ಕುಟುಂಬದ ವಿರೋಧದ ಮಧ್ಯವೂ 32ನೇ ವಯಸ್ಸಿನಲ್ಲಿ 20 ವರ್ಷದ ನಟನನ್ನು ಮದುವೆಯಾದ ನಟಿ! ಯಾರು ಗೊತ್ತೇ?

Amrita Singh-Saif Ali Khan: ಬಾಲಿವುಡ್‌ನ ಸುಂದರ ನಟಿ, ತಮ್ಮ ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ನೀಡಿದ್ದರು ಆದರೆ ಅವರ ಅಫೇರ್ ಬಗ್ಗೆ ಹೆಚ್ಚು ಚರ್ಚೆಯ ವಿಷಯವಾಗಿದ್ದರು. ಈ ನಟಿ 32 ನೇ ವಯಸ್ಸಿನಲ್ಲಿ 20 ವರ್ಷದ ನಟನನ್ನು ಮದುವೆಯಾದರು. ಕೆಲವು ವರ್ಷಗಳ ನಂತರ ಅವರು ವಿಚ್ಛೇದನ ಪಡೆದರು.

Written by - Savita M B | Last Updated : Apr 24, 2025, 11:46 AM IST
  • ಅಮೃತಾ 80 ಮತ್ತು 90 ರ ದಶಕಗಳಲ್ಲಿ ಸಂಚಲನ ಸೃಷ್ಟಿಸಿದರು
  • ಆದರೆ ಅವರ ವೈಯಕ್ತಿಕ ಜೀವನವು ಏರಿಳಿತಗಳಿಂದ ತುಂಬಿತ್ತು
ಕುಟುಂಬದ ವಿರೋಧದ ಮಧ್ಯವೂ 32ನೇ ವಯಸ್ಸಿನಲ್ಲಿ 20 ವರ್ಷದ ನಟನನ್ನು ಮದುವೆಯಾದ ನಟಿ! ಯಾರು ಗೊತ್ತೇ?

Bollywood divorce: ಬಾಲಿವುಡ್‌ನಲ್ಲಿ ಅನೇಕ ಪ್ರೇಮ ಪ್ರಕರಣಗಳು, ವಿವಾಹಗಳು ಮತ್ತು ವಿಚ್ಛೇದನಗಳು ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ ಮತ್ತು ಸುದ್ದಿಯಲ್ಲಿರುತ್ತವೆ. ಖ್ಯಾತ ನಟಿಯೊಬ್ಬರು 32 ನೇ ವಯಸ್ಸಿನಲ್ಲಿ 20 ವರ್ಷದ ನಟನನ್ನು ಮದುವೆಯಾದರು. ಆದರೆ ಕೆಲವು ವರ್ಷಗಳ ನಂತರ ಡಿವೋರ್ಸ್ ಪಡೆದರು. ಈ ದಂಪತಿಗಳ ಸಂಬಂಧವು ವಿಚ್ಛೇದನದ ನಂತರವೂ ಚರ್ಚೆಯಲ್ಲಿದೆ. ಅಷ್ಟೇ ಅಲ್ಲ, ಅವರನ್ನು 80 ರ ದಶಕದ ಅತ್ಯಂತ ಸುಂದರ ನಟಿ ಎಂದು ಪರಿಗಣಿಸಲಾಗಿತ್ತು. ಆ ನಟಿ ಬೇರಾರೂ ಅಲ್ಲ.. ಸೈಫ್ ಅಲಿ ಖಾನ್ ಮೊದಲ ಪತ್ನಿ ಅಮೃತಾ ಸಿಂಗ್. ಅಮೃತಾ ಸಿಂಗ್ ನಟ ಸನ್ನಿ ಡಿಯೋಲ್ ಜೊತೆಗೆ 'ಬೇತಾಬ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದು ಅವರಿಬ್ಬರಿಗೂ ಮೊದಲ ಚಿತ್ರವಾಗಿತ್ತು. 1983 ರಲ್ಲಿ ಬಿಡುಗಡೆಯಾದ ಈ ಚಿತ್ರದಿಂದಾಗಿ ಇಬ್ಬರೂ ಸಾಕಷ್ಟು ಖ್ಯಾತಿಯನ್ನು ಗಳಿಸಿದರು.

