)
Bigg Boss Rakshita Shetty : ಬಹುನಿರೀಕ್ಷಿತ ಬಿಗ್ ಬಾಸ್ ಸೀಸನ್ 12 ಪ್ರಾರಂಭವಾಗಿದೆ. ಈಗಾಗಲೇ ಸ್ಪರ್ಧಿಗಳ ಹೆಸರು ಒಂದೊಂದಾಗಿ ಹೊರಗೆ ಬರುತ್ತಿದೆ. ಇದೀಗ ಅಚ್ಚರಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಮಾತಿನ ಶೈಲಿಯ ಮೂಲಕ ಗಮನ ಸೆಳೆದಿದ್ದ ಮಂಗಳೂರಿನ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ.
ಹೌದು.. ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ. ಇದರ ಬೆನ್ನಲ್ಲೇ ಕಲರ್ ಕನ್ನಡ ತನ್ನ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಸ್ಪರ್ಧಿಗಳ ಪ್ರಮೋ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.
ಮೊದಲನೇ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ ಎಂಟ್ರಿ ಕೊಡಲಿದ್ದಾರೆ. ಈ ಪೈಕಿ ಮಂಜು ಭಾಷಿಣಿ, ಮಲ್ಲಮ್ಮ ಇದೀಗ ರಕ್ಷಿತಾ ಶೆಟ್ಟಿ ದೊಡ್ಮನೆ ಪ್ರವೇಶ ಮಾಡುವುದು ಪ್ರೋಮೊಯಿಂದ ಪಕ್ಕಾ ಆಗಿದೆ. ಇಷ್ಟು ದಿನ ತಪ್ಪು ತಪ್ಪು ಕನ್ನಡ ಮಾತನಾಡುವ ಮೂಲಕ ವೈರಲ್ ಆಗಿದ್ದ ರಕ್ಷಿತಾರನ್ನ ವೇದಿಕೆ ಮೇಲೆ ನೋಡಿ ಜನ ಶಾಕ್ ಆಗಿದ್ದಾರೆ.
ಮಂಗಳೂರಿನ ಮೂಲಕ ರಕ್ಷಿತಾ ವೇದಿಕೆ ಮೇಲೆ ಸುದೀಪ್ ಜೊತೆ ಮಾತನಾಡುವ ಪ್ರೋಮೋ ಬಿಡುಗಡೆಯಾಗಿದ್ದು, ಮೊದಲ ದಿನವೇ ಕಿಚ್ಚನ ತಲೆಗೆ ಹುಳ ಬಿಟ್ಟಿದ್ದಾರೆ. ಮೀನು ಮಾಡುವ ವಿಧಾನ ಕೇಳಿದ ಅಭಿನಯ ಚಕ್ರವರ್ತಿಗೆ ಅರ್ಥವಾಗದಂತಹ ಭಾಷೆಯಲ್ಲಿ ಅರ್ಥಮಾಡಿಸಲು ಹೋಗಿದ್ದಾರೆ.
ಮೀನು ಸಾರಿಗೆ ಸಕ್ಕರೆ ಹಾಕ್ತಿತಾ ಅಂತ ಸುದೀಪ್ ಕೇಳುವ ಪ್ರಶ್ನೆಗೆ ಹೌದು ಅಂತ ತಲೆ ಆಡಿಸುವ ಮೂಲಕ ರಕ್ಷಿತಾ ಅಚ್ಚರಿ ಮೂಡಿಸಿದರು. ಅಲ್ಲದೆ, ಯಾರಾದರೂ ನೀವು ಮಾಡಿದ ಅಡುಗೆ ತಿಂದಿದ್ದಾರಾ ಅಂತ ಕಿಚ್ಚ ಕೇಳಿದ ಪ್ರಶ್ನೆಗೆ ಯಾರೂ ಇಲ್ಲ ಅಂದಾಗ ವೇದಿಕೆ ಕೆಳಗಿದ್ದ ಜನ ಬಿದ್ದು ಬಿದ್ದು ನಗ್ತಾರೆ.. ಒಟ್ಟಿನಲ್ಲಿ ಇಷ್ಟು ದಿನ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದ ರಕ್ಷಿತಾ ದೊಡ್ಮನೆ ಸೇರಿದ್ದು ನಿಜಕ್ಕೂ ಅಚ್ಚರಿ ವಿಷಯ.