೂ ಹಾಳು" ಎಂದು ಮಾತನಾಡಿದ್ದಾರೆ.
ಸಿರಿಯವರ ಮಾತು ಕೇಳಿದರೆ ಇದು ಫೋಬಿಯಾ ರೀತಿಯು ಅನಿಸುತ್ತದೆ ಹಾಗೂ ಪ್ರಶ್ನೆ ರೀತಿಯು ಕಾಡುತ್ತದೆ. ಸಿರಿ ಸೀರಿಯಲ್ಗಳ ಜೊತೆಗೆ ಹಲವಾರು ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಸಾಕಷ್ಟು ವರ್ಷಗಳಿಂದ ಈ ನಟಿ ಸೀರಿಯಲ್ನಲ್ಲಿ ನಟಿಸುತ್ತಿದ್ದರು, ಈಕೆಯ ವೈಯಕ್ತಿಕ ವಿಚಾರದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ನಟಿ ಸಿರಿ ಬಿಗ್ಬಾಸ್ ಮನೆಗೆ ಬಂದ ಮೇಲೆನೆ ಅವರಿಗೆ ಇನ್ನು ಮದುವೆಯಾಗಿಲ್ಲ ಎಂಬ ವಿಷಯ ತಿಳಿದು ಬಂದಿದೆ.
ಇದನ್ನೂ ಓದಿ- Bigg Boss 10 : ಬಿಗ್ಬಾಸ್ ಮನೆಗೆ ರಕ್ಷಕ್ ಬುಲೆಟ್ ಕ್ಯಾಪ್ಟನ್
ನಟಿ ಸಿರಿ, ಸೀರಿಯಲ್ ಹಾಗೂ ಸಿನಿಮಾಗಳ ಮೂಲಕ ವಿಭಿನ್ನ ಪಾತ್ರಗಳಿಂದ ಜನರ ಮನಸ್ಸಲ್ಲಿ ಮನೆ ಮಾಡಿದ್ದಾರೆ. ಟ್ರೋಲಿಗರಿಗಂತೂ ಈಕೆ ಕಂಡ್ರೇ ತುಂಬಾನೆ ಇಷ್ಟ. ನಟಿ ಸಿರಿಗೆ ಇನ್ನು ಮದುವೆಯಾಗಿಲ್ಲ ಎಂಬ ವಿಚಾರ ತಿಳಿದು ಬಂದಿರುವುದೇ ತಡ. ಟ್ರೋಲರ್ಸ್ "ನೋಡ್ರೋ ನಮ್ಮ ನಟಿಗೆ ಇನ್ನು ಮದುವೆಯಾಗಿಲ್ಲವಂತೆ" ಎಂದು ಪಿಂಕ್ ಬಣ್ಣದ ಸೀರೆಯ ಫೋಟೋ ಹಾಕಿ, ಟ್ರೋಲ್ ಮಾಡಿದ್ದರು. ಹಲವರು ಈ ವಿಚಾರ ಕೇಳಿ ಎಂಜಾಯ್ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.