Add Zee News as a Preferred Source

ಅಮೃತಾ 80 ಮತ್ತು 90 ರ ದಶಕಗಳಲ್ಲಿ ಸಂಚಲನ ಸೃಷ್ಟಿಸಿದರು. ಆದರೆ ಅವರ ವೈಯಕ್ತಿಕ ಜೀವನವು ಏರಿಳಿತಗಳಿಂದ ತುಂಬಿತ್ತು. ಅಮೃತಾ ಮತ್ತು ಸನ್ನಿ ಅವರ ಪ್ರೀತಿ ಬೇತಾಬ್ ಸೆಟ್‌ನಲ್ಲಿ ಅರಳಿತು ಎಂದು ಹೇಳಲಾಗುತ್ತದೆ. ಆದರೆ ಈ ಸಂಬಂಧ ಶೀಘ್ರದಲ್ಲೇ ಕೊನೆಗೊಂಡಿತು. ಸಿಖ್ ಕುಟುಂಬದಲ್ಲಿ ಬೆಳೆದ ಅಮೃತಾ ಫೆಬ್ರವರಿ 9, 1958 ರಂದು ಪಾಕಿಸ್ತಾನದ ಹಡ್ಲಿಯಲ್ಲಿ ಜನಿಸಿದರು. ಆಕೆಯ ಹೆಸರು ದಿವಂಗತ ನಟ ವಿನೋದ್ ಖನ್ನಾ ಅವರೊಂದಿಗೂ ತಳುಕು ಹಾಕಿಕೊಂಡಿತ್ತು. ಇಷ್ಟೇ ಅಲ್ಲ, ಅಮೃತಾ ಮತ್ತು ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕೂಡ ಸಂಬಂಧದಲ್ಲಿದ್ದಾರೆಂದು ಹೇಳಲಾಗಿತ್ತು. ಅವರಿಬ್ಬರಿಗೂ ಪರಸ್ಪರ ಪ್ರೀತಿ ಇತ್ತು.. ಭಿನ್ನಾಭಿಪ್ರಾಯಗಳಿಂದಾಗಿ ಈ ಸಂಬಂಧವು ಮದುವೆಯವರೆಗೂ ತಲುಪಲಿಲ್ಲ ಎನ್ನಲಾಗಿದೆ.. 

ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಇವುಗಳನ್ನು ತಿಂದರೆ ನೆಮ್ಮದಿಯ ನಿದ್ರೆ ಬರದಿರಲು ಸಾಧ್ಯವೇ ಇಲ್ಲ..!

ನಂತರ ನವಾಬ್ ಸೈಫ್ ಅಲಿ ಖಾನ್ ಅಮೃತಾಳ ಜೀವನದಲ್ಲಿ ಬಂದರು. ಸೈಫ್ ಅಲಿ ಖಾನ್ ಅವರಿಗಿಂತ 12 ವರ್ಷ ಚಿಕ್ಕವರಾಗಿದ್ದರು. ಸೈಫ್ ಮತ್ತು ಅಮೃತಾ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ಕುಟುಂಬಗಳ ಇಚ್ಛೆಗೆ ವಿರುದ್ಧವಾಗಿ 1991 ರಲ್ಲಿ ವಿವಾಹವಾದರು. ಆ ಸಮಯದಲ್ಲಿ, ಸೈಫ್ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರಲಿಲ್ಲ. ಮದುವೆಯಾದಾಗ ಸೈಫ್‌ಗೆ ಕೇವಲ 20 ವರ್ಷ ಮತ್ತು ಅಮೃತಾಗೆ 32 ವರ್ಷ. ನಂತರ, ಅವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಜನಿಸಿದರು.. ಆದರೆ 13 ವರ್ಷಗಳ ನಂತರ ಆ ಸಂಬಂಧ ಕೊನೆಗೊಂಡಿತು. 2004 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಡಿವೋರ್ಸ್ ನಂತರ, ಜೀವನಾಂಶವಾಗಿ ರೂ. 5 ಕೋಟಿ ಪಾವತಿಸಲಾಗಿತ್ತು.

ವಿಚ್ಛೇದನದ ಹಲವು ವರ್ಷಗಳ ನಂತರ, ಸೈಫ್ ಕರೀನಾ ಕಪೂರ್ ಜೊತೆ ಡೇಟಿಂಗ್ ಮಾಡಿದರು.. ಸುಮಾರು ಐದು ವರ್ಷಗಳ ಎರಡನೇ ಬಾರಿಗೆ ವಿವಾಹವಾದರು. ಆದರೆ ಅಮೃತಾ ಸಿಂಗ್ ಇನ್ನೂ ತನ್ನ ಮಕ್ಕಳೊಂದಿಗೆ ಒಂಟಿಯಾಗಿ ವಾಸಿಸುತ್ತಿದ್ದಾರೆ.  

ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಇವುಗಳನ್ನು ತಿಂದರೆ ನೆಮ್ಮದಿಯ ನಿದ್ರೆ ಬರದಿರಲು ಸಾಧ್ಯವೇ ಇಲ್ಲ..!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ.ಬಿ ಅವರು ZEE ಕನ್ನಡ ನ್ಯೂಸ್‌ ಡಿಜಿಟಲ್‌ನಲ್ಲಿ ಸಬ್‌ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದು, ಎಂಟರ್‌ಟೈನ್‌ಮೆಂಟ್, ಹೆಲ್ತ್‌, ಲೈಫ್‌ಸ್ಟೈಲ್‌, ವೈರಲ್‌, ಬ್ಯುಸಿನೆಸ್‌ ಸೇರಿದಂತೆ ವಿವಿಧ ವಿಭಾಗಗಳ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 2023ರಿಂದ ಇವರು ವಾಹಿನಿಗಾಗಿ ಶ್ರಮಿಸುತ್ತಿದ್ದಾರೆ.

...Read More

Trending News