)
shilpa Shetty: ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಬಾಲಿವುಡ್ನ ಫೇಮಸ್ ದಂಪತಿಗಳಾಗಿದ್ದಾರೆ. ಅಷ್ಟೇ ಅಲ್ಲ ಈ ಜೋಡಿ ಆಗಾಗ ತಮ್ಮ ವೈಯಕ್ತಿಕ ಜೀವನದ ವಿಷಯದ ಕುರಿತು ಸುದ್ದಿಯಲ್ಲಿ ಇರುತ್ತಾರೆ. ಇನ್ನು ಇದಕ್ಕೆ ಸೂಕ್ತ ಉದಾಹರಣೆ ಎಂಬುವಂತೆ ಈ ಸ್ಟಾರ್ ಜೋಡಿ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ವಿಷಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಹೂಡಿಕೆದಾರರೊಂದಿಗೆ ಮೋಸ ಮಾಡಿದ್ದಾರೆಂದು ದೂರು ನೀಡಲಾಗಿದ್ದು, ಪ್ರಕರಣ ಈಗ ಚರ್ಚೆಗೆ ಗ್ರಾಸವಾಗಿದೆ.
ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60.4 ಕೋಟಿ ರೂ. ವಂಚನೆ ಮಾಡಿದ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಪ್ರಕರಣ ದಾಖಲಿಸಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಮತ್ತೊಬ್ಬ ಅಪರಿಚಿತ ವ್ಯಕ್ತಿಯ ಮೇಲೂ ಆರೋಪ ಹೊರಿಸಲಾಗಿದೆ.
ಮುಂಬೈ ಮೂಲದ ಖ್ಯಾತ ಉದ್ಯಮಿ, ದೂರುದಾರ ದೀಪಕ್ ಕೊಠಾರಿ ಹೇಳಿರುವಂತೆ ದಂಪತಿಗಳು ತಮಗೆ 60 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಲ್ಲಿ ಶೆಟ್ಟಿ ಮತ್ತು ಕುಂದ್ರಾ ಅವರ ಈಗ ಕಾರ್ಯನಿರ್ವಹಿಸದ ಕಂಪನಿಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಸೇರಿದೆ. ಕೊಠಾರಿ ಪ್ರಕಾರ ಅವರು 2015 ಮತ್ತು 2023 ರ ನಡುವೆ ವ್ಯವಹಾರವನ್ನು ವಿಸ್ತರಿಸುವ ನೆಪದಲ್ಲಿ ಈ ಮೊತ್ತವನ್ನು ಹೂಡಿಕೆ ಮಾಡಿದರು, ಆದರೆ ಹಣವನ್ನು ವೈಯಕ್ತಿಕ ವೆಚ್ಚಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಮೊತ್ತ 10 ಕೋಟಿ ರೂ.ಗಳನ್ನು ಮೀರಿದ್ದರಿಂದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಆರ್ಥಿಕ ಅಪರಾಧಗಳ ವಿಭಾಗಕ್ಕೆ (EOW) ಹಸ್ತಾಂತರಿಸಲಾಗಿದೆ. ಇನ್ನು ದೂರುದಾರನಿಗೆ ರಾಜೇಶ್ ಆರ್ಯ ಎಂಬ ವ್ಯಕ್ತಿ ತನಗೆ ಶೆಟ್ಟಿ ಮತ್ತು ಕುಂದ್ರಾ ಅವರನ್ನು ಪರಿಚಯಿಸಿದ ಎಂದು ಕೊಠಾರಿ ಆರೋಪಿಸಿದ್ದಾರೆ. ರಾಜೇಶ್ ಆರ್ಯ ಕಂಪನಿಗೆ ವಾರ್ಷಿಕ 12% ಬಡ್ಡಿದರದಲ್ಲಿ ₹75 ಕೋಟಿ ಸಾಲವನ್ನು ಪಡೆದುಕೊಂಡಿದ್ದರು ಎಂದು ಕೊಠಾರಿ ಹೇಳಿದರು. ಆದರೂ ತೆರಿಗೆ ಹೊರೆಯನ್ನು ಕಡಿಮೆ ಮಾಡಲು, ಅವರು ಆ ಮೊತ್ತವನ್ನು "ಹೂಡಿಕೆ" ಎಂದು ಪ್ರಸ್ತುತಪಡಿಸಲು ಹೇಳಿದ್ದರು.
ದೂರುದಾರ ಉದ್ಯಮಿ 2015 ರ ಏಪ್ರಿಲ್ನಲ್ಲಿ 31.95 ಕೋಟಿ ರೂ.ಗಳನ್ನು ಮತ್ತು ಜುಲೈ 2015 ರಿಂದ ಮಾರ್ಚ್ 2016 ರ ನಡುವೆ 28.54 ಕೋಟಿ ರೂ.ಗಳನ್ನು ವರ್ಗಾಯಿಸಿರುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ, ಅವರು ಒಪ್ಪಂದಕ್ಕಾಗಿ 60.48 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ ಮತ್ತು 3.19 ಲಕ್ಷ ರೂ.ಗಳನ್ನು ಸ್ಟ್ಯಾಂಪ್ ಡ್ಯೂಟಿಯಾಗಿ ಪಾವತಿಸಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.
ಇನ್ನು ಈ ಪ್ರಕರಣ ಈಗ EOW–ಅಧಿನ ದಾಖಲಾಗಿದೆ. ಅಷ್ಟೇ ಅಲ್ಲ ಮುಂಬೈ ಪೋಲಿಸ್ ಈ ಆರೋಪವನ್ನು ಒಂದು ಪ್ರಮುಖ ಹಣಕಾಸು ಅಪರಾಧ ಪ್ರಕರಣ ಎಂದು ಪರಿಗಣಿಸಿದ್ದಾರೆ. ಇನ್ನು ಈ ವಿಷಯದ ಕುರಿತು, ತನಿಖೆಯಲ್ಲಿ ವ್ಯವಹಾರದ ದಾಖಲಾತಿಗಳು, ಹಣದ ಹರಿವು, ದಾಖಲಾತಿಗಳ ಪರಿಶೀಲನೆ ಮತ್ತು ಆರೋಪಿಗಳ ಪಾತ್ರದ ಮೇಲೆ ತೀವ್ರವಾಗಿ ವಿಚಾರಣೆ ನಡೆಯುತ್ತಿದೆ.