ಸಿನಿರಂಗದಲ್ಲಿ ಕಾಸ್ಟಿಂಗ್ ಕೌಚ್ ಒಂದು ದೊಡ್ಡ ಸಮಸ್ಯೆಯಾಗಿದೆ. ಅನೇಕ ಸೆಲೆಬ್ರಿಟಿಗಳು ಇದರ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ.
ಇದೀಗ ಒಬ್ಬ ನಾಯಕಿ ಕೂಡ ಈ ಸಮಸ್ಯೆಯನ್ನು ಎದುರಿಸಿದ್ದಾರೆ. ಕಮಿಟ್ ಆಗದ ಕಾರಣ 30 ಚಿತ್ರಗಳಲ್ಲಿ ನಟಿಸುವ ಅವಕಾಶ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸಿನಿಮಾ ಅವಕಾಶಗಳ ವಿಷಯಕ್ಕೆ ಬಂದಾಗ ನಟನಾಗಲಿ ನಟಿಯಾಗಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾಸ್ಟಿಂಗ್ ಕೌಚ್ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಕಲವು ನಟಿಯರಿಗೆ ಬರುತ್ತದೆ.
ಅನೇಕ ಸೆಲೆಬ್ರಿಟಿಗಳು ತುಂಬಾ ಧೈರ್ಯಶಾಲಿಗಳಾಗಿದ್ದಾರೆ. ಅವರು ಎಷ್ಟೋ ಬಾರಿ ತಾವು ಅನುಭವಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ.
ಸಿನಿಮಾದಲ್ಲಿ ಅವಕಾಶ ಪಡೆಯಲು ಅವರನ್ನು ಖಾಸಗಿ ಪಾರ್ಟಿಗಳಿಗೆ ಬರುವಂತೆ ಕರೆಯಲಾಗಿತ್ತಂತೆ.
ಆದರೆ ಅವರು ಈ ಪಾರ್ಟಿಗಳಿಗೆ ಹೋಗದ ಕಾರಣ 20 ರಿಂದ 30 ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡರಂತೆ. ಈ ನಟಿ ಬೇರಾರೂ ಅಲ್ಲ ಬಾಲಿವುಡ್ ಸ್ಟಾರ್ ನಟಿ ಮಲ್ಲಿಕಾ ಶೆರಾವತ್.
ಮರ್ಡರ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮಲ್ಲಿಕಾ ಶೆರಾವತ್ ಬೋಲ್ಡ್ ದೃಶ್ಯಗಳಿಂದ ಜನರ ಮನಗೆದ್ದವರು. ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲು ಅನೇಕ ನಿರ್ಮಾಪಕರು ಸಾಲುಗಟ್ಟಿ ನಿಂತರು.
ಚಿತ್ರದಲ್ಲಿ ನಟಿಸಲು ಅವಕಾಶ ಬೇಕಾದರೆ ರಾತ್ರಿ ಪಾರ್ಟಿಗಳಿಗೆ ಬಂದು ಅವರೊಂದಿಗೆ ರಾಜಿ ಮಾಡಿಕೊಳ್ಳಬೇಕು ಎನ್ನುತ್ತಾರೆ. ಅವರಲ್ಲಿ ಟಾಪ್ ಹೀರೋಗಳು ಇದ್ದಾರೆ ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.
ನಾವು ಬರಲು ನಿರಾಕರಿಸಿದರೆ ಬೋಲ್ಡ್ ದೃಶ್ಯ ಮಾಡ್ತೀರಾ ಖಾಸಗಿಯಾಗಿ ಬರುವುದರಲ್ಲಿ ಏನು ಸಮಸ್ಯೆ? ಅಂತಾರೆ ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.
ನಿರ್ಮಾಪಕರು ನಾಯಕರ ಷರತ್ತನ್ನು ನಾನು ಅನೇಕ ಬಾರಿ ಒಪ್ಪದ ಕಾರಣ ಚಿತ್ರದಲ್ಲಿ ಅವಕಾಶ ನೀಡಲು ನಿರಾಕರಿಸಿದರು. ಕಮಿಟ್‌ಮೆಂಟ್ ನಿರಾಕರಿಸಿದ ಕಾರಣ ನಾನು ಸುಮಾರು 30 ಸಿನಿಮಾಗಳ ಆಫರ್ ಕಳೆದುಕೊಂಡೆ ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.
ಇದನ್ನೂ ಓದಿ : ʼನನಗಿರುವುದು ಅವಳೊಬ್ಬಳೇ ಗೆಳತಿ..ʼ ಸಾರ್ವಜನಿಕವಾಗಿಯೇ ಹೃದಯ ಕದ್ದವಳ ಹೆಸರು ಬಿಚ್ಚಿಟ್ಟ ಸಲ್ಮಾನ್ ಖಾನ್!
ಇದನ್ನೂ ಓದಿ : ಹೊಸ ಲುಕ್‌ನಲ್ಲಿ ಉತ್ತರ ಕರ್ನಾಟಕದ ಮಾಳು ನಿಪನಾಳ ಮಿಂಚಿಂಗ್









