ಅವಮಾನಗಳನ್ನ ಮೆಟ್ಟಿ ನಿಂತ ತಾರೆ.. ಅಂದು 100 ರೂ. ಜೊತೆ ಭಾರತಕ್ಕೆ ಬಂದಿದ್ದ ಈಕೆ.. ಇಂದು 5 ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ಹೀರೋಯಿನ್‌!

Bollywood Actress Struggle Story: ಅಂದು 100 ರೂಪಾಯಿ ಇಟ್ಟುಕೊಂಡು ಸಿನಿರಂಗಕ್ಕೆ ಬಂದಿದ್ದ ಈ ನಟಿ ಇಂದು 5 ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ಹೀರೋಯಿನ್‌ ಆಗಿದ್ದಾರೆ.

Written by - Chetana Devarmani | Last Updated : May 27, 2025, 12:59 PM IST
  • ಅಂದು 100 ರೂಪಾಯಿ ಇಟ್ಟುಕೊಂಡು ಸಿನಿರಂಗಕ್ಕೆ ಬಂದಿದ್ದ ಈ ನಟಿ
  • ಇಂದು 5 ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ಹೀರೋಯಿನ್‌
  • ಈಕೆ ಸೊಂಟ ಬಳುಕಿಸಿದರೆ ಸಾಕು ಲಕ್ಷಾಂತರ ಜನರ ಹೃದಯ ಬಡಿತ ಹೆಚ್ಚಾಗುತ್ತದೆ
ಅವಮಾನಗಳನ್ನ ಮೆಟ್ಟಿ ನಿಂತ ತಾರೆ.. ಅಂದು 100 ರೂ. ಜೊತೆ ಭಾರತಕ್ಕೆ ಬಂದಿದ್ದ ಈಕೆ.. ಇಂದು 5 ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ಹೀರೋಯಿನ್‌!
Nora Fatehi

Nora Fatehi Struggle Story: ಸಿನಿಮಾ ಇಂಡಸ್ಟ್ರಿಯಲ್ಲಿ ಐಟಂ ಹಾಡುಗಳ ಬಗ್ಗೆ ವಿಶೇಷ ಚರ್ಚೆ ನಡೆಯುತ್ತಿದ್ದ ಕಾಲವೊಂದಿತ್ತು. ಐಟಂ ಸಾಂಗ್‌ಗಳನ್ನು ಮಾಡಿ ಅದೆಷ್ಟೋ ನಟಿಯರು ಜನಪ್ರಿಯರಾಗಿದ್ದಾರೆ. ಕಾಲ ಬದಲಾದಂತೆ ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳ ಪ್ರಾಮುಖ್ಯತೆಯೂ ಬದಲಾಗಿದೆ. ನಿರ್ದೇಶಕರು ಐಟಂ ಸಾಂಗ್‌ಗಳ ಬದಲು ಸ್ಪೆಷಲ್ ಸಾಂಗ್‌ ಎಂಬ ಪದವನ್ನು ಬಳಸುತ್ತಿದ್ದಾರೆ. ವಿಶೇಷ ಹಾಡುಗಳಿಗೆ ಸೊಂಟ ಬಳುಕಿಸಿ ಜನಪ್ರಿಯರಾದ ನಟಿಯರಲ್ಲಿ ನೋರಾ ಫತೇಹಿ ಕೂಡ ಒಬ್ಬರು.

Add Zee News as a Preferred Source

ನೋರಾ ಫತೇಹಿ ಅವರನ್ನು ಬಾಲಿವುಡ್‌ನ ನೃತ್ಯ ರಾಣಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರ ನೃತ್ಯ ಶೈಲಿಯು ಸಿನಿಪ್ರಿಯರಿಗೆ ತುಂಬಾ ಇಷ್ಟವಾಗುತ್ತದೆ. ನೋರಾ ಸೊಂಟ ಬಳುಕಿಸಿದರೆ ಸಾಕು ಲಕ್ಷಾಂತರ ಜನರ ಹೃದಯ ಬಡಿತ ಹೆಚ್ಚಾಗುತ್ತದೆ.  

ನೋರಾ ಫತೇಹಿ ಅವರ ಹಳೆಯ ವಿಡಿಯೋ ವೈರಲ್‌ ಆಗುತ್ತುದೆ. ಈ ವೀಡಿಯೊದಲ್ಲಿ ನೋರಾ ಫತೇಹಿ ತಮ್ಮ ಹೋರಾಟದ ದಿನಗಳ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ. ನೋರಾ ಫತೇಹಿ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಕಾಣಲು ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಸಹೋದರಿಯ ಪತಿಯೊಂದಿಗೆ ರೊಮ್ಯಾನ್ಸ್ ಮಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ! ಯಾರು ಗೊತ್ತೇ?

