ಶಾರುಖ್ ಖಾನ್ ಐಷಾರಾಮಿ 'ಮನ್ನತ್' ಬಿಟ್ಟು ಬಾಡಿಗೆ ಮನೆಯಲ್ಲಿರುವುದೇಕೆ..! ಅದರ ತಿಂಗಳ ಬಾಡಿಗೆ ಕೇಳಿದ್ರೆ ಆಗ್ತೀರಾ ಶಾಕ್!

Shah Rukh Khan: ಬಾಲಿವುಡ್ ಕಿಂಗ್ ಶಾರುಖ್ ಖಾನ್ ತಮ್ಮ ಕನಸಿನ 'ಮನ್ನತ್' ಬಿಟ್ಟು ಬಾಡಿಗೆ ಮನೆಯಲ್ಲಿರಲು ನಿರ್ಧರಿಸಿದ್ದಾರೆ. ಸ್ಟಾರ್ ನಟ-ನಟಿಯರೂ ಕೂಡ ಹೊಟ್ಟೆಕಿಚ್ಚು ಪಡುವಷ್ಟು ಸುಂದರ ಐಷಾರಾಮಿ ಬಂಗಲೆ ಬಿಟ್ಟು ಶಾರುಖ್ ಖಾನ್ ಬಾಡಿಗೆ ಮನೆಯಲ್ಲಿರಲು ನಿರ್ಧರಿಸಿದ್ದೇಕೆ? ಇದರ ಬಾಡಿಗೆ ಎಷ್ಟು ಅಂತ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ...

Written by - Yashaswini V | Last Updated : Feb 21, 2025, 09:11 AM IST
  • ಶಾರುಖ್ ಖಾನ್ ತಮ್ಮ 'ಮನ್ನತ್' ಬಂಗಲೆಯನ್ನು ಬಿಟ್ಟು ಬಾಡಿಗೆ ಮನೆಯಲ್ಲಿರಲು ನಿರ್ಧರಿಸಿದ್ದಾರೆ.
  • ಶಾರುಖ್ ಖಾನ್ ತಮ್ಮ ಐಷಾರಾಮಿ ಬಂಗಲೆ 'ಮನ್ನತ್' ಬಿಟ್ಟು ಮುಂಬೈನ ಖಾರ್ ವೆಸ್ಟ್'ನ ಐಷಾರಾಮಿ ಪ್ರದೇಶದಲ್ಲಿರುವ ಪಾಲಿ ಹಿಲ್ಸ್‌ನಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ.
  • ಇದು ಎರಡು ಅಂತಸ್ತಿನ ಡ್ಯೂಪ್ಲೆಕ್ಸ್ ಬಂಗಲೆಯಾಗಿದ್ದು ಇದರ ಬಾಡಿಗೆ ಜನರನ್ನು ಆಘಾತಕ್ಕೊಳಪಡಿಸುತ್ತದೆ.
ಶಾರುಖ್ ಖಾನ್ ಐಷಾರಾಮಿ 'ಮನ್ನತ್' ಬಿಟ್ಟು ಬಾಡಿಗೆ ಮನೆಯಲ್ಲಿರುವುದೇಕೆ..! ಅದರ ತಿಂಗಳ ಬಾಡಿಗೆ ಕೇಳಿದ್ರೆ ಆಗ್ತೀರಾ ಶಾಕ್!

Shah Rukh Khan News: ಬಾಲಿವುಡ್ ಕಿಂಗ್ ಖಾನ್ ಎಂತಲೇ ಖ್ಯಾತಿ ಪಡೆದಿರುವ ಶಾರುಖ್ ಖಾನ್ ಹೆಸರು ಕೇಳಿದರೆ ಹುಡುಗಿಯರೂ ಫಿದಾ ಆಗ್ತಾರೆ... ಅಂತೆಯೇ ಶಾರುಖ್ ಖಾನ್- ಗೌರಿ ಖಾನ್ ಅವರ ಐಷಾರಾಮಿ ಬಂಗಲೆ 'ಮನ್ನತ್' ಗೂ ಮನಸೋಲದವರೇ ಇಲ್ಲ. ಇದೀಗ ಶಾರುಖ್ ಖಾನ್ ತಮ್ಮ 'ಮನ್ನತ್' ಬಂಗಲೆಯನ್ನು ಬಿಟ್ಟು ಬಾಡಿಗೆ ಮನೆಯಲ್ಲಿರಲು ನಿರ್ಧರಿಸಿದ್ದಾರೆ. ಅದರ ಬಾಡಿಗೆ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿ. 

