Guess Who: ಈ ಮುದ್ದಾದ ಮಗು ಇಂದು ಟಾಪ್ ನಟಿ, ಮೂವರು ಸಹೋದರರ ಪ್ರೀತಿಯ ಸೋದರಿ!

Sara Ali Khan Childhood  Photo: ನೀವು ಇಲ್ಲಿ ನೋಡುತ್ತಿರುವ ಫೋಟೋ ಈಗಿನ ಟಾಪ್ ನಟಿಯರಲ್ಲಿ ಒಬ್ಬರದ್ದು. ಈ ಬೆಡಗಿಗೆ ಬಹುದೊಡ್ಡ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಅವರ ಎಲ್ಲಾ ಕುಟುಂಬ ಸದಸ್ಯರು ಸಹ ಚಲನಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ.

Written by - Chetana Devarmani | Last Updated : Mar 20, 2023, 04:19 PM IST
  • ಈ ಮುದ್ದಾದ ಮಗು ಇಂದು ಟಾಪ್ ನಟಿ
  • ಮೂವರು ಸಹೋದರರ ಪ್ರೀತಿಯ ಸೋದರಿ!
  • ಬಹುದೊಡ್ಡ ಫ್ಯಾನ್ ಫಾಲೋವಿಂಗ್‌ ಇರುವ ಬೆಡಗಿ
Guess Who: ಈ ಮುದ್ದಾದ ಮಗು ಇಂದು ಟಾಪ್ ನಟಿ, ಮೂವರು ಸಹೋದರರ ಪ್ರೀತಿಯ ಸೋದರಿ! title=
Sara Ali Khan

Sara Ali Khan Childhood : ಬಾಲಿವುಡ್ ತಾರೆಯರ ಫ್ಯಾನ್‌ ಫಾಲೋವರ್‌ ಅದ್ಭುತವಾಗಿದೆ. ಜನರು ಅವರ ಬಾಲ್ಯ, ಯೌವನ, ವೈಯಕ್ತಿಕ ಜೀವನ ಅಥವಾ ವೃತ್ತಿಪರ ಜೀವನ ಎಂದು ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ನೀವು ಇಲ್ಲಿ ನೋಡುತ್ತಿರುವ ಫೋಟೋ ಈಗಿನ ಟಾಪ್ ನಟಿಯರಲ್ಲಿ ಒಬ್ಬರದ್ದು. ಇಂದು ನಾವು ಹೇಳುತ್ತಿರುವ ಈ ಬೆಡಗಿಗೆ ಬಹುದೊಡ್ಡ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಅವರ ಎಲ್ಲಾ ಕುಟುಂಬ ಸದಸ್ಯರು ಸಹ ಚಲನಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ನೀವು ಈ ನಟಿಯ ಅಭಿಮಾನಿಯಾಗಿದ್ದರೆ, ಅವರು ಯಾರೆಂದು ನೀವು ಈಗಾಗಲೇ ಗುರುತಿಸಿರಬೇಕು.  

ಈ ಮುದ್ದಾದ ಹುಡುಗಿ ತನ್ನ ತಂದೆಯ ಸ್ವೆಟರ್‌ನಲ್ಲಿ ಅಡಗಿ ಕುಳಿತಿದ್ದಾಳೆ. ಈ ಫೋಟೋದಲ್ಲಿ ಈ ಮುದ್ದಾದ ಹುಡುಗಿ ಸ್ವೆಟರ್ ಒಳಗೆ ಕುಳಿತು ಯಾವುದೇ ಹಿಂಜರಿಕೆಯಿಲ್ಲದೆ ತನ್ನ ದೊಡ್ಡ ಕಣ್ಣುಗಳಿಂದ ಕ್ಯಾಮೆರಾವನ್ನು ನೋಡುತ್ತಿರುವುದನ್ನು ನೀವು ನೋಡಬಹುದು. ಅವಳ ತಂದೆ ಕೂಡ ಹೆಸರಾಂತ ನಟ. ಇಲ್ಲಿ ಯಾರ ಬಗ್ಗೆ ಮಾತನಾಡುತ್ತಿದ್ದಾರೆಂದು ನಿಮಗೆ ಇನ್ನೂ ಗುರುತಿಸಲು ಸಾಧ್ಯವಾಗದಿದ್ದರೆ, ಈ ಹುಡುಗಿ ಬೇರೆ ಯಾರೂ ಅಲ್ಲ ಅದು ಬಾಲಿವುಡ್‌ ನಟಿ ಸಾರಾ ಅಲಿ ಖಾನ್. 

ಇದನ್ನೂ ಓದಿ: ಮದುವೆ ವಿಚಾರದಲ್ಲಿ ಮೌನ ಮುರಿದ ಮಲೈಕಾ.. ಹನಿಮೂನ್ ಮೂಡ್‌ನಲ್ಲಿದಿವಿ ಎಂದ ನಟಿ!

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್ ಇಂದು ಅತ್ಯಂತ ಜನಪ್ರಿಯ ನಟಿ. ಸಾರಾ ಅಲಿ ಖಾನ್‌ಗೆ ಮೂವರು ಸಹೋದರರಿದ್ದಾರೆ, ಒಬ್ಬರು ಆಕೆಯ ನಿಜವಾದ ಸಹೋದರ ಇಬ್ರಾಹಿಂ ಅಲಿ ಖಾನ್. ಇನ್ನಿಬ್ಬರು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಮಕ್ಕಳು, ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್.  

ಸಾರಾ ಕೂಡ ತನ್ನ ಪ್ರೀತಿಯ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾಳೆ. ಸಾರಾ ಮತ್ತು ಕಾರ್ತಿಕ್ ಆರ್ಯನ್ ಡೇಟಿಂಗ್‌ ಕೆಲದಿನಗಳ ಕಾಲ ಸುದ್ದಿಯಲ್ಲಿತ್ತು, ಅದಾದ ಬಳಿಕ ಕೆಲ ಸಮಯದಿಂದ ಆಕೆಯ ಹೆಸರು ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಕೂಡ ತಳುಕು ಹಾಕಿಕೊಂಡಿದೆ.

ಇದನ್ನೂ ಓದಿ: Virat Kohli Biopic: ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಈ ಸೌತ್‌ ಸ್ಟಾರ್‌.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News