ರೂಲ್ಸ್‌ ಬ್ರೇಕ್‌ ಮಾಡಿದ್ದಲ್ಲದೆ, ಸಂಚಾರಿ ಪೊಲೀಸ್‌ ಜೊತೆ ಸ್ಟಾರ್‌ ನಟನ ವಾಗ್ವಾದ..! ದೂರು ದಾಖಲು

Bellamkonda Srinivas : ನಿಯಮಗಳು ಎಲ್ಲರಿಗೂ ಒಂದೇ, ಅದು ಸ್ಟಾರ್‌ ನಟರಾಗಿರಲಿ, ಸೆಲೆಬ್ರಿಟಿಯಾಗಿರಲಿ, ರಾಜಕೀಯ ದಿಗ್ಗಜರೇ ಆಗಿರಿಲಿ.. ಅದರಲ್ಲಿಯೂ ಸಿನಿಮಾ ನಾಯಕರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಏಕೆಂದರೆ ಅವರನ್ನು ಲಕ್ಷಾಂತರ ಅಭಿಮಾನಿಗಳು ಅನುಸರಿಸುತ್ತಿರುತ್ತಾರೆ.. ಆದ್ರೆ ಅಂತ ನಟರೊಬ್ಬರು ಇದೀಗ ಸಂಚಾರಿ ಪೊಲೀಸ್‌ ಜೊತೆ ವಾಗ್ವಾದ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ..  

Written by - Krishna N K | Last Updated : May 15, 2025, 06:30 PM IST
    • ಸ್ಟಾರ್‌ ನಟರಾಗಿರಲಿ, ಸೆಲೆಬ್ರಿಟಿಯಾಗಿರಲಿ, ನಿಯಗಳು ಎಲ್ಲರಿಗೂ ಅನ್ವಯ
    • ಅದರಲ್ಲಿಯೂ ಸಿನಿಮಾ ನಾಯಕರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು.
    • ಏಕೆಂದರೆ ಅವರನ್ನು ಲಕ್ಷಾಂತರ ಅಭಿಮಾನಿಗಳು ಅನುಸರಿಸುತ್ತಿರುತ್ತಾರೆ..
ರೂಲ್ಸ್‌ ಬ್ರೇಕ್‌ ಮಾಡಿದ್ದಲ್ಲದೆ, ಸಂಚಾರಿ ಪೊಲೀಸ್‌ ಜೊತೆ ಸ್ಟಾರ್‌ ನಟನ ವಾಗ್ವಾದ..! ದೂರು ದಾಖಲು

Sai Srinivas Bellamkonda : ಟಾಲಿವುಡ್‌ನ ನಟರೊಬ್ಬರ ವರ್ತನೆ ವಿರುದ್ಧ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವಿರೋಧಕ್ಕೆ ಕಾರಣವಾಗಿದೆ. ಎಲ್ಲರಿಗೂ ಮಾದರಿಯಾಗಬೇಕಾದ ಸೆಲೆಬ್ರಿಟಿಗಳು ಈ ರೀತಿ ನಿಯಮ ಉಲ್ಲಂಘಿಸಿ, ದುರ್ವತನೆ ತೋರುತ್ತಿರುವುದು ಅವರ ಅಭಿಮಾನಿಗಳ ಅಸಮಾಧಾನಕ್ಕೂ ಎಡೆಮಾಡಿಕೊಟ್ಟಿದೆ.

Add Zee News as a Preferred Source

ಮಂಗಳವಾರ (ಮೇ 13) ಸಂಜೆ, ಟಾಲಿವುಡ್ ನಟ ಬೆಲ್ಲಂಕೊಂಡ ಶ್ರೀನಿವಾಸ್ ಜುಬಿಲಿ ಹಿಲ್ಸ್ ಜರ್ನಲಿಸ್ಟ್ ಕಾಲೋನಿಯ ತಮ್ಮ ಕಾರ್‌ ಅನ್ನು ಚಲಾಯಿಸಿಕೊಂಡು ಬರುತ್ತಿದ್ದರು. ರಾಂಗ್‌ ರೂಟ್‌ನಲ್ಲಿ ಬಂದಿದ್ದು ಅಲ್ಲದೆ, ಪ್ರಶ್ನೆ ಮಾಡಿದ ಸಂಚಾರಿ ಪೊಲೀಸ್‌ ಜೊತೆ ವಾಗ್ದಾದ ನಡೆಸಿದರು. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಲ್ಲದೆ, ಬೆಲ್ಲಂಕೊಂಡ ಶ್ರೀನಿವಾಸ್ ಅವರ ಈ ವಿಷಯವನ್ನು ಟ್ರಾಫಿಕ್ ಕಾನ್‌ಸ್ಟೆಬಲ್ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದರು. 

