)
Tulip Joshi: ಬಾಲಿವುಡ್ನಲ್ಲಿ ನಟನೆಯಿಂದ ಬೇರೆಯದೇ ಆದ ಕ್ಷೇತ್ರವನ್ನು ಆರಿಸಿಕೊಂಡ ಅನೇಕ ನಟಿಯರಿದ್ದಾರೆ. ಆದರೆ, ತುಲಿಪ್ ಜೋಶಿ ಅವರ ಕಥೆ ಎಲ್ಲರಿಗೂ ಆಶ್ಚರ್ಯ ಮೂಡಿಸುತ್ತದೆ. ಅವರ ಸೌಂದರ್ಯ ಮತ್ತು ನಟನೆಯ ಬಗ್ಗೆ ಒಂದೇ ದಿನದಲ್ಲಿ ಎಲ್ಲೆಡೆ ಚರ್ಚೆಯಾಗಿತ್ತು. ಆದರೂ, ಅವರು ಸಿನಿಮಾ ಲೋಕವನ್ನು ತೊರೆದು ಹೊಸ ಹಾದಿಯನ್ನು ಹಿಡಿದರು.
ಮೇರೆ ಯಾರ್ ಕಿ ಶಾದಿ'ಯಿಂದ ಬಾಲಿವುಡ್ಗೆ ಎಂಟ್ರಿ
ನಟಿ ತುಲಿಪ್ ಜೋಶಿ, ನಿರ್ದೇಶಕ ಆದಿತ್ಯ ಚೋಪ್ರಾ ಅವರ ಪತ್ನಿ ಮೂಲಕ ಪರಿಚಯಗೊಂಡು, ಯಶ್ ರಾಜ್ ಫಿಲ್ಮ್ಸ್ನ 'ಮೇರೆ ಯಾರ್ ಕಿ ಶಾದಿ' ಚಿತ್ರದ ಮೂಲಕ ಬೆಳಕಿಗೆ ಬಂದರು. ಈ ಸಿನಿಮಾ ಹಿಟ್ ಆದ ನಂತರ ಅವರು ರಾತ್ರೋರಾತ್ರಿ ಸ್ಟಾರ್ ಆದರು. ಅವರ ಸೌಂದರ್ಯಕ್ಕೆ ಮತ್ತು ನಟನೆಗೆ ಸಾವಿರಾರು ಅಭಿಮಾನಿಗಳು ಹುಟ್ಟಿಕೊಂಡರು. ಅವರು ಕೆಲವೇ ಚಿತ್ರಗಳಲ್ಲಿ ನಟಿಸಿದ ನಂತರ ಬಾಲಿವುಡ್ಗೆ ವಿದಾಯ ಹೇಳಿದರು. ಕನ್ನಡದಲ್ಲಿ ಕೂಡ ಉಪೇಂದ್ರ ಅವರ 'ಸೂಪರ್' ಹಾಗೂ ಸುದೀಪ್ ಅವರ 'ಬಚ್ಚನ್' ಸಿನಿಮಾದಲ್ಲಿ ನಟಿಸಿದ್ದಾರೆ. 2014 ರಲ್ಲಿ ಸಲ್ಮಾನ್ ಖಾನ್ ಜೊತೆ 'ಜೈ ಹೋ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಅವರು ಸಂಪೂರ್ಣವಾಗಿ ನಟನೆಯಿಂದ ದೂರ ಸರಿದರು.
ಸಿನಿಮಾದಿಂದ ಜ್ಯೋತಿಷ್ಯಕ್ಕೆ ತಿರುವು
ಸಿನಿಮಾ ಲೋಕವನ್ನು ತೊರೆದ ತುಲಿಪ್ ಜೋಶಿ ಅಚ್ಚರಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು - ಅದು ಜ್ಯೋತಿಷ್ಯ. ಹೌದು, ನಟಿ ತುಲಿಪ್ ಜೋಶಿ ಒಬ್ಬ ವೈದಿಕ ಜ್ಯೋತಿಷಿ ಮತ್ತು ಲೈಫ್ಸ್ಟೈಲ್ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದರೂ, ಅವರ ಹೊಸ ಜೀವನಕ್ಕೆ ಇದೇ ಪ್ರಮುಖ ಕಾರಣವಾಯಿತು.
700 ಕೋಟಿ ಕಂಪನಿಯ ನಿರ್ದೇಶಕಿ
ತುಲಿಪ್ ಜೋಶಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ವಿನೋದ್ ನಾಯರ್ ಅವರನ್ನು ವಿವಾಹವಾದರು. ವಿನೋದ್ ಅವರು ಸೇನೆಯಲ್ಲಿ ಪಂಜಾಬ್ ರೆಜಿಮೆಂಟ್ನ 19ನೇ ಬೆಟಾಲಿಯನ್ನ ಸಿಒ ಆಗಿ ಸೇವೆ ಸಲ್ಲಿಸಿ, ನಂತರ ಉದ್ಯಮಿಯಾದರು. ಅವರು ಸ್ಥಾಪಿಸಿದ ಕಿಮ್ಮಯಾ (Kimaya) ಎಂಬ ಸಲಹಾ ಕಂಪನಿ ಇಂದು ಬರೋಬ್ಬರಿ 700 ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯಾಗಿ ಬೆಳೆದು ನಿಂತಿದೆ. ತುಲಿಪ್ ಜೋಶಿ ತಮ್ಮ ಪತಿಯೊಂದಿಗೆ ಈ ಕಂಪನಿಯ ನಿರ್ದೇಶಕಿಯಾಗಿ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ಹೀಗೆ, ಬಾಲಿವುಡ್ನ ಗ್ಲಾಮರಸ್ ಜಗತ್ತಿನಿಂದ ಹೊರಬಂದ ತುಲಿಪ್ ಜೋಶಿ ತಮ್ಮ ಸಾಮರ್ಥ್ಯ, ಆಸಕ್ತಿ ಮತ್ತು ಜಾಣ್ಮೆಯಿಂದ ಯಶಸ್ವಿ ಉದ್ಯಮಿ ಮತ್ತು ಜ್ಯೋತಿಷಿಯಾಗಿ ಹೊಸ ಬದುಕು ಕಂಡುಕೊಂಡಿದ್ದಾರೆ. ಅವರ ಈ ಪಯಣ ಇತರರಿಗೆ ಸ್ಪೂರ್ತಿ ನೀಡುವಂತಿದೆ.