close

News WrapGet Handpicked Stories from our editors directly to your mailbox

ಬಾಲಿವುಡ್ ನಟಿ ಕೊಯಿನಾ ಮಿತ್ರಾಗೆ 6 ತಿಂಗಳ ಜೈಲು ಶಿಕ್ಷೆ

ಚೆಕ್ ಬೌನ್ಸ್ ಪ್ರಕರಣದ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಕೊಯಿನಾ ಮಿತ್ರಾಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆರು ತಿಂಗಳಗಳ ಕಾಲ ಜೈಲು ಶಿಕ್ಷೆ ವಿದಿಸಿದೆ.

Updated: Jul 22, 2019 , 02:40 PM IST
ಬಾಲಿವುಡ್ ನಟಿ ಕೊಯಿನಾ ಮಿತ್ರಾಗೆ 6 ತಿಂಗಳ ಜೈಲು ಶಿಕ್ಷೆ

ನವದೆಹಲಿ: ಚೆಕ್ ಬೌನ್ಸ್ ಪ್ರಕರಣದ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಕೊಯಿನಾ ಮಿತ್ರಾಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆರು ತಿಂಗಳಗಳ ಕಾಲ ಜೈಲು ಶಿಕ್ಷೆ ವಿದಿಸಿದೆ.

ಸುದ್ದಿಮೂಲಗಳ ಪ್ರಕಾರ ಮಾಡೆಲ್ ಪೂನಂ ಸೇಥಿ ಅವರು ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಕೊಯಿನಾ ಮಿತ್ರಾ ಒಟ್ಟು 4,64 ಲಕ್ಷ ರೂ ನೀಡಬೇಕಾಗಿತ್ತು, ಅದರಲ್ಲಿ ಬಡ್ಡಿಯೂ ಕೂಡ ಸೇರಿತ್ತು ಎನ್ನಲಾಗಿದೆ. ಪೂನಂ ಸೇಥಿ 2013 ರಲ್ಲಿ ದೂರನ್ನು ದಾಖಲಿಸಿದ್ದರು.ಆದರೆ ಕೊಯಿನಾ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಕೊಯಿನಾ ಅವರು ಪೂನಂ ಸೇಥಿ ಬಳಿ 22 ಲಕ್ಷ ಹಣವನ್ನು ಪಡೆದಿದ್ದರು, ಆದರೆ ಸಾಲವನ್ನು ಹಿಂತಿರುಗಿಸುವ ವೇಳೆ ಪೂನಂ ಕೇವಲ 3 ಲಕ್ಷ ರೂ ಚೆಕ್ ನ್ನು ಸ್ವೀಕರಿಸಿದ್ದಾರೆ. ಆದರೆ ಆ ಚೆಕ್ ನ್ನು ಬ್ಯಾಂಕ್ ಸ್ವೀಕರಿಸಿಲ್ಲ. ಇದರಿಂದಾಗಿ ಆ ಚೆಕ್ ಬೌನ್ಸ್ ಆಗಿದೆ ಎನ್ನಲಾಗಿದೆ.

ಇದಾದ ನಂತರ ಜುಲೈ 19,  2013ರಲ್ಲಿ ಪೂನಂ ಕೊಯಿನಾ ಮಿತ್ರಾಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ. ಆದಾಗ್ಯೂ ಕೊಯಿನಾ ಹಣವನ್ನು ಹಿಂತಿರುಗಿಸಿಲ್ಲ ಎನ್ನಲಾಗಿದೆ. ಇದರಿಂದ ಪೂನಂ ಅವರು ಅಕ್ಟೋಬರ್ 10, 2013 ರಂದು ಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾರೆ. ಕೋರ್ಟ್ ವಿಚಾರಣೆ ವೇಳೆ ಕೊಯಿನಾ ತನ್ನ ಚೆಕ್ ಗಳು ಕಳುವಾಗಿವೆ,ಮತ್ತು ಅಷ್ಟು ಪ್ರಮಾಣದ ಹಣವನ್ನು ಸಾಲದ ಮೂಲಕ ತೀರಿಸಲು ತನ್ನ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದ್ದಾರೆ, ಆದರೆ ಅಂಧೇರಿ ಮೆಟ್ರೋಪಾಲಿಟನ್ ಈ ಕೋರ್ಟ್ ವಾದಗಳನ್ನು ಒಪ್ಪಿಲ್ಲ ಎನ್ನಲಾಗಿದೆ.

ಈಗ ಈ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೊಯಿನಾ ' ಈ ಕೇಸ್ ನಲ್ಲಿ ನನ್ನು ತಪ್ಪಾಗಿ ಎಳೆದು ತರಲಾಗಿದೆ' ಎಂದು ಹೇಳಿದ್ದಾರೆ.