Bollywood Actress Kajol: ನಟಿ ಕಾಜೋಲ್ ತಮ್ಮ ಸೂಕ್ಷ್ಮ ನಟನೆ ಮತ್ತು ತಮಾಷೆಯ ಸ್ವಭಾವದಿಂದ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಇವರು ತಮ್ಮ ನಟನಾ ಕೌಶಲ್ಯವನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಇದಲ್ಲದೆ, ಕಾಜೋಲ್ ಮತ್ತು ಅಜಯ್ ದೇವಗನ್ ಅವರನ್ನು ಉದ್ಯಮದ ಅತ್ಯುತ್ತಮ ಜೋಡಿಗಳಲ್ಲಿ ಒಬ್ಬರು ಎಂದು ಕರೆಯಲಾಗುತ್ತದೆ. ಕಾಜೋಲ್ ಸಾಮಾನ್ಯವಾಗಿ ಹೆಚ್ಚು ಸೋಷಿಯಲ್ ಮಿಡಿಯಾಗಳಲ್ಲಿ ಕಾಣಿಸಿಕೊಳ್ಳುವಿದಿಲ್ಲ.. ಆದರೆ ಅಮೆಜಾನ್ ಪ್ರೈಮ್‌ನ ಟೂ ಮಚ್ ವಿತ್ ಕಾಜೋಲ್ ಮತ್ತು ಟ್ವಿಂಕಲ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ನಂತರ, ಅವರು ಬಹುತೇಕ ಪ್ರತಿದಿನ ಸುದ್ದಿಯಾಗುತ್ತಿದ್ದಾರೆ..
ಇತ್ತೀಚೆಗೆ, ವಿಕಿ ಕೌಶಲ್ ಮತ್ತು ಕೃತಿ ಸನೋನ್ ಕಾಜೋಲ್ ಮತ್ತು ಟ್ವಿಂಕಲ್ ಅವರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಸಂದರ್ಶನದ ಸಮಯದಲ್ಲಿ, ಕಾಜೋಲ್ ಮದುವೆಯ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಪ್ರತಿ ಮದುವೆಗೂ ಮುಕ್ತಾಯ ದಿನಾಂಕ ಮತ್ತು ಕೆಲವು ಅಪ್ಡೇಟೆಡ್ ಆಯ್ಕೆಗಳು ಇರಬೇಕು ಎಂದು ಅವರು ಹೇಳಿದರು. ಹಾಗಾದರೇ ಈ ಹೇಳಿಕೆಯ ಅರ್ಥ ಏನು? ಕಾಜೋಲ್ ಹೀಗೆ ಹೇಳಿದ್ದೇಕೆ? ಇಲ್ಲಿ ತಿಳಿಯೋಣ..
ಇದನ್ನೂ ಓದಿ-ಮದುವೆಯಾದ್ರೂ ಗಂಡನ ಮನೆಗೆ ಕಾಲಿಟ್ಟೇ ಇಲ್ಲ ಹೇಮಾ ಮಾಲಿನಿ! ನಟಿಯ ಈ ನಿರ್ಧಾರದ ಹಿಂದಿತ್ತು ನಿಗೂಢ ಸತ್ಯ..
ಇತ್ತೀಚಿನ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ, ವಿಕ್ಕಿ ಕೌಶಲ್ ಮತ್ತು ಕೃತಿ ಸನೋನ್ ಕಾಜೋಲ್ ಮತ್ತು ಟ್ವಿಂಕಲ್ ಜೊತೆ ಮದುವೆ, ಸ್ನೇಹ ಮತ್ತು ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ಆ ವೇಳೆ ಒಂದು ಟಾಸ್ಕ್‌ನಲ್ಲಿ ಪ್ರಶ್ನೆಯೊಂದನ್ನು ಕೇಳಲಾಯಿತು.. ಮದುವೆಗೆ ಬದಲಾಯಿಸಬಹುದಾದ ಆಯ್ಕೆ ಮತ್ತು ಮುಕ್ತಾಯ ದಿನಾಂಕ ಇರಬೇಕೇ? ಇದಕ್ಕೆ ಉತ್ತರವಾಗಿ ಕೃತಿ, ಟ್ವಿಂಕಲ್ ಮತ್ತು ವಿಕಿ ಆ ಪ್ರಶ್ನೆಗೆ ಒಪ್ಪಲಿಲ್ಲ, ಆದರೆ ಮತ್ತೊಂದೆಡೆ ಕಾಜೋಲ್ ಗ್ರೀನ್ ಸಿಗ್ನಲ್ ನೀಡಿದರು.. ಆಗ ಟ್ವಿಂಕಲ್ "ಇದು ಮದುವೆ, ವಾಷಿಂಗ್ ಮೆಷಿನ್ ಅಲ್ಲ" ಎಂದು ಉತ್ತರಿಸಿದರು. ನಂತರ ಕಾಜೋಲ್ ʼನೀವು ಸರಿಯಾದ ವ್ಯಕ್ತಿಯನ್ನು ಮದುವೆಯಾಗುತ್ತೀರಿ ಎಂಬ ಯಾವ ಭರವಸೆಯೂ ಇರುವುದಿಲ್ಲ.. ಹೀಗಾಗಿ ನನ್ನ ಪ್ರಕಾರ ಮದುವೆಗೂ ಬದಲಾಯಿಸುವ ಆಯ್ಕೆ ಮತ್ತು ಮುಗಿಯುವ ಅವಧಿ ಇರಬೇಕು..ʼ ಎಂದು ಕಾಜೋಲ್ ಹೇಳಿದರು. ಬಳಿಕ ʼಹಣದಿಂದ ಸಂತೋಷವನ್ನು ಖರೀದಿಸಬಹುದೇ?ʼ ಎಂದು ಕೇಳಿದಾಗ ಕಾಜೋಲ್.. ʼಅದು ನಿಮ್ಮ ಬಳಿ ಎಷ್ಟು ಹಣವಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆʼ ಎಂದು ಹೇಳಿದರು..
ಇನ್ನು ಕರಣ್ ಜೋಹರ್ ಮತ್ತು ಜಾನ್ವಿ ಕಪೂರ್ ಒಳಗೊಂಡ ಸಂಚಿಕೆಯಲ್ಲಿ ದಾಂಪತ್ಯ ದ್ರೋಹದ ಪ್ರಶ್ನೆಗೆ ಕಾಜೋಲ್, ಕರಣ್ ಜೋಹರ್ ಮತ್ತು ಟ್ವಿಂಕಲ್ ಸಾಕಷ್ಟು ಪ್ರತಿಕ್ರಿಯೆಯನ್ನು ಎದುರಿಸಿದರು ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ-ಮದುವೆಯಾದ್ರೂ ಗಂಡನ ಮನೆಗೆ ಕಾಲಿಟ್ಟೇ ಇಲ್ಲ ಹೇಮಾ ಮಾಲಿನಿ! ನಟಿಯ ಈ ನಿರ್ಧಾರದ ಹಿಂದಿತ್ತು ನಿಗೂಢ ಸತ್ಯ..









