)
ಮುಂಬೈ: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅಧಿಕೃತವಾಗಿ ಬಿಲಿಯನೇರ್ ಕ್ಲಬ್ಗೆ ಪ್ರವೇಶಿಸಿದ್ದಾರೆ. ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ 12,490 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಅವರು ಅಗ್ರಸ್ಥಾನವನ್ನು ಗಳಿಸಿದ್ದಾರೆ. ಆ ಮೂಲಕ ಈಗ ಶಾರುಖ್ ಖಾನ್ರನ್ನು ಇದೇ ಮೊದಲ ಬಾರಿಗೆ ಬಿಲಿಯನೇರ್ ಎಂದು ಗುರುತಿಸಿಸಲಾಗಿದೆ. ಅವರ ಯಶಸ್ಸಿನ ಹಿಂದೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಹಾಗೂ ಐಪಿಎಲ್ ಫ್ರಾಂಚೈಸ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮೂಲಕ ಗಳಿಸಿದ ಭಾರಿ ಸಂಪತ್ತು ಪ್ರಮುಖ ಕಾರಣವಾಗಿದೆ.
ಟಾಪ್ 5 ಶ್ರೀಮಂತ ನಟರ ಪಟ್ಟಿ
ಶಾರುಖ್ ಖಾನ್ ನಂತರ ಎರಡನೇ ಸ್ಥಾನದಲ್ಲಿ ಜೂಹಿ ಚಾವ್ಲಾ ಮತ್ತು ಕುಟುಂಬವಿದ್ದಾರೆ, ಇವರ ನಿವ್ವಳ ಮೌಲ್ಯ 7,790 ಕೋಟಿ ರೂ. ಇವರೂ ಕೆಕೆಆರ್ ಫ್ರಾಂಚೈಸಿಯಲ್ಲಿ ಪಾಲುದಾರರಾಗಿದ್ದಾರೆ. ಮೂರನೇ ಸ್ಥಾನದಲ್ಲಿ ಹೃತಿಕ್ ರೋಷನ್ 2,160 ಕೋಟಿ ರೂ. ಸಂಪತ್ತಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರ ಫಿಟ್ನೆಸ್ ಬ್ರ್ಯಾಂಡ್ HRX ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕರಣ್ ಜೋಹರ್ 1,880 ಕೋಟಿ ರೂ. ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಅಮಿತಾಬ್ ಬಚ್ಚನ್ ಮತ್ತು ಕುಟುಂಬ 1,630 ಕೋಟಿ ರೂ.ಗಳೊಂದಿಗೆ ಐದನೇ ಸ್ಥಾನವನ್ನು ಪಡೆದಿದ್ದಾರೆ.
ಶಾರುಖ್ರ ಐಷಾರಾಮಿ ಆಸ್ತಿಗಳು
ಶಾರುಖ್ ಖಾನ್ ವಿಶ್ವಾದ್ಯಂತ ಹಲವು ರಿಯಲ್ ಎಸ್ಟೇಟ್ ಉದ್ಯಮಗಳನ್ನು ಹೊಂದಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಅವರ ಐಕಾನಿಕ್ ಬಂಗಲೆ ‘ಮನ್ನತ್’ 200 ಕೋಟಿ ರೂ.ಗಿಂತಲೂ ಹೆಚ್ಚಿನ ಮೌಲ್ಯ ಹೊಂದಿದೆ. ಇದರ ಜೊತೆಗೆ, ಲಂಡನ್ನ ಪಾರ್ಕ್ ಲೇನ್ನಲ್ಲಿ ಅಪಾರ್ಟ್ಮೆಂಟ್, ಬೆವರ್ಲಿ ಹಿಲ್ಸ್ನ ವಿಲ್ಲಾ, ಅಲಿಬಾಗ್ನ ಫಾರ್ಮ್ಹೌಸ್, ದೆಹಲಿ, ದುಬೈ ಹಾಗೂ ಇಂಗ್ಲೆಂಡ್ನ ರಜಾ ತಾಣದಂತಹ ಐಷಾರಾಮಿ ಆಸ್ತಿಗಳನ್ನು ಅವರು ಸ್ವಾಧೀನಪಡಿಸಿಕೊಂಡಿದ್ದಾರೆ.
ಐಷಾರಾಮಿ ಕಾರುಗಳ ಸಂಗ್ರಹ
ಶಾರುಖ್ರ ಗ್ಯಾರೇಜ್ ಐಷಾರಾಮಿ ಕಾರುಗಳ ಖಜಾನೆಯಾಗಿದೆ. ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್, ರೋಲ್ಸ್ ರಾಯ್ಸ್ನಂತಹ ಬ್ರಾಂಡ್ಗಳ ಜೊತೆಗೆ, ಅವರ ಬಳಿ 12 ಕೋಟಿ ರೂ. ಮೌಲ್ಯದ ಬುಗಾಟಿ ವೇರಾನ್ ಮತ್ತು 9.5 ಕೋಟಿ ರೂ. ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕೂಡ ಇದೆ.
ಒಂದು ಕಾಲದಲ್ಲಿ ಕೇವಲ 1,500 ರೂ. ಜೇಬಿನಲ್ಲಿ ಇಟ್ಟುಕೊಂಡು ಮುಂಬೈಗೆ ಬಂದಿದ್ದ ಶಾರುಖ್ ಖಾನ್, ತಮ್ಮ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ವ್ಯಾಪಾರ ಚತುರತೆಯಿಂದ ಇಂದು ಬಿಲಿಯನೇರ್ ಕ್ಲಬ್ಗೆ ಏರಿದ್ದಾರೆ. ಇದು ಅವರ ಯಶಸ್ಸಿನ ಒಂದು ಸ್ಫೂರ್ತಿದಾಯಕ ಕಥೆಯಾಗಿದೆ.