ಚಂಬಲ್ ಕಣಿವೆ ಬಾಲಕಿಯರಿಗೆ ಹಾಸ್ಟೆಲ್ ಮತ್ತು ಶೌಚಾಲಯ ನಿರ್ಮಿಸಿದ ಬಾಲಿವುಡ್ ನಟಿ ಭೂಮಿ ಪೆಡ್ನೆಕರ್

 ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಭೂಮಿ ಪೆಡ್ನೆಕರ್ ಈಗ ತಮ್ಮ ಚಿತ್ರದ ಎರಡನೇ ವಾರ್ಷಿಕೋತ್ಸವದ ನಿಮಿತ್ತ ಚಂಬಲ್ ಕಣಿವೆಯ ಬಾಲಕಿಯರಿಗೆ ಹಾಸ್ಟೆಲ್ ಹಾಗೂ ಶೌಚಾಲಯವನ್ನು ನಿರ್ಮಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

Last Updated : Aug 11, 2019, 03:59 PM IST
ಚಂಬಲ್ ಕಣಿವೆ ಬಾಲಕಿಯರಿಗೆ ಹಾಸ್ಟೆಲ್ ಮತ್ತು ಶೌಚಾಲಯ ನಿರ್ಮಿಸಿದ ಬಾಲಿವುಡ್ ನಟಿ ಭೂಮಿ ಪೆಡ್ನೆಕರ್  title=
Photo:Instagram

ಮುಂಬೈ:  ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಭೂಮಿ ಪೆಡ್ನೆಕರ್ ಈಗ ತಮ್ಮ ಚಿತ್ರದ ಎರಡನೇ ವಾರ್ಷಿಕೋತ್ಸವದ ನಿಮಿತ್ತ ಚಂಬಲ್ ಕಣಿವೆಯ ಬಾಲಕಿಯರಿಗೆ ಹಾಸ್ಟೆಲ್ ಹಾಗೂ ಶೌಚಾಲಯವನ್ನು ನಿರ್ಮಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

 
 
 
 

 
 
 
 
 
 
 
 
 

2 Years of #ToiletEkPremKatha ❤️ TEPK made me more humble,socially aware and put me on the path to make the world a better place by spreading awareness on sanitation. We constantly are trying to provide better facilities to the children of Abhyudaya Ashram Morena Chambal.And on the 2nd anniversary of TEPK am proud to say that ,the new hostels and toilets are fully functional today.There is nothing more gratifying than the love you can spread.These children give me strength 🙏🏻 Want to thank all my fans and supporters for constantly showering me with such love.You mean the world to me 🙏🏻 #2yrsoftepk #SayNoToOpenDefecation #sunday #love #gratitude

A post shared by Bhumi Pednekar (@bhumipednekar) on

ಅಕ್ಷಯ್ ಕುಮಾರ್ ನಟಿಸಿರುವ ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರ ಮಧ್ಯಪ್ರದೇಶದ ಅನಿತಾ ನರ್ರೆ ಜೀವನ ಚರಿತ್ರೆ ಕುರಿತಾದ ಸಿನಿಮಾ ಆಗಿದೆ. ಭಾರತ ಸರ್ಕಾರದ ಸ್ವಚ್ಚ್ ಭಾರತ ಹಾಗೂ ಮಹಿಳಾ ಸಬಲೀಕರಣದ ಅಗತ್ಯವನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ. ಈ ಚಿತ್ರದಲ್ಲಿ ಶೌಚಾಲಯವಿಲ್ಲದ ಕಾರಣ ಗಂಡನ ಮನೆ ತೋರೆದಿದ್ದ ಅನಿತಾ ಪಾತ್ರದಲ್ಲಿ ಭೂಮಿ ಪೆಡ್ನೆಕರ್ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನ ಅವರ ಮನೋಜ್ಞ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳು ಸಹ ದೊರೆತಿದ್ದವು. ಈಗ ಸಿನಿಮಾ ಬಂದು ಎರಡು ವರ್ಷಗಳು ಆಗುತ್ತಾ ಬಂತು, ಆದರೆ ನಟಿ ಭೂಮಿ ಪಡ್ನೆಕರ್ ಅವರು ಚಂಬಲ್ ಕಣಿವೆಯಲ್ಲಿರುವ ಮೊರೆನಾದ ಅಭ್ಯುದಯ ಆಶ್ರಮದ ಮಕ್ಕಳಿಗಾಗಿ ನೂತನ ಹಾಸ್ಟೆಲ್ ಹಾಗೂ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಇವುಗಳನ್ನು ನಿರ್ಮಿಸಲು ಶ್ರಮಿಸುತ್ತಿದ್ದರು ಎನ್ನಲಾಗಿದೆ.   

