ಡಿವೋರ್ಸ್‌ ಹಾದಿಯಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದ ಸ್ಟಾರ್‌ ನಟಿ..!? ಕೊನೆಗೂ ನೇರವಾಗಿ ಆ ವಿಚಾರ ತಿಳಿಸಿದ ಸುಂದರಿ..

ಇತ್ತೀಚಿಗೆ ಸಿನಿರಂಗದಲ್ಲಿ ಡಿವೋರ್ಸ್‌, ಡೇಟಿಂಗ್‌, ಬ್ರೇಕಪ್‌ ಎನ್ನುವ ಪದಗಳು ತೀರಾ ಸಾಮಾನ್ಯವಾಗಿವೆ. ಯಾವ ನಟ-ನಟಿಯರು ಮದುವೆಯಾಗ್ತಾರೋ... ಯಾವಾಗ ವಿಚ್ಛೇದನ ಪಡೆಯುತ್ತಾರೆ ಅಂತ ಹೇಳದಂತಾಗಿದೆ.. ಇದರ ನಡುವೆ ಇದೀಗ ಇತ್ತೀಚಿಗಷ್ಟೇ ಮದುವೆಯಾಗಿದ್ದ ಜೋಡಿಯ ಸಂಬಂಧ ಅಂತ್ಯಕಾಣಲಿದೆ ಎಂಬ ವಿಚಾರ ನೆಟ್ಟಿಗರ ಬಾಯಲ್ಲಿ ಹರಿದಾಡುತ್ತಿದೆ..

Written by - Krishna N K | Last Updated : Apr 17, 2025, 05:02 PM IST
    • ನಿರಂಗದಲ್ಲಿ ಡಿವೋರ್ಸ್‌, ಡೇಟಿಂಗ್‌, ಬ್ರೇಕಪ್‌ ಎನ್ನುವ ಪದಗಳು ತೀರಾ ಸಾಮಾನ್ಯ
    • ಇತ್ತೀಚಿಗಷ್ಟೇ ಮದುವೆಯಾಗಿದ್ದ ಜೋಡಿಯ ಸಂಬಂಧ ಅಂತ್ಯಕಾಣಲಿದೆ
    • ಅಂತರ್ಧರ್ಮೀಯ ವಿವಾಹವಾಗಿದ್ದ ನಟಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಟೀಕೆಗೆ ಒಳಾಗಿದ್ದರು..
ಡಿವೋರ್ಸ್‌ ಹಾದಿಯಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದ ಸ್ಟಾರ್‌ ನಟಿ..!? ಕೊನೆಗೂ ನೇರವಾಗಿ ಆ ವಿಚಾರ ತಿಳಿಸಿದ ಸುಂದರಿ..

Sonakshi sinha Zaheer iqbal divorce : ನಟಿ ಸೋನಾಕ್ಷಿ ಸಿನ್ಹಾ ಯಾವುದೇ ವಿಚಾರಕ್ಕೆ ಅಷ್ಟು ಸಲೀಸಾಗಿ ರಾಜಿಯಾಗದ ಸ್ವಭಾವದಿಂದ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಅಂತರ್ಧರ್ಮೀಯ ವಿವಾಹವಾಗಿದ್ದ ನಟಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಟೀಕೆಗೆ ಒಳಾಗಿದ್ದರು.. ಇದೀಗ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ..

Add Zee News as a Preferred Source

ಹೌದು.. ನಟಿ ಸೋನಾಕ್ಷಿ ಸಿನ್ಹಾ ಕಳೆದ ವರ್ಷ ಜೂನ್‌ನಲ್ಲಿ ಗೆಳೆಯ ಜಹೀರ್ ಇಕ್ಬಾಲ್ ಜತೆ ವಿವಾಹವಾದರು. ಸೋನಾಕ್ಷಿ ಹಿಂದೂ, ಜಹೀರ್ ಮುಸ್ಲಿಂ. ಇದರಿಂದಾಗಿ ಈ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಟ್ರೋಲ್ ಆದರು.. ಆದರೆ ಇದ್ಯಾವುದಕ್ಕೂ ಈ ಸುಂದರಿ ತಲೆಕೆಡಿಸಿಕೊಳ್ಳಲಿಲ್ಲ..