Add Zee News as a Preferred Source

ವರದಿಗಳ ಪ್ರಕಾರ, ಶಾರುಖ್ ಖಾನ್ ತಮ್ಮ ಐಷಾರಾಮಿ ಬಂಗಲೆ 'ಮನ್ನತ್' ಬಿಟ್ಟು ಮುಂಬೈನ ಖಾರ್ ವೆಸ್ಟ್'ನ ಐಷಾರಾಮಿ ಪ್ರದೇಶದಲ್ಲಿರುವ ಪಾಲಿ ಹಿಲ್ಸ್‌ನಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಇದು ಎರಡು ಅಂತಸ್ತಿನ ಡ್ಯೂಪ್ಲೆಕ್ಸ್ ಬಂಗಲೆಯಾಗಿದ್ದು ಇದರ ಬಾಡಿಗೆ ಜನರನ್ನು ಆಘಾತಕ್ಕೊಳಪಡಿಸುತ್ತದೆ. 

ಇದನ್ನೂ ಓದಿ- ಜನ‌ ಮೆಚ್ಚಿದ "ಫಾರೆಸ್ಟ್": ಕಾಡಿನ ಕಥೆಗೆ 25 ದಿನಗಳ ಸಂಭ್ರಮ

ಪ್ರಾಪರ್ಟಿ ವೆಬ್ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಶಾರುಖ್ ಖಾನ್ ಪಾಲಿ ಹಿಲ್ಸ್‌ನಲ್ಲಿ ಬಾಡಿಗೆಗೆ ಪಡೆದಿರುವ ಅಪಾರ್ಟ್ಮೆಂಟ್ ಗೆ ವರ್ಷಕ್ಕೆ 2.9 ಕೋರಿ ಟೂ ಬಾಡಿಗೆ ಪಾವತಿಸಲಿದ್ದಾರೆ. ಎಂದರೆ ತಿಂಗಳಿಗೆ ಇದರ ಬಾಡಿಗೆ ಸುಮಾರು 24.15ಲಕ್ಷ ರೂ. ಆಗಿರಲಿದೆ. 

ಶಾರುಖ್ ಖಾನ್ 'ಮನ್ನತ್' ಬಿಟ್ಟು ಬಾಡಿಗೆ ಮನೆಗೆ ಹೋಗಲು ನಿರ್ಧರಿಸಿದ್ದೇಕೆ..? 
ಬಾಲಿವುಡ್ ತಾರೆಯರು ಕೂಡ ಶಾರುಖ್ ಖಾನ್ ಅವರ 'ಮನ್ನತ್'ಗೆ ಮನಸೋತಿರುವುದಾಗಿ ಹಲವು ಕಾರ್ಯಕ್ರಮಗಳಲ್ಲಿ ಸ್ವತಃ ತಾವೇ ಹೇಳಿಕೊಂಡಿದ್ದಾರೆ. ಅಂತದರಲ್ಲಿ ತಮ್ಮ ಹತ್ತಾರು ವರ್ಷದ ಕನಸಿನ ಮನೆಯಾಗಿರುವ ಮನ್ನತ್ ಬಿಟ್ಟು ಶಾರುಖ್ ಖಾನ್ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಮುಖ ಕಾರಣವೊಂದಿದೆ. 

ಇದನ್ನೂ ಓದಿ- ಜನ‌ ಮೆಚ್ಚಿದ "ಫಾರೆಸ್ಟ್": ಕಾಡಿನ ಕಥೆಗೆ 25 ದಿನಗಳ ಸಂಭ್ರಮ

ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಖಾನ್ ಮತ್ತು ಗೌರಿ ಖಾನ್ ತಮ್ಮ 'ಮನ್ನತ್'ನಲ್ಲಿ ನವೀಕರಣಕ್ಕೆ ಕೈ ಹಾಕಿದ್ದಾರೆ. ಈ ಸಂದರ್ಭದಲ್ಲಿ ಶಾಂತಿ ಮತ್ತು ಭದ್ರತೆಯ ದೃಷ್ಟಿಯಿಂದ ಶಾರುಖ್ ಮನೆ ನವೀಕರಣವಾಗುವವರೆಗೂ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News