)
Biggboss tanya mittal condom factory tour : ಬಿಗ್ಬಾಸ್ ಮನೆಯಲ್ಲಿ ಮಾತನಾಡುವ ವಿಷಯಗಳು ಚರ್ಚೆಗಳು ಭಾರೀ ವಿವಾದಕ್ಕೆ ಎಡೆಮಾಡಿಕೊಡುತ್ತದೆ..ಹೀಗ ಖ್ಯಾತ ಸ್ಫರ್ಧಿಯೊಬ್ಬರು ಮನೆಯೊಳಗೆ ತನಗೆ ಹಲವು ಫ್ಯಾಕ್ಟರಿಗಳಿವೆ ಎಂದಿದ್ದರು. ಆದರೆ ಈಕೆ ಮಾತನ್ನು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಎಲ್ಲಾ ಟೀಕೆಗಳಿಗೆ ಉತ್ತರಿಸಲು ಇದೀಗ ಬಿಗ್ ಬಾಸ್ ಸ್ಪರ್ಧಿ ತನ್ನ ಕಾಂಡೋ*ಮ್ ಫ್ಯಾಕ್ಟರಿ ಟೂರ್ ಮಾಡಿದ್ದಾರೆ. ಕಾಂಡೋ*ಮ್ ಹೇಗೆ ತಯಾರಾಗುತ್ತದೆ ಅನ್ನೋ ಮಾಹಿತಿಯಿಂದ ಹಿಡಿದು, ಟೀಕೆ ಮಾಡಿದ ಜನರಿಗೆ ಉತ್ತರ ನೀಡುವ ತನಕ ಎಲ್ಲವನ್ನೂ ಬಿಗ್ ಬಾಸ್ ಸ್ಪರ್ಧಿ ವಿವರಿಸಿದ್ದಾರೆ. ಈ ಸ್ಪರ್ಧಿ ತಾನ್ಯ ಮಿತ್ತಲ್ ಇತ್ತೀಚೆಗೆ ಮುಕ್ತಾಯಗೊಂಡ ಹಿಂದಿ ಬಿಗ್ ಬಾಸ್ ಶೋ ಕಾರ್ಯಕ್ರಮದಲ್ಲಿ ಪ್ರಬಲ ಸ್ಪರ್ಧಿಯಾಗಿದ್ದ ತಾನ್ಯ ಮಿತ್ತಲ್ ತಮ್ಮ ಕಾಂಡೋ*ಮ್ ಫ್ಯಾಕ್ಟರಿ ತೋರಿಸಿದ್ದಾರೆ.
ಏಸ್.. ಬಿಗ್ ಬಾಸ್ ಸ್ಪರ್ಧಿ ತಾನ್ಯ ಮಿತ್ತಲ್ ಗ್ವಾಲಿಯರ್ನಲ್ಲಿರುವ ಕಾಂಡೋ*ಮ್ ಫ್ಯಾಕ್ಟರಿಗೆ ಆಗಮಿಸಿದ್ರು..ಅಲ್ಲಿ ಈಕೆ ಎಂಟ್ರಿಕೊಡುತ್ತದ್ದಂತೆ ಹಲವು ಸಿಬ್ಬಂದಿಗಳು ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಬಳಿಕ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಬಳಿಕ ಫ್ಯಾಕ್ಟರಿಯ ಸಿಬ್ಬಂದಿಗಳು, ಲ್ಯಾಬ್ ಟೆಕ್ನಿಶಿಯನ್ಸ್ ಫ್ಯಾಕ್ಟರಿ ವಿವರಣೆ ನೀಡಿದ್ದಾರೆ ಕಾಂಡೋ*ಮ್ ತಯಾರಾಗುವ ರೀತಿ, ವೈದ್ಯಕೀಯ ಪರೀಕ್ಷೆಗಳು, ಮಾನದಂಡಗಳ ಪಾಲನೆ, ಪ್ಯಾಕಿಂಗ್ ಸೇರಿದಂತೆ ಎಲ್ಲಾ ಮಾಹಿತಿ ನೀಡಿದ್ದಾರೆ. ತಾನ್ಯ ಮಿತ್ತಲ್ ಫ್ಯಾಕ್ಟರಿಯಲ್ಲಿ ಕಾಂಡೋ*ಮ್ ಗಳು ವಿದೇಶದಿಂದ ಆಮದು ಮಾಡಿಕೊಂಡ ಮಶಿನ್ಗಳ ಸಹಾಯದಲ್ಲಿ ಉತ್ಪಾದಿಸಲಾಗುತ್ತದೆ. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ತಾನ್ಯ ಮಿತ್ತಲ್ ಹೇಳಿದ್ದಾರೆ.
ಇದೀಗ ತಾನ್ಯ ಮಿತ್ತಲ್ ಫ್ಯಾಕ್ಟರಿ ಬಗ್ಗೆ ಮಾತನಾಡುತ್ತಾ ತಮ್ಮ ಬಗ್ಗೆ ಮೂಡಿದ ಟೀಕೆಗಳಿಗೆ ಫುಲ್ಸ್ಟಾಪ್ ಇಟ್ಟಿದ್ದಾರೆ.. ಕಾಂಡೋ*ಮ್ ಉತ್ಪಾದನೆ ಘಟಕದ ಬಳಿಕ ಮಾತನಾಡಿದ ತಾನ್ಯ ಮಿತ್ತಲ್, ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಸಂಪೂರ್ಣ ಪ್ರಕ್ರಿಯೆ ಮಶಿನ್ ಮೂಲಕವೇ ನಡೆಯುತ್ತದೆ. ಪ್ರತಿ ಹಂತದಲ್ಲಿ ಸರ್ಕಾರದ ಮಾನದಂಡ, ವೈದ್ಯಕೀಯ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ತಾನ್ಯ ಮಿತ್ತಲ್ ಅವರು ನಮ್ಮ ಬಾಸ್ ಅಂತಾ ಹೇಳುವ ಮೂಲಕ ಫ್ಯಾಕ್ಟರಿ ಸ್ಟಾಫ್ಸ್ ಕ್ಲಾರಿಟಿ ಕೊಟ್ಟಿದ್ದಾರೆ..
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದ ಟೀಕೆ ಊಹಾಪೋಹಾಕ್ಕೆ ತಾನ್ಯ ಮಿತ್ತಲ್ ಕಾಂಡೋ*ಮ್ ಉತ್ತರ ಕೊಟ್ಟು ಮುಖಭಂಗಮಾಡಿದ್ದಾರೆ..