)
Bollywood Actress: 71 ವರ್ಷದ ಈ ನಟಿ 2018 ರ ನಂತರ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಸುಮಾರು 7 ವರ್ಷಗಳಿಂದ ಚಿತ್ರರಂಗದಿಂದ ದೂರವೇ ಇದ್ದರೂ ಅವರ ನಿವ್ವಳ ಮೌಲ್ಯ 332 ಕೋಟಿ ರೂ. ಎಂದು ಹೇಳಲಾಗುತ್ತಿದೆ. 100 ಕೋಟಿ ರೂ. ಮೌಲ್ಯದ ಬೃಹತ್ ಬಂಗಲೆಯಲ್ಲಿ ವಾಸಿಸುತ್ತಿರುವ ಈ ನಟಿ ಕೆಲ ವರ್ಷಗಳಿಂದ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರೂ ಇವರ ಸಂಪತ್ತು ಮಾತ್ರ ಏರುತ್ತಲೇ ಇದೆ. ಈ ನಟಿ ಯಾರು? ಅವರಿಗೆ ಎಲ್ಲಿಂದ ಆದಾಯ ಬರುತ್ತದೆ ಗೊತ್ತಾ?
1954 ರಲ್ಲಿ ದಿವಂಗತ ಹಿರಿಯ ನಟ ಜೆಮಿನಿ ಗಣೇಶನ್ ಮತ್ತು ಪುಷ್ಪವಲ್ಲಿ ದಂಪತಿಗಳಿಗೆ ಜನಿಸಿದ ಈ ಮುದ್ದು ಮೊಗದ ಸುಂದರಿ ಹಲವು ಭಾಷೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಸಂಧಿವೆ. 2010 ರಲ್ಲಿ, ಕೇಂದ್ರ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ನಟಿ ಬೇರಾರೂ ಅಲ್ಲ ನಟಿ ರೇಖಾ.
ಕನ್ನಡದ ಸಿನಿಮಾ ಮೂಲಕ ನಟಿಯಾಗಿ ಸಿನಿ ಬದುಕಿಗೆ ಪ್ರವೇಶ:
ರೇಖಾ 1958 ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ 'ಇಂಡಿ ಕುಟ್ಟು' ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1969 ರಲ್ಲಿ ಕನ್ನಡದ ಸೂಪರ್ಹಿಟ್ ಚಿತ್ರ 'ಆಪರೇಷನ್ ಜಾಕ್ಪಾಟ್' ಮೂಲಕ ಪೂರ್ಣ ಪ್ರಮಾಣದ ನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದಾಗ್ಯೂ, ರೇಖಾ ಹೆಚ್ಚಾಗಿ ಹೆಸರು ಮಾಡಿದ್ದು ಮಾತ್ರ ಹಿಂದಿ ಚಿತ್ರಗಳಿಂದ. ಬಾಲಿವುಡ್ ಸಿನಿಮಾಗಳಿಂದ ರೇಖಾ ಅಭಿಮಾನಿಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಿದರು.
ಬಾಲಿವುಡ್ ತಾರೆಯರಾದ ಅಮಿತಾಬ್ ಬಚ್ಚನ್ ಮತ್ತು ರಾಜೇಶ್ ಖನ್ನಾ ಮತ್ತು ತೆಲುಗು ಸೂಪರ್ಸ್ಟಾರ್ಗಳಾದ ಎನ್.ಡಿ. ರಾಮರಾವ್ ಸೇರಿದಂತೆ ಹಲವು ಸೂಪರ್ಸ್ಟಾರ್ಗಳ ಜೊತೆ ತೆರೆಹಂಚಿಕೊಂಡಿರುವ ನಟಿ ರೇಖಾ ಅವರು 1982 ರಲ್ಲಿ ಬಿಡುಗಡೆಯಾದ 'ಉಮ್ರಾವ್ ಜಾನ್' ಚಿತ್ರಕ್ಕಾಗಿ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು.
