ಗರ್ಲ್ಸ್ ಗಮನಿಸಿ : ಅರ್ಜುನ್ ಜನ್ಯ ನಿರ್ದೇಶನದ ʼ45ʼ ಚಿತ್ರಕ್ಕೆ ನಾಯಕಿ ಬೇಕಾಗಿದ್ದಾರೆ..!
45 Movie audition : ಸ್ಟಾರ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ 45 ಸಿನಿಮಾಗೆ ನಾಯಕಿ ಬೇಕಾಗಿದ್ದಾರೆ. ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ, ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ನಾಯಕಿಯ ಪಾತ್ರಕ್ಕೆ ಕನ್ನಡ ಬರುವವರಿಗೆ ಮೊದಲ ಆದ್ಯತೆ.
Cast calling for Arjun janya movie : "ನಾತಿಚರಾಮಿ", "ಗಾಳಿಪಟ 2" ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳ ನಿರ್ಮಾಪಕರಾದ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ʼ45ʼ ಪ್ಯಾನ್ ಇಂಡಿಯಾ ಚಿತ್ರವನ್ನು ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯ ನಿರ್ದೇಶಿಸುತ್ತಿದ್ದಾರೆ. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮೂವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹತ್ವಾಕಾಂಕ್ಷೆಯ ಈ ಚಿತ್ರಕ್ಕೆ ಚಿತ್ರತಂಡ ನಾಯಕಿಯ ಹುಡುಕಾಟ ನಡೆಸುತ್ತಿದೆ.
ನಾಯಕಿಯ ಪಾತ್ರಕ್ಕೆ ಕನ್ನಡ ಬರುವವರಿಗೆ ಮೊದಲ ಆದ್ಯತೆ. ಆಸಕ್ತಿ ಇರುವವರು ತಮ್ಮ ಇತ್ತೀಚಿನ ಎಡಿಟ್ ಮಾಡದ ಫೋಟೊ ಹಾಗೂ ಚಿಕ್ಕ ವಿಡಿಯೋ ತುಣುಕನ್ನು 45kannadamovie@gmail.com ಗೆ ಕಳುಹಿಸಬಹುದು. ಮ್ಯೂಸಿಕ್ ಡೈರೆಕ್ಟರ್ ಆಗಿ ಹಿಟ್ ಹಾಡುಗಳನ್ನ ಕೊಟ್ಟಿರೋ ಅರ್ಜುನ್ ಜನ್ಯ ಈಗ ಸಿನಿಮಾ ಮಾಡೋ ಮೂಲಕ ಭರ್ಜರಿ ಮನರಂಜನೆ ನೀಡಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: Ragini Dwivedi : ನನ್ನ ಬಗ್ಗೆ ಎಲ್ಲರು ಬೇಕಾದಷ್ಟು ಗಾಸಿಪ್ ಮಾಡ್ತಾರೆ, ನೆಗೆಟಿವ್ ಮಾತನಾಡಿದ್ದಾರೆ : ನಟಿ ರಾಗಿಣಿ
ರಮೇಶ್ ರೆಡ್ಡಿ ನಿರ್ಮಾಣದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆ ಇರುತ್ತೆ ಅಂದ್ರೆ ನೀವೇ ಲೆಕ್ಕಾ ಹಾಕಿ ಸಿನಿಮಾ ಹೇಗ್ ಇರ್ಬೋದು ಅಂತ. ಈ ಸಿನಿಮಾಗಾಗಿ ಈಗ ನಾಯಕಿಯ ಹುಡುಕಾಟ ಜೋರಾಗಿ ನಡೆಯುತ್ತಿದೆ. ಇಷ್ಟು ದೊಡ್ಡ ತಾರಾಬಳಗವಿರೋ ಸಿನಿಮಾಗೆ ನಾಯಕಿ ಯಾರಗಬಹುದು ಅನ್ನೋ ಕುತೂಹಲವಂತೂ ಬೆಟ್ಟದಷ್ಟಿದೆ. ಈಗ ಆಸಕ್ತಿ ಉಳ್ಳವರು ಪ್ರಯತ್ನ ಮಾಡೋ ಸದವಕಾಶ ಕೂಡ ಸಿಕ್ಕಿದೆ. ನೋಡೋಣ ಆ ಭಾಗ್ಯವಂತೆ ಯಾರು ಅನ್ನೋದನ್ನ ಕಾದು ನೋಡೋಣ ಅಲ್ಲವೇ.. ಏನ್ ಅಂತೀರಾ..?https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.