)
Malu nipanalu:ಬಿಗ್ಬಾಸ್ ಖ್ಯಾತಿಯ ಮಾಳು ನಿಪನಾಳ ದೊಡ್ಮನೆಯಿಂದ ಹೊರಬಂದು ನಿರಂತರವಾಗಿ ಮಾದ್ಯಮಗಳೊಂದಿಗೆ ಸಂದರ್ಶನ ನೀಡುತ್ತಾ ಬ್ಯುಸಿ ಆಗಿದ್ದಾರೆ.. ಮಾದ್ಯಮಗಳೊಂದಿಗೆ ಮಾತನಾಡುತ್ತಾ ಕೆಲವೊಂದು ಸ್ಟೇಟ್ಮೆಂಟ್ ನೀಡಿ ಗಿಲ್ಲಿ ಫ್ಯಾನ್ಸ್ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ..ಹೌದು ಮಾಳು ನಿಪನಾಳ ಅವರು ಈ ಬಾರಿ ಬಿಗ್ಬಾಸ್ನಿಂದ ಯಾರೇ ಗೆದ್ದರೆ ನಾನು ಸಹಿಸುವುದಿಲ್ಲ ಅಂತಾ ಅಸಮಾಧಾನ ಹೊರಹಾಕಿದ್ದಾರೆ.ನಾನು ಮನೆಯಿಂದ ಹೊರ ಬಂದಿದಕ್ಕೆ ಇಡೀ ಉತ್ತರ ಕರ್ನಾಟಕವೇ ಅಳುತ್ತಿದೆ ಬಿಗ್ಬಾಸ್ನಲ್ಲಿ ಆಡದವರನ್ನ ಉಳಿಸಿಕೊಳ್ಳಲಾಗ್ತಿದೆ ಅಂತಾನೂ ಆರೋಪಿಸಿ ಮಾಳು ಅವರು ಆಕ್ರೋಶ ವ್ಯಕ್ತಪಡಿಸಿದ್ದರು..
ಸೋಶಿಯಲ್ ಮೀಡಿಯಾದಲ್ಲಿ ಮಾಳು ಆಗರ್ಭ ಶ್ರೀಮಂತ ಅನ್ನೋ ಸುದ್ದಿ ಕೇಳಿಬಂದಿದೆ..ತಮ್ಮ ಆಸ್ತಿ ಬಗ್ಗೆ ಸಂದರ್ಶಕರು ಕೇಳಿದಕ್ಕೆ ಮಾಳು ಹೀಗೆ ಹೇಳಿದ್ದಾರೆ “ನಾನು ಗಳಿಸಿದ್ದು ರಗಡ್ ಇತ್ತು. ಆದರೆ, ಕಳ್ಕೊಂಡಿದ್ದು ಭಾರೀ ಇದೆ. ಒಂದು ಇಶ್ಯೂ ಆಯ್ತು. ಹಾಗಾಗಿ, ನಾನು ಏನನ್ನೂ ಉಳಿಸಿಕೊಂಡಿಲ್ಲ. ಅದರಿಂದ ನಾನು ಉಳಿದುಕೊಳ್ಳುವುದು ಬಹಳ ಮುಖ್ಯವಾಗಿತ್ತು. ಅದು ನನ್ನ ಹೆಸರಿಗೆ ಧಕ್ಕೆ ಬರುವಂತಹದ್ದಿತ್ತು. ದುಡ್ಡು ಮಾಡಿದ್ದೆ, ಜೊತೆಗೆ ಲಾಸ್ ಕೂಡ ಮಾಡಿಕೊಂಡಿದ್ದೇನೆ ಅಂತಾ ಮಾಳು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ನಾನು ಇಷ್ಟು ಬೇಗ ಹೊರಬರುವ ಸ್ಫರ್ಧಿಯೇ ಇಲ್ಲ ನಾನು ಯಾಕೇ ಹೊರ ಬಂದೆ ಅಂತಾ ಈಗಲೂ ಅರ್ಥವಾಗ್ತಿಲ್ಲ.. ನಮ್ಮ ಅಭಿಮಾನಿಗಳು ನನ್ನನ್ನ ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದಾರೆ ಆದರೂ, ನಾನು ಯಾಕೆ ಹೊರಗಡೆ ಬಂದೆ ಅನ್ನೋ ಪ್ರಶ್ನೆ ನನಗೆ ಕಾಡ್ತಿದೆ ನಾನು ಹೊರ ಬರಲು ತಪ್ಪೇನು ಮಾಡ್ತೆ ಅಂತಾ ಮಾಳು ಅವರು ಬಿಗ್ಬಾಸ್ ವಿರುದ್ಧವೇ ಬೇಸರ ಹೊರಹಾಕಿದ್ದಾರೆ.