Bigg Boss Kannada 12 updates : ಅಶ್ವಿನಿ, ಜಾಹ್ನವಿ, ರಾಶಿಕಾ, ರಿಷಾ ಒಂದು ಟೀಮ್ ಆದ್ರೆ ಅವರ ತಂಡದಲ್ಲೇ ಇದ್ದು ರಕ್ಷಿತಾ ಶೆಟ್ಟಿ ರಘುಗೆ ನಾಯಕತ್ವ ಬರಲು ಕಾರಣರಾಗಿದ್ದಾರೆ. ಬಹುಷಃ ಈ ವಿಚಾರ ನಿಮ್ಗೆ ಅರ್ಥವಾಗದಿರಬಹು.. ಆದ್ರೆ ಪುಟ್ಟಿ ಮಾಡಿದ ಒಂದೇ ಒಂದು ಕೆಲಸದಿಂದ ಇಂದು ರಘು 2ನೇ ಬಾರಿಗೆ ಬಿಗ್ ಹೌಸ್ ಕ್ಯಾಪ್ಟನ್ ಆಗಿದ್ದಾರೆ.. ಹೇಗೆ..? ಬನ್ನಿ ನೋಡೋಣ..
ನಾಮಿನೇಟ್ ಆದ ತಂಡ ಮತ್ತು ನಾಮಿನೇಟ್ ಆಗದ ತಂಡಕ್ಕೆ ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಆದರೆ ನಾಮಿನೇಟೆಡ್ ಟೀಂ ಎರಡು ತಂಡಗಳಲ್ಲಿ ಗೆಲುವು ಸಾಧಿಸಿ, ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆಯಾಯಿತು. ಮೊದಲ ಸುತ್ತಿನಲ್ಲಿ ಪುರುಷರ ತಂಡದಿಂದ ರಘು ಗೆಲುವು ಸಾಧಿಸಿದರೆ ಮಹಿಳೆಯರ ತಂಡದಿಂದ ಜಾಹ್ನವಿ ಗೆದ್ದರು.. ಆಟ ಇನ್ನೂ ಬಾಕಿ ಇರುವಾಗಲೇ ಎರಡನೇ ಬಾರಿಗೆ ರಘು ನಾಯಕನಾಗಿ ಆಯ್ಕೆಯಾದರು..
ಇದನ್ನೂಓದಿ: 'ಬಿಗ್ ಬಾಸ್'ನಿಂದ ಹೊರಬಂದ ಚಂದ್ರಪ್ರಭಗೆ ಸಿಕ್ಕ ಬಹುಮಾನ ಎಷ್ಟು? 6 ವಾರಕ್ಕೆ ಗಳಿಸಿದ್ದ ಭರ್ಜರಿ ಅಮೌಂಟ್
Raghu Captain for the 2nd time🔥📈
Really appreciated for his efforts👏
Rakshitha- Indirectly The King Maker✌️
What a twist by the end of this week, completely a roller coaster ride for 🏠.
Potential Top 5 Candidate - Raghu🔥✌️#BBK12 pic.twitter.com/ceE50Gpnss— Pawan (@Pawan23811455) November 13, 2025
ನಾಮಿನೇಟ್ ತಂಡದಲ್ಲಿ ಅಶ್ವಿನಿ, ಜಾಹ್ನವಿ, ರಾಶಿಕಾ, ರಿಷಾ, ರಕ್ಷಿತಾ ಶೆಟ್ಟಿ, ರಘು, ಕಾಕ್ರೋಚ್ ಸುಧಿ, ಧ್ರುವಂತ್ ಇದ್ದರು. ಜಿಮ್ ಬಾಲ್ ಟಾಸ್ಕ್‌ನಲ್ಲಿ ಧ್ರುವಂತ್ ಮತ್ತು ಕಾಕ್ರೋಚ್ ಸುಧಿಯನ್ನು ಹೊರಗೆ ತಳ್ಳಿ ರಘು ಬರ್ಜರಿ ಗೆಲುವು ಸಾಧಿಸಿದರು. ಮಹಿಳೆಯರ ತಂಡದಲ್ಲಿ ರಾಶಿಕಾ, ರಕ್ಷಿತಾ, ಅಶ್ವಿನಿಯವರ ವಿರುದ್ಧ ಜಾಹ್ನವಿ ಗೆದ್ದರು. ಕೊನೆಯ ಹಂತದಲ್ಲಿ ರಘು ಹಾಗೂ ಜಾಹ್ನವಿ ನಡುವೆ ಟಾಸ್ಕ್ ನಡೆಯಬಹುದು.. ಇದರ ನಡುವೆ ರಘು ಕ್ಯಾಪ್ಟನ್ ಸ್ಥಾನ ಗಳಿಸಿದ್ದಾರೆ.
Congratulations #Raghu on being the captain second time within 4 weeks
Credit also goes to #Rakshita who single handedly dragged him into Nominated Team thereby activated the Task Beast in him that was going unused in the Safe Team...
Rakshita 1️⃣
Haters 0️⃣#Bbk12 #BBKSeason12 pic.twitter.com/z1FqitXYzd— KuchBhi🤷🏻 (@Kuch_Bhi_4) November 13, 2025
ರಘು ಕ್ಯಾಪ್ಟನ್ ಆಗಲು ರಕ್ಷಿತಾ ಕಾರಣ : ಬಹುಷಃ ಈ ವಿಚಾರ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ.. ರಘು ನಾಮಿನೇಟ್ ಆಗಲಿಲ್ಲ ಅಂದ್ರೆ ಅವರು ಕ್ಯಾಪ್ಟನ್ ಆಗುತ್ತಿರಲಿಲ್ಲ.. ಇಲ್ಲಿ ರಕ್ಷಿತಾ ರಘುವನ್ನು ನಾಮಿನೇಟ್ ಮಾಡುವ ಮೂಲಕ ಪರೋಕ್ಷವಾಗಿ ಟ್ವೀಸ್ಟ್‌ಗೆ ಕಾರಣವಾಗಿದ್ದಾರೆ. ನಾಮಿನೇಟ್ ಮಾಡಿದಾಗ ರಕ್ಷಿತಾರನ್ನ ಬೈದಿದ್ದ ರಘು ಅಭಿಮಾನಿಗಳು ಇದೀಗ ಥ್ಯಾಂಕ್ಸ್ ಹೇಳುತ್ತಿದ್ದಾರೆ.. ಆದರೆ ಪುಟ್ಟಿಗೆ ತನ್ನಿಂದಲೇ ಇದೆಲ್ಲಾ ಆಯ್ತು ಅನ್ನೋದೆ ಗೊತ್ತಿಲ್ಲ..