ನಟಿ ಭೂಮಿಯವರು ಮಧ್ಯಪ್ರದೇಶದ ವಸತಿ ಶಾಲೆ ಅಭುದಯ ಆಶ್ರಮಕ್ಕೆ ಸಹಾಯ ಮಾಡುತ್ತಿದ್ದಾರೆ.ಅದು ಚಂಬಲ್ ಕಣಿವೆಯಲ್ಲಿ ವೇಶ್ಯಾವಾಟಿಕೆ ನಿಗ್ರಹಿಸಲು ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತದೆ, ಉದ್ಯೋಗದ ಕೌಶಲ್ಯಗಳನ್ನು ಕಲಿಸುತ್ತದೆ.ಭೂಮಿ ಆಶ್ರಮದ ಬಾಲಕಿಯರಿಗಾಗಿ ಹಾಸ್ಟೆಲ್ ಮತ್ತು ಹೊಸ ಶೌಚಾಲಯವನ್ನು ನಿರ್ಮಿಸಿದ್ದಾರೆ.  ಟಾಯ್ಲೆಟ್: ಏಕ್ ಪ್ರೇಮ್ ಕಥಾ 2 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಉದ್ಘಾಟಿಸಲಾಗುವುದು! ಎಂದು ಮೂಲಗಳು ತಿಳಿಸಿವೆ.

ಇದಕ್ಕಾಗಿ ಭೂಮಿ ಅವರನ್ನು ಸಂಪರ್ಕಿಸಿದಾಗ, 'ಅಭುದಯ ಆಶ್ರಮವು  ಒಳ್ಳೆಯ ಕಾರಣಕ್ಕಾಗಿ ಕೆಲಸ ಮಾಡುತ್ತಿದೆ.ನಾನು ಯಾವಾಗಲೂ ಅವರಿಗೆ ಮತ್ತು ಚಂಬಲ್ ಕಣಿವೆಯ ಬಾಲಕಿಯರಿಗಾಗಿ ನನ್ನ ಸಣ್ಣ ಕೆಲಸವನ್ನು ಮಾಡುತ್ತೇನೆ. ನನ್ನ ಹೃದಯದಲ್ಲಿ ಚಂಬಲ್ ಎರಡನೇ ಮನೆಯಾಗಿದೆ. ಬಾಲಕಿಯರು ಹೇಗಿದ್ದಾರೆಂದು ನೋಡಲು ನಾನು ಮತ್ತೆ ಅಭುದಯಕ್ಕೆ ಹೋಗುತ್ತಿದ್ದೇನೆ. ಅವರು ನನ್ನ ಕುಟುಂಬದಂತಾಗಿದ್ದಾರೆ.ಕಣಿವೆಯ ಮಹಿಳೆಯರಲ್ಲಿ ನೈರ್ಮಲ್ಯ, ಶಿಕ್ಷಣ, ಸಬಲೀಕರಣ ಮತ್ತು ಹುಡುಗಿಯರ ಸಮಾನ ಹಕ್ಕುಗಳ ಬಗ್ಗೆ ಅಗತ್ಯವಿರುವ ಮತ್ತು ಪ್ರಮುಖವಾದ ಎಲ್ಲಾ ಸಂದೇಶಗಳನ್ನು ಉತ್ತೇಜಿಸಲು ನಾನು ಸಿದ್ದಳಾಗಿದ್ದೇನೆ 'ಎಂದು ನಟಿ ಭೂಮಿ ಹೇಳಿದರು. 

Trending News