)
Bollywood Actor Pradeep Kumar: ಈ ನಟ ತನ್ನ ಚಿತ್ರಗಳಲ್ಲಿ ಹಲವು ಹಿಟ್ಗಳನ್ನು ನೀಡುವ ಮೂಲಕ ನಲವತ್ತು ವರ್ಷಗಳ ಕಾಲ ಸೂಪರ್ಸ್ಟಾರ್ ಆಗಿ ಉಳಿದರು. ಆದರೆ ಅವರ ಜೀವನದಲ್ಲಿನ ಕೆಲವು ತಿರುವುಗಳು ಅವರನ್ನ ನಿಜವಾದ ಮನುಷ್ಯನನ್ನಾಗಿ ಮಾಡಿತು.. ಹೌದು ನಿಜ ಜೀವನದಲ್ಲಿ, ಅವರಿಗೆ ತಮ್ಮ ಕುಟುಂಬದ ಪ್ರೀತಿ ಎಂದಿಗೂ ಸಿಗಲಿಲ್ಲ. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಬಾಲಿವುಡ್ನಲ್ಲಿ ಮಾತ್ರವಲ್ಲದೆ ಬಂಗಾಳಿ ಚಿತ್ರರಂಗದಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದರು.
ಈ ಬಾಲಿವುಡ್ ನಟ ಬೇರಾರೂ ಅಲ್ಲ.. ಪ್ರದೀಪ್ ಕುಮಾರ್. ಅವರು 1952 ರ 'ಆನಂದ್ ಮಠ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅನೇಕ ಪಾತ್ರಗಳನ್ನು ನಿರ್ವಹಿಸಿದರು.. ಆದರೆ ಅವರ ಕುಟುಂಬದಿಂದ ಅವರಿಗೆ ಸರಿಯಾದ ಬೆಂಬಲ ಸಿಗಲಿಲ್ಲ. ಚಿತ್ರರಂಗದಲ್ಲಿ ಅಭಿಮಾನಿಗಳಿಂದ ಅವರಿಗೆ ಸಾಕಷ್ಟು ಪ್ರೀತಿ ಸಿಕ್ಕಿತು. ಪಾರ್ಶ್ವವಾಯುವಿಗೆ ಒಳಗಾದ ನಂತರ ಮಕ್ಕಳು ಸಹ ಅವರನ್ನ ನೋಡಿಕೊಳ್ಳಲಿಲ್ಲ.. ಆದರೆ ಅದರ ಬಗ್ಗೆ ಎಂದಿಗೂ ದೂರು ನೀಡಲಿಲ್ಲ. ಅವರು ಒಂದು ಸಂದರ್ಶನದಲ್ಲಿ, "ನನ್ನ ಹೆಂಡತಿ ನಿಧನರಾದರು. ನನ್ನ ಮೂವರು ಹೆಣ್ಣುಮಕ್ಕಳಾದ ಬೀನಾ, ರೀನಾ, ಮೀನಾ ಮತ್ತು ಮಗ ಪ್ರಸಾದ್ ನನ್ನ ಹೆಂಡತಿಯ ಮರಣದ ನಂತರವೂ ನನ್ನನ್ನು ಭೇಟಿಯಾಗಲು ಬರಲಿಲ್ಲ" ಎಂದು ಹೇಳಿದ್ದರು.
ಇನ್ನು ಪ್ರದೀಪ್ ಕುಮಾರ್ ಅಮಿತಾಭ್ ಬಚ್ಚನ್, ಸನ್ನಿ ಡಿಯೋಲ್ ಮತ್ತು ಮನೋಜ್ ಕುಮಾರ್ ಅವರಂತಹ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದಾರೆ. ಅವರು ಯಾವಾಗಲೂ ತಮ್ಮ ನಟನೆಯಿಂದ ಅಭಿಮಾನಿಗಳ ಹೃದಯಗಳನ್ನು ಗೆದ್ದಿದ್ದರು. ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 1999 ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಟ ಪ್ರದೀಪ್ ಕುಮಾರ್ 27 ಅಕ್ಟೋಬರ್ 2001 ರಂದು ತಮ್ಮ 76 ನೇ ವಯಸ್ಸಿನಲ್ಲಿ ನಿಧನರಾದರು.