ಎಲ್ಲರಿಗೂ ಒಂದು ಟೈಂ ಬಂದೇ ಬರುತ್ತೆ.. ವಿಚ್ಚೇದನದ ಬಳಿಕ ಇರಲು ಮನೆಯಿಲ್ಲದೇ ಪರದಾಡಿದ್ದ ಈಕೆ ಇಂದು ಬಾಲಿವುಡ್ ಸ್ಟಾರ್ ನಟಿ!
Bollywood Star Actress: ಬಾಲಿವುಡ್ನ ನಟಿಯೊಬ್ಬರು ವಿಚ್ಛೇದನದ ನಂತರ ಎದುರಿಸಿದ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಬಳಿಕ ಯಾರೂ ಅವರಿಗೆ ಮನೆ ನೀಡಲು ಸಿದ್ಧರಿರಲಿಲ್ಲ.. ಅನೇಕ ಕಷ್ಟಗಳನ್ನು ಎದುರಿಸಿ ಮತ್ತೆ ಎದ್ದುನಿಂತ ವ್ಯಥೆಯನ್ನು ಸ್ಟಾರ್ ನಟಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
kalki koechlins: ಬಾಲಿವುಡ್‌ನಲ್ಲಿ ವಿಚ್ಛೇದನ ಹೊಸದೇನಲ್ಲ.. ಡಿವೋರ್ಸ್ ನಂತರ ಸೆಲೆಬ್ರಿಟಿಗಳು ತಮ್ಮದೇ ಆದ ದಾರಿಯಲ್ಲಿ ಹೋಗುತ್ತಾರೆ. ಆದರೆ ಕೆಲವು ಸೆಲೆಬ್ರಿಟಿಗಳು ಕಷ್ಟಪಟ್ಟಿರುವ ನಿದರ್ಶನಗಳೂ ಇವೆ.. ಇದರಲ್ಲಿ ಬಾಲಿವುಡ್‌ನಲ್ಲಿ ವಿಭಿನ್ನ ಸ್ಥಾನ ಹೊಂದಿರುವ ನಟಿಯೊಬ್ಬರಿದ್ದಾರೆ ಇದ್ದಾರೆ. ಅವರೇ ನಟಿ ಕಲ್ಕಿ ಕೊಚ್ಲಿನ್. ನಿರ್ದೇಶಕ ಅನುರಾಗ್ ಕಶ್ಯಪ್ ಜೊತೆಗಿನ ವಿಚ್ಛೇದನದ ನಂತರ ತನ್ನ ಜೀವನ ಅಸ್ತವ್ಯಸ್ತವಾಗಿದೆ ಎಂದು ಕಲ್ಕಿ ಹೇಳಿದ್ದಾರೆ.
ನಟಿ ಕಲ್ಕಿ ಕೊಚ್ಲಿನ್ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಇಲ್ಲಿಯವರೆಗೆ ಅನೇಕ ದೊಡ್ಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಅವರ ನಟನಾ ವೃತ್ತಿಜೀವನವು 2009 ರಲ್ಲಿ ದೇವ್ ಡಿ ಚಿತ್ರದೊಂದಿಗೆ ಪ್ರಾರಂಭವಾಯಿತು. ಆ ನಂತರ ‘ಜಿಂದಗಿ ನಾ ಮಿಲೇಗಿ ದೊಬಾರಾ’, ‘ಏಕ್ ಥಿ ಡಿಯೋನ್’ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇದೆಲ್ಲದರ ಮಧ್ಯೆ 2011 ರಲ್ಲಿ ಅವರು ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ವಿವಾಹವಾದರು. ಅದರ ನಂತರ, ಮುಂದಿನ ಎರಡು ವರ್ಷಗಳಲ್ಲಿ ಅನುರಾಗ್ ಕಶ್ಯಪ್ ಮತ್ತು ಕಲ್ಕಿ ವಿಚ್ಛೇದನ ಪಡೆದರು. 2013 ರಲ್ಲಿ, ಕಲ್ಕಿ ಕೊಚ್ಲಿನ್ ಮತ್ತು ಅನುರಾಗ್ ಕಶ್ಯಪ್ ಅವರು ಬೇರ್ಪಡುವ ನಿರ್ಧಾರವನ್ನು ಪ್ರಕಟಿಸಿದರು. ಆದರೆ ಅವರ ವಿಚ್ಛೇದನವನ್ನು 2015 ರಲ್ಲಿ ಅಂಗೀಕರಿಸಲಾಯಿತು. ಈ ವಿಚ್ಛೇದನದ ನಂತರ, ಕಲ್ಕಿಯ ಜೀವನವು ಬಹಳಷ್ಟು ಬದಲಾಗಿ.. ಆಕೆ ಏಕಾಂಗಿಯಾಗಿ ನಿಲ್ಲಬೇಕಾಯಿತು..
