Co Parenting Challenges: ಬಾಲಿವುಡ್ ಖ್ಯಾತ ಕಲಾವಿದರಾದ ಡ್ರೀಮ್ ಗರ್ಲ್ ಹೇಮಾ ಮಾಲಿನಿ, ಸೂಪರ್‌ಸ್ಟಾರ್ ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 2012ರಲ್ಲಿ ಭರತ್ ತಖ್ತಾನಿ ಅವರೊಂದಿಗೆ ಸಪ್ತಪದಿ ತುಳಿದಿದ್ದ ಇವರಿಗೆ ಮುದ್ದಾದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. 12ವರ್ಷಗಳ ದಾಂಪತ್ಯ ಕೊನೆಗೊಳಿಸಿರುವ ಈ ದಂಪತಿ ವಿಚ್ಛೇದನ ಪಡೆದಿದ್ದರೂ ಸಹ ಮಕ್ಕಳ ಜವಾಬ್ದಾರಿಯನ್ನು ಒಟ್ಟಿಗೆ ನಿಭಾಯಿಸುತ್ತಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಿಂಗಲ್ ಪೇರೆಂಟಿಂಗ್ ಸವಾಲುಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಇಶಾ ಡಿಯೋಲ್, ತಾವು ವಿಚ್ಛೇದನ ಪಡೆದ ಬಳಿಕವೂ ಭರತ್ ಅವರ ಜೊತೆಗೂಡಿ ಸಹ ಪೋಷಕತ್ವವನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬ ಬಗ್ಗೆಯೂ ಮಾತನಾಡಿದ್ದಾರೆ.
ಇಬ್ಬರು ವ್ಯಕ್ತಿಗಳ ಸಂಬಂಧ ಕೊನೆಗೊಳ್ಳಬಹುದು, ಆದರೆ...
ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬಂದಾಗ, ಗಂಡ-ಹೆಂಡತಿ ಪರಸ್ಪರ ಜೊತೆಗಿರಲು ಸಾಧ್ಯವೇ ಇಲ್ಲ ಎಂಬಂತ ಸ್ಥಿತಿ ಇದ್ದಾಗ ವಿಚ್ಛೇದನ ಉತ್ತಮ ಮಾರ್ಗವಾಗಿದೆ. ವಿಚ್ಛೇದನವು ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವನ್ನು ಕೊನೆಗೊಳಿಸಬಹುದು. ಆದರೆ, ಮಕ್ಕಳು ಇರುವಾಗ ಪರಸ್ಪರರು ತಮ್ಮ ಅಹಂ ಭಾವವನ್ನು ಬದಿಗಿಟ್ಟು ಮಕ್ಕಳಿಗೆ ಉತ್ತಮ ಪೋಷಕರಾಗಿ ಅವರ ಕೈಲಾದ ಮಟ್ಟಿಗೆ ಅತ್ಯುತ್ತಮವಾದುದನ್ನು ನೀಡಬೇಕು. ನಿಮ್ಮ ಈ ಅಭಿಪ್ರಾಯವು ಎದುರಿನ ವ್ಯಕ್ತಿಗೆ ಒಪ್ಪಿಗೆಯಿದ್ದರೆ ಅವರೂ ನಿಮ್ಮನ್ನು ಅನುಸರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನಗೆ ನನ್ನ ಹೆಣ್ಣು ಮಕ್ಕಳೇ ಸರ್ವಸ್ವ... ಎಂದು ಇಶಾ ಡಿಯೋಲ್ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಸಿಂಗಲ್ ಪೇರೆಂಟ್ ಗಳಿಗೆ ಸಲಹೆ ನೀಡಿರುವ ಇಶಾ ಡಿಯೋಲ್, ಪತಿ-ಪತ್ನಿ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸಿದರೂ ಸಹ ಇದರ ಪರಿಣಾಮ, ತಮ್ಮಲ್ಲಿರುವ ಅಹಂಕಾರಕ್ಕೆ ಮಕ್ಕಳ ಮನಸ್ಸನ್ನು ನೋಯಿಸಬೇಡಿ. ಬದಲಿಗೆ, ಅಹಂ ಭಾವನೆಯನ್ನು ಬದಿಗಿಟ್ಟು, ಮಕ್ಕಳ ಹಿತದೃಷ್ಟಿಯಿಂದ ಅವರ ಉಜ್ವಲ ಭವಿಷ್ಯಕ್ಕಾಗಿ ಅವರಿಗಾಗಿಯಾದರೂ ಒಂದು ಘಟಕವಾಗಿ ಉಳಿಯಬೇಕು. ಸಮಯ ಸಂದರ್ಭಗಳು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಕೆಲವರಿಗೆ ಇದು ಕಷ್ಟ ಎಂದೆನಿಸಬಹುದು. ಆದರೂ, ಮಕ್ಕಳ ಭವಿಷ್ಯದ ಮುಂದೆ ಪೋಷಕರು ಇಂತಹ ಕಷ್ಟಗಳನ್ನು ಮೆಟ್ಟಿನಿಲ್ಲಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಮದುವೆ ಬಳಿಕ ಸಿನಿಮಾದಿಂದ ವಿರಾಮ...!
ಮದುವೆಯ ನಂತರ ನಟನೆಯಿಂದ ವಿರಾಮದ ಬಗ್ಗೆಯೂ ಪ್ರತಿಕ್ರಿಯಿಸಿರುವ ನಟಿ ಇಶಾ ಡಿಯೋಲ್, "ಮೊದಲಿಗೆ ನನ್ನ ಹೊಸ ಜೀವನ(ಮದುವೆ), ಕುಟುಂಬಕ್ಕಾಗಿ ಸ್ವಲ್ಪ ವಿರಾಮ ತೆಗೆದುಕೊಂಡೆ. ಬಳಿಕ ಮಕ್ಕಳು..." ಮಹಿಲೆಯಾಗಿ ಕುಟುಂಬ ಮಕ್ಕಳು ನನ್ನ ಮೊದಲ ಆಯ್ಕೆ. ನಾನು ನನ್ನ ಸಮಯವನ್ನು ನನ್ನ ಮಕ್ಕಳಿಗೆ ಹೆಚ್ಚಾಗಿ ಮೀಸಲಿಡಲು ಬಯಸುತ್ತೇನೆ. ನನ್ನ ಇಬ್ಬರು ಮಕ್ಕಳಿಗಾಗಿ ನನ್ನ, ಜವಾಬ್ದಾರಿ, ಕರ್ತವ್ಯವನ್ನು ತುಂಬು ಹೃದಯದಿಂದ ಮಾಡಲು ಇಚ್ಚಿಸುತ್ತೇನೆ. ಇದರಲ್ಲೇ ನನಗೆ ಖುಷಿಯಿದೆ ಎಂದಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