ಇದನ್ನೂ ಓದಿ:ಪ್ರಧಾನಿಯೇ ಗಡ ಗಡ ನಡುಗುವಂತೆ ಮಾಡಿದ ಏಕೈಕ ಭಾರತೀಯ ಸ್ಟಾರ್‌ ನಟ.! ಸರ್ಕಾರಕ್ಕೆ ಸವಾಲ್‌ ಹಾಕಿದ್ದರು

ಇತ್ತೀಚೆಗೆ, ನೆಟ್ಟಿಗರೊಬ್ಬರು ಸೋನಾಕ್ಷಿ ಅವರ ವಿಚ್ಛೇದನದ ಬಗ್ಗೆ ಅವರ ಫೋಟೋಗೆ ಕಾಮೆಂಟ್ ಮಾಡಿದ್ದ. ಈ ಕಾಮೆಂಟ್ ಅನ್ನು ನಿರ್ಲಕ್ಷಿಸದೆ ಸೋನಾಕ್ಷಿ ಅವನಿಗೆ ನೇರ ಉತ್ತರ ನೀಡಲು ನಿರ್ಧರಿಸಿದರು. ಪ್ರಸ್ತುತ ಈ ಕಾಮೆಂಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸುದ್ದಿಯಾಗುತ್ತಿದೆ.

"ನಿಮ್ಮ ವಿಚ್ಛೇದನ ತುಂಬಾ ಹತ್ತಿರವಾಗುತ್ತಿದೆ" ಅಂತ ಕಿಡಿಗೇಡಿ ಸೋನಾಕ್ಷಿ ಫೋಟೋಗೆ ಕಾಮೆಂಟ್ ಮಾಡಿದ್ದ... ಇದಕ್ಕೆ ನಟಿ "ಮೊದಲು ನಿಮ್ಮ ಹೆತ್ತವರು ವಿಚ್ಛೇದನ ಪಡೆಯುತ್ತಾರೆ, ನಂತರ ನಾವು ವಿಚ್ಛೇದನ ಪಡೆಯುತ್ತೇವೆ" ಅಂತ ಉತ್ತರಿಸಿದರು. ಚೆಲುವೆಯ ಈ ದಿಟ್ಟ ಉತ್ತರ ನೆಟ್ಟಿಗರ ಗಮನ ಸೆಳೆದಿದ್ದು, ಲೈಕ್‌ಗಳ ಸುರಿಮಳೆ ಬರುತ್ತಿದೆ.

ಇದನ್ನೂ ಓದಿ:"ಏನೂ ಬದಲಾಗಿಲ್ಲ..." ಎಂದು ಐಶ್ವರ್ಯ ರೈ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟ ಬಿಗ್‌ ಬಿ..! ಯಾವದಕ್ಕೂ ಕುಗ್ಗದ ಅಮಿತಾಬ್‌ ಬಚ್ಚನ್‌ ಸೊಸೆಯಿಂದಾಗಿ ಕಣ್ಣೀರಿಟ್ಟಿದ್ದೇಕೆ..?

ಅಂದಹಾಗೆ.. ಸೋನಾಕ್ಷಿ ಮತ್ತು ಜಹೀರ್ ಸುಮಾರು ಏಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ವಿವಾಹವಾದರು. ಅವರ ಮದುವೆಗೂ ಮುಂಚೆಯೇ, ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲಿಂಗ್ ಆಗಿತ್ತು. ಇದೀಗ ಡಿವೋರ್ಸ್‌ ಎಂದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿ ಅವರ ಬಾಯಿ ಮುಚ್ಚಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News