)
Karisma & Kapoor emotional story: ಪ್ರಸಿದ್ಧ ಸ್ಟಾರ್ ಸಹೋದರಿಯರಾದ ಕರೀಷ್ಮಾ ಕಪೂರ್ & ಕರೀನಾ ಕಪೂರ್ ಯಾರಿಗೆ ಗೊತ್ತಿಲ್ಲಾ ಹೇಳಿ.. ಬಾಲಿವುಡ್ ಸಿನಿಮಾ ರಂಗದಲ್ಲಿ ನಟಿಯರಾಗಿ ತಮ್ಮದೇಯಾದ ಛಾಪು ಮೂಡಿಸಿರುವ ಹೆಗ್ಗಳಿಕೆ ಈ ಸ್ಟಾರ್ ನಟಿಯರದ್ದು. ಸಿನಿರಂಗದಲ್ಲಿ ಹೆಚ್ಚಿನ ಯಶಸ್ಸನ್ನು ಕಂಡಿರುವ ಈ ಕಪೂರ್ ಸಹೋದರಿಯರು ತಮ್ಮ ನಿಜ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಇವರ ಈ ಸಾಧನೆಯ ಹಿಂದೆ ತಮ್ಮ ತಾಯಿಯ ಪಾತ್ರ ಹೆಚ್ಚಿದೆ ಎಂದು ನಟಿ ಕರೀಷ್ಮಾ ಯಾವಾಗಲೂ ಹೇಳುತ್ತಾರೆ.
ಅದರಲ್ಲೂ ವಿಶೇಷವಾಗಿ ಕರೀಷ್ಮಾ ಮತ್ತು ಕರೀನಾ ಅವರ ತಾಯಿ ಬಬಿತಾ ಅವರ ಆರಂಭಿಕ ದಿನಗಳಲ್ಲಿ ಅನುಭವಿಸಿದ ಕಷ್ಟ ಮತ್ತು ತಂದೆಯಿಂದ ಬೇರ್ಪಟ್ಟಾಗ ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ದಂಪತಿಗಳು ಬೇರೆಯಾಗಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳನ್ನು ತಾವೇ ಪಾಲನೆ ಮಾಡಿ ಬೆಳೆಸುವ ಜವಾಬ್ದಾರಿಯನ್ನು ಬಬಿತಾ ಒಬ್ಬರೇ ತೆಗೆದುಕೊಂಡಿದ್ದರು. ಕರಿಷ್ಮಾ ಅವರ ತಾಯಿ ಬಬಿತಾ ಕೂಡ ಒಂದು ಕಾಲದಲ್ಲಿ ನಟಿಯಾಗಿದ್ದರು. 1971ರಲ್ಲಿ ಬಬಿತಾ ಅವರು ಕಪೂರ್ ಕುಟುಂಬದ ಮಗ ರಣಧೀರ್ ಕಪೂರ್ ಅವರನ್ನು ವಿವಾಹವಾದರು. ಆದರೆ ಮದುವೆಯಾದ ನಂತರ ಸಿನಿಮಾ ಜೀವನ ಕೈಬಿಡಲು ಕಪೂರ್ ಕುಟುಂಬ ಹೇಳಿದ್ದಕ್ಕೆ ಪ್ರೀತಿಯಿಂದಲೇ ಬಬಿತಾ ಸಿನಿ ವೃತ್ತಿಜೀವನವನ್ನ ಅಲ್ಲಿಗೆ ತ್ಯಜಿಸಿದರು.
