ಧೋನಿಯಂತೆ ನನ್ನ ಮೊದಲ ಪ್ರೀತಿ ಕೂಡ ಕಾರಿನಲ್ಲಿಯೇ ಸತ್ತೋಯ್ತು: ನಟಿ ಪ್ರೀತಿ ಜಿಂಟಾ ಮೊದಲು ಪ್ರೀತಿಸಿದ ಆ ಹುಡುಗ ಇವರೇ!

preity zinta love tragedy: ಪ್ರೀತಿ ಜಿಂಟಾ ಕೂಡ ಎಂಎಸ್ ಧೋನಿ ಅವರಂತೆ ಮೊದಲ ಪ್ರೀತಿಯನ್ನು ಕಳೆದುಕೊಂಡ ನೋವನ್ನು ಅನುಭವಿಸಿದ್ದಾರೆ. 

Written by - Chetana Devarmani | Last Updated : May 15, 2025, 03:23 PM IST
  • ಪ್ರೀತಿ ಜಿಂಟಾ ಲವ್‌ ಸ್ಟೋರಿ
  • ನನ್ನ ಮೊದಲ ಪ್ರೀತಿ ಕೂಡ ಕಾರಿನಲ್ಲಿಯೇ ಸತ್ತೋಯ್ತು
  • ನಟಿ ಪ್ರೀತಿ ಜಿಂಟಾ ಮೊದಲು ಪ್ರೀತಿಸಿದ ಹುಡುಗ
ಧೋನಿಯಂತೆ ನನ್ನ ಮೊದಲ ಪ್ರೀತಿ ಕೂಡ ಕಾರಿನಲ್ಲಿಯೇ ಸತ್ತೋಯ್ತು: ನಟಿ ಪ್ರೀತಿ ಜಿಂಟಾ ಮೊದಲು ಪ್ರೀತಿಸಿದ ಆ ಹುಡುಗ ಇವರೇ!

preity zinta love tragedy: ಎಂಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾ ಕ್ರಿಕೆಟಿಗ ಮತ್ತು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ನಿಜ ಜೀವನದಿಂದ ಪ್ರೇರಿತವಾಗಿದೆ. ಎಂಎಸ್ ಧೋನಿ ಅವರು ಮೊದಲು ಪ್ರೀತಿಸಿದ ಹುಡುಗಿಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಳ್ಳುತ್ತಾರೆ. ಪ್ರೀತಿ ಜಿಂಟಾ ಅವರದೂ ಇದೇ ರೀತಿಯ ಕಥೆ. ಅವರು ಇತ್ತೀಚೆಗೆ X ನ ಪೋಸ್ಟ್‌ ನಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ.

ಪ್ರೀತಿ ಜಿಂಟಾ ಇತ್ತೀಚೆಗೆ ತಮ್ಮ ಮೊದಲ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಇದು ಶಾರುಖ್ ಖಾನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಕಲ್ ಹೋ ನಾ ಹೋ ಚಿತ್ರಕ್ಕೂ ಸಂಬಂಧ ಹೊಂದಿದೆ. ಶಾರುಖ್ ಖಾನ್, ಪ್ರೀತಿ ಜಿಂಟಾ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ಕಲ್ ಹೋ ನಾ' ಭಾವನಾತ್ಮಕ ಸಿನಿಮಾ. ಇದರಲ್ಲಿ, ಅಮನ್ ಸಾವಿನ ದೃಶ್ಯವು ಜನರ ಹೃದಯದಲ್ಲಿ ಇನ್ನೂ ಜೀವಂತವಾಗಿದೆ.

ಮಂಗಳವಾರ (ಮೇ 13 ರಂದು) ಪ್ರೀತಿ ಜಿಂಟಾ ತಮ್ಮ ಎಕ್ಸ್ ಖಾತೆಯಲ್ಲಿ Ask me anything ಆಯೋಜಿಸಿದ್ದರು. ಅಲ್ಲಿ ಅವರು ಕಲ್ ಹೋ ನಾ ಹೋ ಸಿನಿಮಾದ ನೆನಪುಗಳನ್ನು ಹಂಚಿಕೊಂಡರು.

ಇದನ್ನೂ ಓದಿ:ನನ್ನ ತಂದೆ ನನ್ನನ್ನು ವೇಶ್ಯೆ ಎಂದು ಕರೆದರು : ಖ್ಯಾತ ನಟಿಯ ಹೇಳಿಕೆ

ಒಬ್ಬ ಬಳಕೆದಾರರು, "ಮೇಡಂ, ನಾನು ಕಲ್ ಹೋ ನಾ ಹೋ ನೋಡಿದಾಗಲೆಲ್ಲಾ ಮಗುವಿನಂತೆ ಅಳುತ್ತೇನೆ" ಎಂದು ಬರೆದಿದ್ದಾರೆ. ನೀವು ನೈನಾ ಕ್ಯಾಥರೀನ್ ಕಪೂರ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದೀರಿ. ಇದರಿಂದ ಕಲಿತ ಪಾಠವೆಂದರೆ ಪ್ರೀತಿ ಎಂದರೆ ಕೆಲವೊಮ್ಮೆ ಬಿಟ್ಟುಕೊಡುವುದು ಎಂದರ್ಥ." ಎಂದು ಹೇಳಿದ್ದಾರೆ.