ಇದನ್ನೂ ಓದಿ: ಮದುವೆಯಲ್ಲಿ ನಂಬಿಕೆ ಕಳೆದುಕೊಂಡಿರುವ ಈ ನಟಿ; 38ನೇ ವಯಸ್ಸಿನಲ್ಲಿಯೂ ಒಂಟಿ!!

ಘಟನೆ ಹಿನ್ನೆಲೆ : ನಟ ಬೆಲ್ಲಂಕೊಂಡ ಶ್ರೀನಿವಾಸ್ ಮಂಗಳವಾರ (ಮೇ 13) ಮಧ್ಯಾಹ್ನ ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ 45 ರಿಂದ ಜರ್ನಲಿಸ್ಟ್ ಕಾಲೋನಿಗೆ ಕಾರಿನಲ್ಲಿ ಬಂದು ರಾಂಗ್‌ ರೂಟ್‌ ಮೂಲಕ ವೃತ್ತದಲ್ಲಿರುವ ತಮ್ಮ ಮನೆಗೆ ಹೋಗಲು ಪ್ರಯತ್ನಿಸಿದರು. ಆದರೆ, ಅಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಕಾನ್‌ಸ್ಟೆಬಲ್ ನರೇಶ್, ನಟನ ಕಾರನ್ನು ಗಮನಿಸಿ ಅದನ್ನು ನಿಲ್ಲಿಸಿದರು. ಆದರೆ, ಬೆಲ್ಲಂಕೊಂಡ ಶ್ರೀನಿವಾಸ್ ಸಂಚಾರಿ ಕಾನ್‌ಸ್ಟೆಬಲ್ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಡಿಕ್ಕಿ ಹೊಡೆಯಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ. ಇದರಿಂದ ಕಾನ್‌ಸ್ಟೆಬಲ್ ಭಯದಿಂದ ಪಕ್ಕಕ್ಕೆ ಸರಿದರು ಎಂದು ವರದಿಯಾಗಿದೆ.

ಈ ಇಡೀ ಘಟನೆಯನ್ನು ವಾಹನ ಚಾಲಕನೊಬ್ಬ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಬೆಲ್ಲಂಕೊಂಡ ಶ್ರೀನಿವಾಸ್ ಅವರ ಅಸಭ್ಯ ವರ್ತನೆಯನ್ನು ಟೀಕಿಸುತ್ತಿದ್ದಾರೆ. ನೀವು ಸೆಲೆಬ್ರಿಟಿ ಆಗಿ ಈ ರೀತಿ ವರ್ತಿಸುವುದು ಸರಿಯೇ..? ಅಂತ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ʻನನ್ನ ತಂದೆ ಈಗ ಆಕೆಯ ಜೊತೆ ಸಂತೋಷವಾಗಿದ್ದಾರೆ..ʼ : ಕರೀನಾ ಕಪೂರ್‌ ಸೈಫ್‌ ಅಲಿ ಖಾನ್‌ ಡಿವೋರ್ಸ್‌ ವದಂತಿ ಮಧ್ಯೆ ಮೊದಲ ಪತ್ನಿ ಮಗನ ಶಾಕಿಂಗ್‌ ಹೇಳಿಕೆ

ಇದರ ಮಧ್ಯ ಘಟನೆಗೆ ಸಂಬಂಧಿಸಿದಂತೆ ಬೆಲ್ಲಂಕೊಂಡ ಶ್ರೀನಿವಾಸ್ ವಿರುದ್ಧ ಜುಬಿಲಿ ಹಿಲ್ಸ್ ಪೊಲೀಸರು ಬುಧವಾರ (ಮೇ 15) ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾರೆಯೇ..? ಎಂಬ ಕುರಿತು ತನಿಖೆ ನಡೆಯುತ್ತಿದೆ. ಈ ವಿಷಯವಾಗಿ ನಟನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಬಹುದು ಎಂದು ತೋರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News