ದಾಂಪತ್ಯ ಜೀವನದಲ್ಲಿ ಬಿರುಕು
ಬಬಿತಾ ಮತ್ತು ರಣಧೀರ್ ಅವರ ದಾಂಪತ್ಯ ಕೆಲವು ವರ್ಷಗಳ ಕಾಲ ಚೆನ್ನಾಗಿಯೇ ಇತ್ತು. ಆದರೆ ಕ್ರಮೇಣ ರಣಧೀರ್ ಕಪೂರ್ ಅವರ ಚಲನಚಿತ್ರ ವೃತ್ತಿಜೀವನ ಕ್ಷೀಣಿಸಲು ಪ್ರಾರಂಭಿಸಿತು. ಇದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ ರಣಧೀರ್ ಮದ್ಯದ ವ್ಯಸನಿಯಾದರು. ಈ ಬದಲಾವಣೆಯು ಅವರ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. ಕೊನೆಗೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಇಬ್ಬರೂ ಬೇರೆಯಾಗುವ ಸಂಗತಿ ಎದುರಾಯಿತು. ಡಿವೋರ್ಸ್ ನೀಡದೇ ಪತಿಯಿಂದ ದೂರವಾಗಿ ಬಬಿತಾ ತನ್ನ ಮಕ್ಕಳಾದ ಕರೀಷ್ಮಾ ಮತ್ತು ಕರೀನಾರೊಂದಿಗೆ ಪ್ರತ್ಯೇಕ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡರು. ಒಂಟಿಯಾಗಿ ತಮ್ಮೆರಡು ಮಕ್ಕಳನ್ನು ಬೆಳೆಸಿದರು.
ಕಪೂರ್ ಕುಟುಂಬದಲ್ಲಿ ಸೊಸೆ ಮತ್ತು ಹೆಣ್ಣುಮಕ್ಕಳು ಚಲನಚಿತ್ರಗಳಲ್ಲಿ ಕೆಲಸ ಮಾಡಿಸದೇ ಇರುವುದು ಸಂಪ್ರದಾಯವಾಗಿತ್ತು. ಆದರೆ ಕಪೂರ್ ಕುಟುಂಬ ಸಂಪ್ರದಾಯವನ್ನು ಮುರಿದು ಬಬಿತಾ ಮಗಳಾದ ಕರೀಷ್ಮಾರನ್ನ ನಟಿಯನ್ನಾಗಿಸಲು ನಿರ್ಧರಿಸಿದರು. ಅನೇಕ ಹೋರಾಟಗಳು ಮತ್ತು ಸಾಮಾಜಿಕ ಟೀಕೆಗಳ ನಡುವೆ ಕರಿಷ್ಮಾ 1991ರಲ್ಲಿ 'ಪ್ರೇಮ್ ಖೈದಿ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಬಬಿತಾ ಅವರ ಕಠಿಣ ಪರಿಶ್ರಮ ಮತ್ತು ಧೈರ್ಯದ ಫಲವಾಗಿ ಕರಿಷ್ಮಾ 90ರ ದಶಕದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾದರು. ನಂತರ ಕರೀನಾ ಕಪೂರ್ ತಮ್ಮ ತಾಯಿ ಮತ್ತು ಸಹೋದರಿಯ ಬೆಂಬಲದೊಂದಿಗೆ 'ರೆಫ್ಯೂಜಿ' (2000) ಚಿತ್ರದ ಮೂಲಕ ನಟನಾ ಜಗತ್ತಿಗೆ ಪ್ರವೇಶಿಸಿದರು.
ನಂತರ ಸುಮಾರು 19 ವರ್ಷಗಳ ನಂತರ 20007ರಲ್ಲಿ ಬಬಿತಾ ಮತ್ತು ರಣದೀರ್ ಒಂದಾದರು. ಸಹೋದರಿಯರಿಗೆ ತಮ್ಮ ತಂದೆ ಮತ್ತೆ ದೊರೆತರೆಂಬ ಸಂತಸ ಮೂಡಿತು. ಆದರೂ ಕೂಡ ಇಬ್ಬರು ದಂಪತಿಗಳ ನಡುವೆ ಬಿರುಕು ಇನ್ನೂ ಸರಿಹೋಗಿಲ್ಲ. ಇಂದಿಗೂ ಕೂಡ ಪ್ರತ್ಯೇಕವಾಗಿ ಜೀವನ ನಡೆಸುತ್ತಿರುವ ರಣಧೀರ್ ಮತ್ತು ಬಬಿತಾ ಕುಟುಂಬದ ಕಾರ್ಯಕ್ರಮಗಳಲ್ಲಿ ಮಾತ್ರ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