ಈ ಬಗ್ಗೆ ಮಾತನಾಡಿದ ನೋರಾ ಫತೇಹಿ, "ನನ್ನ ಕುಟುಂಬದಲ್ಲಿ ಸಮಸ್ಯೆ ಇತ್ತು. ಅದಕ್ಕಾಗಿಯೇ ನಾನು ಮತ್ತು ನನ್ನ ಸಹೋದರ ಸಂಪೂರ್ಣವಾಗಿ ಒಂಟಿಯಾಗಿದ್ದೆವು. ನಾವಿಬ್ಬರೂ ಒಂಟಿಯಾಗಿ ಬದುಕಬೇಕಾಯಿತು. ನಾವು ತುಂಬಾ ಚಿಕ್ಕವರಾಗಿದ್ದೆವು. ನನಗೂ 17 ವರ್ಷ ವಯಸ್ಸು. ಅಲ್ಲಿವರೆಗೂ ನಾನು ಎಂದಿಗೂ ಕೆಲಸ ಮಾಡಿರಲಿಲ್ಲ. ಆ ಸಮಯದಲ್ಲಿ, ನನ್ನ ಬಳಿ ಮನೆ ಅಥವಾ ಹಣವಿರಲಿಲ್ಲ" ಎಂದು ಹೇಳಿದರು.

"ಎಲ್ಲಾ ಜವಾಬ್ದಾರಿಗಳು ನನ್ನ ಮೇಲೆ ಇದ್ದವು ಮತ್ತು ಏನು ಮಾಡಬೇಕೆಂದು ನನಗೆ ಅರ್ಥವಾಗಲಿಲ್ಲ. ನಂತರ ನಾನು ಬೆಲ್ಲಿ ಡ್ಯಾನ್ಸ್ ಮಾಡಲು ಪ್ರಾರಂಭಿಸಿದೆ. ನಾನು ಕಾರ್ಯಕ್ರಮಗಳು ಮತ್ತು ಮದುವೆಗಳಲ್ಲಿ ಬೆಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ ಮತ್ತು ಕೆಲವೊಮ್ಮೆ ದಿನಕ್ಕೆ ಮೂರು ಪ್ರದರ್ಶನಗಳನ್ನು ಮಾಡಬೇಕಾಗಿತ್ತು. ಆದರೂ, ನಾನು ಬಿಟ್ಟುಕೊಡಲಿಲ್ಲ" ಎಂದು ಹೇಳಿದರು.

"ನನ್ನ ಜೀವನದಲ್ಲಿ ಬೆಲ್ಲಿ ಡ್ಯಾನ್ಸ್ ಇಲ್ಲದಿದ್ದರೆ, ನನ್ನ ಕನಸುಗಳನ್ನು ನನಸಾಗಿಸಲು ಭಾರತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ನಾನು ನಟಿಯಾಗಲೂ ಸಾಧ್ಯವಾಗುತ್ತಿರಲಿಲ್ಲ" ಎಂದು ನೋರಾ ಫತೇಹಿ ಹೇಳಿದರು. 

ನೋರಾ ಫತೇಹಿ ಬಾಹುಬಲಿ ಚಿತ್ರದಲ್ಲಿ ಮನೋಹರಿ ಹಾಡಿನಲ್ಲಿ ಕಾಣಿಸಿಕೊಂಡರು. ಬಾಲಿವುಡ್ ಇಂಡಸ್ಟ್ರಿಯಲ್ಲಿ ವಿಶೇಷ ಹಾಡುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಈ ಚೆಲುವೆಗೆ ಸೌತ್‌ನಲ್ಲೂ ನಿರೀಕ್ಷೆಗೂ ಮೀರಿದ ಕ್ರೇಜ್ ಇದೆ. ನೋರಾ ಫತೇಹಿ ಪ್ಯಾನ್ ಇಂಡಿಯಾ ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ಸಾಕಷ್ಟು ಆಫರ್‌ಗಳನ್ನು ಪಡೆಯುತ್ತಿದ್ದಾರೆ. 100 ರೂಪಾಯಿಯೊಂದಿಗೆ ಮನೆಯಿಂದ ಮುಂಬೈಗೆ ಓಡಿ ಬಂದ ಈ ಚೆಲುವೆ ಸದ್ಯ 5 ನಿಮಿಷದ ಹಾಡಿಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನೋರಾ ಫತೇಹಿ ತನ್ನ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅನೇಕ ಅವಮಾನಗಳನ್ನು ಎದುರಿಸಿದರು. ಆದರೆ ಅವುಗಳನ್ನೇ ಮೈಲಿಗಲ್ಲುಗಳನ್ನಾಗಿ ಮಾಡಿಕೊಂಡು ಉದ್ಯಮದಲ್ಲಿ ನೆಲೆ ನಿಂತರು. ನೋರಾ ಪ್ರತಿಭೆಗೆ ಅದೃಷ್ಟವೂ ಜೊತೆಗೂಡಿತು. ಇಂದು ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ. ನೋರಾ ಫತೇಹಿಗೆ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಕ್ರೇಜ್ ಇದೆ.  

ಇದನ್ನೂ ಓದಿ: ಸಿನಿಮಾದಲ್ಲಿ ಹಸಿ- ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಭರ್ಜರಿ ರೋಮ್ಯಾನ್ಸ್ ಮಾಡಿದ ಈ ಜೋಡಿ ನಿಜ ಜೀವನದಲ್ಲಿ ಅತ್ತಿಗೆ- ಮೈದುನ !

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News