ಇದನ್ನೂ ಓದಿ-15 ವರ್ಷದಿಂದ ಪ್ರೀತಿ, ಗುಟ್ಟಾಗಿ ನಡೆದ ಖ್ಯಾತ ನಟಿಯ ಮದುವೆ.. ಒಂದು ವರ್ಷದ ಬಳಿಕ ಹೊರಬಂತು ರಿಯಲ್ ಮ್ಯಾಟರ್!
ಹೌದು.. ಅನುರಾಗ್ ಕಶ್ಯಪ್ ಜೊತೆಗಿನ ವಿಚ್ಛೇದನದ ನಂತರ, ಕಲ್ಕಿ ವಾಸಿಸಲು ಮನೆ ಅವಶ್ಯವಿತ್ತು.. ಆದರೆ ಆಕೆಗೆ ಯಾರೂ ಬಾಡಿಗೆಗೆ ಮನೆ ಕೊಡುತ್ತಿರಲಿಲ್ಲ. ಪಾಡ್‌ಕಾಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಲ್ಕಿ, “ನೀವು ಒಂಟಿ ಮಹಿಳೆಯಾಗಿದ್ದರೆ ನಿಮಗೆ ಮುಂಬೈನಲ್ಲಿ ಮನೆಯಂತೂ ಸಿಗುವುದಿಲ್ಲ.. ನನಗೂ ಹಾಗೇಯೇ ಆಗಿದ್ದು.. ಆ ಸಮಯದಲ್ಲಿ ಎಲ್ಲರೂ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದರು. ಆದರೆ ಯಾರೂ ನನಗೆ ಮನೆ ನೀಡಲು ಸಿದ್ಧರಿಲ್ಲ, ”ಎಂದು ನಟಿ ಹೇಳಿದ್ದಾರೆ..
ಇದನ್ನೂ ಓದಿ-ʼ18ನೇ ವಯಸ್ಸಿನಲ್ಲೇ ಆ ಸ್ಟಾರ್ ನಟ ನನಗೆ..ʼ ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್ ಕಾಮೆಂಟ್!!
ಅಲ್ಲದೆ, ಕಲ್ಕಿ ಮತ್ತೊಂದು ಸಂದರ್ಶನದಲ್ಲಿ "ವಿಚ್ಛೇದನದ ನಂತರ, ನಾನು ಯಾವುದೇ ಪುರುಷನೊಂದಿಗೆ ಕಾಣಿಸಿಕೊಂಡಾಗ, ನಾವು ಡೇಟಿಂಗ್ ಮಾಡುತ್ತಿದ್ದೇವೆ ಎಂದು ಮಾಧ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಿದ್ದವು. ನಾನು ಕೂಡ ಹಲವು ವದಂತಿಗಳನ್ನು ಎದುರಿಸಿದ್ದೇನೆ. ವಿಚ್ಛೇದನದ ನಂತರದ ಜೀವನದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದವು. ವೃತ್ತಿ ಮತ್ತು ಖಾಸಗಿ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಹೇಗೆ? ವಾಸ್ತವವಾಗಿ, ಕೆಲವು ನೆರೆಹೊರೆಯವರು ಕೂಡ ನನ್ನ ಬಗ್ಗೆ ನನ್ನ ಹೆತ್ತವರಿಗೆ ಇಂತಹ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು.. ಆ ಸಮಯ ತುಂಬಾ ಕಷ್ಟಕರವಾಗಿತ್ತು.." ಎಂದು ಕಲ್ಕಿ ಹೇಳಿದರು.
ಸದ್ಯ ಕಲ್ಕಿ ಕೊಚ್ಲಿನ್ ಈಗ ತನ್ನ ಜೀವನದಲ್ಲಿ ಮುಂದುವರೆದಿದ್ದು, ಅವರು 2024 ರಲ್ಲಿ ಗೈ ಹರ್ಷ್ಬರ್ಗ್ ಅವರನ್ನು ವಿವಾಹವಾದರು. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆಕೆಗೆ ಸಫೊ ಎಂಬ ಮಗಳೂ ಇದ್ದಾಳೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.