Sandalwood new movies : ಪ್ರೇಮಿಯ ನೋವು, ಸಂಕಟ, ಪರದಾಟದ ದೃಶ್ಯಗಳು ಇವೆಲ್ಲವನ್ನ ಖುಷಿ ಖುಷಿಯಾಗಿ ‘Congratulations ಬ್ರದರ್' ಸಿನಿಮಾದ ಮೂಲಕ ನೋಡಬಹುದು. ಈ ಚಿತ್ರ ಜನರನ್ನು ಸೆಳೆಯೋದು ಪಕ್ಕಾ ಅಂದ್ಹಾಗೆ ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾ.
Congratulations ಬ್ರದರ್ ತ್ರಿಕೋನ ಪ್ರೇಮ ಕಥೆಯ ಸಿನಿಮಾ. ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗುತ್ತೆ? ಅನ್ನೋದನ್ನು ಈ ಸಿನಿಮಾ ತಂಡ ಹೇಳುವುದಕ್ಕೆ ಹೊರಟಿದೆ. ಈ ಸಿನಿಮಾದ "ಪ್ರೀತಿ ಪಜೀತಿ.." ಎನ್ನುವ ಹಾಡು ಈಗಾಗಲೇ ಎಲ್ಲರ ಗಮನ ಸೆಳೆದಿದೆ.
ಇದರ ಬೆನ್ನಲ್ಲೇ 'Congratulations ಬ್ರದರ್' ಸಿನಿಮಾದ ಟೀಸರ್ ಕೂಡ ಜೋರಾಗಿ ಸದ್ದು ಮಾಡುತ್ತಿದೆ. ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ ಈ ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದಾರೆ.
‘Congratulations ಬ್ರದರ್' ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ಅನುಭವಿ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರತಾಪ್ ಗಂಧರ್ವ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಯುವ ನಟ ರಕ್ಷಿತ್ ನಾಗ್ ನಟಿಸಿದ್ದಾರೆ. ನಾಯಕಿಯರಾಗಿ ಸಂಜನಾ ದಾಸ್, ಅನುಶಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಕಾರವಾರ, ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ.
ಇದು ಸಾಪೇಕ್ಷ ಮತ್ತು ಹಾಸ್ಯಮಯ ಪರಿಕಲ್ಪನೆಯಾಗಿದ್ದು, ಪ್ರೇಕ್ಷಕರು ಇದನ್ನು ಆನಂದಿಸುತ್ತಾರೆ ಎಂದು ನಾನು ನಂಬುತ್ತೇನೆ. ನಾವು ಕಾರವಾರ ಮತ್ತು ಬೆಂಗಳೂರಿನಂತಹ ಸ್ಥಳಗಳಲ್ಲಿ ಚಿತ್ರೀಕರಣವನ್ನು 45 ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ಹರೀಶ್ ರೆಡ್ಡಿ ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದರೆ, ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಚಿತ್ರ ಇದೇ ನವೆಂಬರ್ 21ಕ್ಕೆ ರಿಲೀಸ್ ಆಗುತ್ತಿದೆ.