ಚಿತ್ರೀಕರಣದ ಸಮಯದಲ್ಲಿ ಇಡೀ ತಂಡವು ತೆರೆಯ ಮೇಲೆ ಮತ್ತು ತೆರೆಯ ಹೊರಗೆ ಹೇಗೆ ತೀವ್ರ ಭಾವುಕವಾಯಿತು ಎಂಬುದನ್ನು ಪ್ರೀತಿ ಜಿಂಟಾ ನೆನಪಿಸಿಕೊಂಡರು. ಇದಲ್ಲದೆ ಅವರು ತಮ್ಮ ಮೊದಲ ಪ್ರೀತಿಯನ್ನು ಕಳೆದುಕೊಂಡ ಕಥೆಯನ್ನು ಸಹ ಹೇಳಿದರು.

"ಹೌದು, ನಾನು ಕಲ್ ಹೋ ನಾ ಹೋ ನೋಡುವಾಗ, ನನಗೆ ಅಳಬೇಕು ಅನಿಸುತ್ತದೆ. ನಾವು ಅದರ ಚಿತ್ರೀಕರಣದಲ್ಲಿದ್ದಾಗಲೂ ನಾನು ಅಳುತ್ತಿದ್ದೆ! ನನ್ನ ಮೊದಲ ಪ್ರೀತಿ ಕಾರು ಅಪಘಾತದಲ್ಲಿ ಕಳೆದುಹೋಯಿತು. ನಾನು ಮೊದಲ ಪ್ರೀತಿಸಿದ ಹುಡುಗ ಕೂಡ ಕಾರು ಅಪಘಾತದಲ್ಲಿ ಸತ್ತರು. ಆದ್ದರಿಂದ ಈ ಚಿತ್ರ ಯಾವಾಗಲೂ ವಿಭಿನ್ನವಾಗಿದೆ" ಎಂದು ಬರೆದಿದ್ದಾರೆ. 

ಪ್ರೀತಿ ಜಿಂಟಾ ಇಲ್ಲಿಯವರೆಗಿನ ಬಾಲಿವುಡ್‌ನ ಅತ್ಯಂತ ಸುಂದರ ನಟಿ. ಇತ್ತೀಚಿನ ದಿನಗಳಲ್ಲಿ ಅವರು ಐಪಿಎಲ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. ಪ್ರೀತಿ ಜಿಂಟಾ ತಮ್ಮ ವೆಬ್ ಶೋನಲ್ಲಿ ತನ್ನ ಮೇಲೆ ಆಧಾರಿತವಾದ ಪಾತ್ರವನ್ನು ನಕಾರಾತ್ಮಕವಾಗಿ ಚಿತ್ರಿಸಿದ್ದಕ್ಕಾಗಿ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.

'ಕಲ್ ಹೋ ನಾ ಹೋ' ಚಿತ್ರದ ಬಗ್ಗೆ ಮಾತನಾಡಿದ ಪ್ರೀತಿ, ಚಿತ್ರದಲ್ಲಿ ಅಮನ್ ಅವರ ದೃಶ್ಯದಲ್ಲಿ ಇಡೀ ಚಿತ್ರತಂಡ ಅಳುತ್ತಿತ್ತು. ಅಮನ್ ಅವರ ಸಾವಿನ ದೃಶ್ಯ ಚಿತ್ರೀಕರಿಸುವಾಗ ಎಲ್ಲರೂ ಕ್ಯಾಮೆರಾ ಮುಂದೆ ಮತ್ತು ಹಿಂದೆ ಅಳುತ್ತಿದ್ದರು ಎಂದು ಹೇಳಿದರು.

ಅದೇ ಅಧಿವೇಶನದಲ್ಲಿ, ಪ್ರೀತಿ ಜಿಂಟಾ ಇತ್ತೀಚೆಗೆ ಸಸ್ಯಾಹಾರಿಯಾಗಿರುವುದಾಗಿಯೂ ಬಹಿರಂಗಪಡಿಸಿದರು. ತನ್ನ ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಲು ಸಾಂದರ್ಭಿಕವಾಗಿ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಪ್ರೀತಿ ಅವರ ಹೆಸರು ಪ್ರಸಿದ್ಧ ಉದ್ಯಮಿ ನೆಸ್ ವಾಡಿಯೊ ಅವರೊಂದಿಗೆ ಸಂಬಂಧ ಹೊಂದಿತ್ತು ಮತ್ತು ಇಬ್ಬರೂ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ನಂತರ ಈ ಸಂಬಂಧವು ಮುರಿದುಬಿತ್ತು.

ಪ್ರೀತಿ ಜಿಂಟಾ ಅವರು ಜೀನ್ ಗುಡೆನಾಫ್ ಜೊತೆ ಮದುವೆ ಆಗಿದ್ದಾರೆ. ಪ್ರೀತಿ ಬಹಳ ವರ್ಷಗಳ ಹಿಂದೆ ಭಾರತವನ್ನು ತೊರೆದು ತನ್ನ ಪತಿಯೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಜೈ ಮತ್ತು ಜಿಯಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ:ಪ್ರಭಾವಿ ರಾಜಕಾರಣಿಗಳ ಜೊತೆ ಡೇಟಿಂಗ್​ ಬರುವಂತೆ ನಟಿ ನಮ್ರತಾ ಗೌಡಗೆ ಕಿರುಕುಳ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News