ರೇಖಾ ಅವರ ನಿವ್ವಳ ಮೌಲ್ಯ:
ನಟಿ ರೇಖಾ 2018 ರಿಂದ ಅವರು ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ. ಆದರೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗುವ ರೇಖಾ ತಮ್ಮ ದುಬಾರಿ ರೇಷ್ಮೆ ಸೀರೆ, ಕೇಶವಿನ್ಯಾಸ ಮತ್ತು ಆಭರಣಗಳಿಂದ ಮೂಲಕ ಇಂದಿಗೂ ಎಲ್ಲರ ಕಣ್ಮನ ಸೆಳೆಯುತ್ತಾರೆ. ಬಾಲಿವುಡ್ನ ಅತ್ಯಂತ ಶ್ರೀಮಂತ ನಟಿ ರೇಖಾ ಅವರ ನಿವ್ವಳ ಮೌಲ್ಯ 332 ಕೋಟಿ ರೂ.ಗಳು. ಮುಂಬೈನ ಬಾಂದ್ರಾ ಪ್ರದೇಶದಲ್ಲಿ 100 ಕೋಟಿ ರೂ.ಗಳ ಬಂಗಲೆಯಲ್ಲಿ ಅವರು ವಾಸಿಸುತ್ತಿದ್ದಾರೆ. ನಟಿ ರೇಖಾ ಭಾರತದ ಹಲವು ಭಾಗಗಳಲ್ಲಿ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಇವುಗಳಿಂದ ಬರುವ ಬಾಡಿಗೆ ಮಾತ್ರ ಲಕ್ಷಾಂತರ ರೂಪಾಯಿಗಳಷ್ಟಿದೆ.
ಐಶಾರಾಮಿ ಕಾರುಗಳ ಸಂಗ್ರಹ:
ಇದಲ್ಲದೆ, ರೇಖಾ ಅವರ ಬಳಿ ಬೃಹತ್ ಐಶಾರಾಮಿ ಕಾರು ಸಂಗ್ರಹವಿದೆ, ಅದರಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್ (ರೂ. 6 ಕೋಟಿ), 2.17 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್, ಆಡಿ ಎ8 (ರೂ. 1.63 ಕೋಟಿ), ಮತ್ತು 2.03 ಕೋಟಿ ಮೌಲ್ಯದ ಬಿಎಂಡಬ್ಲ್ಯು ಐ7 ಎಲೆಕ್ಟ್ರಿಕ್ ಸೇರಿವೆ.
ನಟಿ ರೇಖಾ ಆದಾಯದ ಮೂಲಗಳು:
ಸುಮಾರು ಏಳು ವರ್ಷಗಳಿಂದ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ ನಟಿ ರೇಖಾ, ಪ್ರಶಸ್ತಿ ಕಾರ್ಯಕ್ರಮಗಳು ಮತ್ತು ರಿಯಾಲಿಟಿ ಶೋಗಳಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲು ಲಕ್ಷ ಲಕ್ಷ ಶುಲ್ಕ ವಿಧಿಸುತ್ತಾರೆ. ಜಾಹೀರಾತು ಬ್ಯಾನರ್ಗಳಲ್ಲಿ ತಮ್ಮ ಫೋಟೋವನ್ನು ಪ್ರದರ್ಶಿಸಲು ಅವರು 10 ಲಕ್ಷ ರೂ. ಶುಲ್ಕ ವಿಧಿಸುತ್ತಾರೆ ಎನ್ನಲಾಗುತ್ತದೆ. ಇದಲ್ಲದೆ ರೇಖಾ ಅವರು ಅನೇಕ ಸ್ಥಳಗಳಲ್ಲಿ ಹೂಡಿಕೆ ಮಾಡಿದ್ದಾರೆ. ರೇಖಾ ಅವರ ಸರಿಯಾದ ಯೋಜನೆ ಮತ್ತು ಉಳಿತಾಯವು ಅವರು ಚಲನಚಿತ್ರಗಳಲ್ಲಿ ನಟಿಸದಿದ್ದರೂ ಸಹ ಇಂದಿಗೂ ಅವರಿಗೆ ಉತ್ತಮ ಆದಾಯವನ್ನು ಗಳಿಸುವಲ್ಲಿ ಸಹಕಾರಿಯಾಗಿದೆ. ನಟಿ ರೇಖಾ ಭಾರತೀಯ ಸಿನಿಮಾ ರಂಗದ ಶ್ರೀಮಂತ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.