)
Akshay Kumar: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಈ ಘಟನೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸೋಮವಾರ ರಾತ್ರಿ 8:45 ರಿಂದ 9 ಗಂಟೆಯ ನಡುವೆ ಈ ಘಟನೆ ನಡೆದಿದೆ ಎಂದು ತಿಳಿಉಬಂದಿದೆ. ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರೊಂದಿಗೆ ವಿಮಾನ ನಿಲ್ದಾಣದಿಂದ ಮನೆಗೆ ಹಿಂತಿರುಗುತ್ತಿದ್ದಾಗ ಜುಹುವಿನ ಗಾಂಧಿಗ್ರಾಮ್ ರಸ್ತೆಯ ಇಸ್ಕಾನ್ ದೇವಾಲಯ ಪ್ರದೇಶದಲ್ಲಿ ವೇಗವಾಗಿ ಬಂದ ಮರ್ಸಿಡಿಸ್ ಕಾರು ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋರಿಕ್ಷಾ ತೀವ್ರವಾಗಿ ಹಾನಿಗೊಳಗಾಗಿದ್ದು, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
An autorickshaw hit a car, part of Bollywood actor Akshay Kumar's security entourage, after the three-wheeler was struck by a Mercedes near Mukteshwar Road in Juhu on Monday night.
One person was injured in the accident.
The car occupied by Akshay Kumar, who was returning… pic.twitter.com/xh6X9Ad9aY
— Vani Mehrotra (@vani_mehrotra) January 20, 2026
ಅಪಘಾತದಲ್ಲಿ ಆಟೋ ರಿಕ್ಷಾ ಸಂಪೂರ್ಣವಾಗಿ ಜಕಂಗೊಂಡಿದ್ದು,ಆಟೋ ರಿಕ್ಷಾ ಚಾಲಕ ಮತ್ತು ಪ್ರಯಾಣಿಕ ಸಣ್ಣಪುಟ್ಟ ಗಾಯಗಳೊಂದಿಗೆ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರನ್ನೂ ತಕ್ಷಣ ಹತ್ತಿರದ ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್, ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಮುಂಬೈ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಇನ್ನೂ ಯಾವುದೇ ಅಧಿಕೃತ ಎಫ್ಐಆರ್ ದಾಖಲಾಗಿಲ್ಲ, ಆದರೆ ಪೊಲೀಸರು ಮರ್ಸಿಡಿಸ್ ಚಾಲಕನನ್ನು ವಿಚಾರಣೆಗೆ ಒಳ ಪಡಿಸಿದ್ದಾರೆ. ಆದಾಗ್ಯೂ, ಅಕ್ಷಯ್ ಕುಮಾರ್ ಈ ವಿಷಯಕ್ಕೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Actor Akshay Kumar’s security car overturned after colliding with an auto-rickshaw in Mumbai | WATCH pic.twitter.com/8l4yhFoEiX
— TIMES NOW (@TimesNow) January 19, 2026
ಅಪಘಾತಕ್ಕೀಡಾದ ಕಾರು ಅಕ್ಷಯ್ ಕುಮಾರ್ ಅವರ ಬೆಂಗಾವಲು ವಾಹನ ಎಂದು ಹೇಳಲಾಗುತ್ತಿದ್ದು. ಘಟನೆಯ ನಂತರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿದ್ದು, ಇದಕ್ಕೆ ಸಂಬಂಧ ಪಟ್ಟ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿವೆ. ಗಾಢ ನಿದ್ರೆಗೆ ಜಾರ ಬೇಕಿದ್ದ ಅಭಿಮಾನಿಗಳು ನಟನ ಕಾರಿನ ಅಪಘಾತದ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.
Ye Akshay Kumar ke achche karam hi hai that he hasn't got a scratch after this deadly accident by mercedes and auto.
"Kaal uska kya bigaade,
Jo Bhakt Hai Mahakaal ka" 🔱Har Har Mahadev..#AkshayKumar pic.twitter.com/72XMUq81aX
— M A 𝕏 A L U 🗡️ (@YourMasalu) January 19, 2026