'ಛಪಕ್ vs ತಾನಾ ಜಿ' ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮಾಡಿದ್ದೇನು ಗೊತ್ತೇ ?

ಮಧ್ಯಪ್ರದೇಶದಲ್ಲಿ, ದೀಪಿಕಾ ಪಡುಕೋಣೆ ಅವರ ಚಲನಚಿತ್ರ ಛಪಕ್ ರಾಜಕೀಯವಾಗಿ ಕಾವೇರುವಂತೆ ಮಾಡಿದೆ.ಈಗಾಗಲೇ ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಸಿಎಂ ರಾಜ್ಯದಲ್ಲಿ ತೆರಿಗೆ ಮುಕ್ತ ಘೋಷಿಸಿದ್ದಾರೆ.

Last Updated : Jan 10, 2020, 06:19 PM IST
'ಛಪಕ್ vs ತಾನಾ ಜಿ'  ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಮಾಡಿದ್ದೇನು ಗೊತ್ತೇ ? title=

ನವದೆಹಲಿ: ಮಧ್ಯಪ್ರದೇಶದಲ್ಲಿ, ದೀಪಿಕಾ ಪಡುಕೋಣೆ ಅವರ ಚಲನಚಿತ್ರ ಛಪಕ್ ರಾಜಕೀಯವಾಗಿ ಕಾವೇರುವಂತೆ ಮಾಡಿದೆ.ಈಗಾಗಲೇ ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಸಿಎಂ ರಾಜ್ಯದಲ್ಲಿ ತೆರಿಗೆ ಮುಕ್ತ ಘೋಷಿಸಿದ್ದಾರೆ.

ವಿರೋಧ ಪಕ್ಷದಲ್ಲಿರುವ ಬಿಜೆಪಿ ಪಕ್ಷದ ಮುಖಂಡರು ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದಾರೆ ಮತ್ತು ಚಲನಚಿತ್ರ ನಟಿ ದೀಪಿಕಾ ಪಡುಕೋಣೆ ಬಗ್ಗೆ ಅನೇಕ ಅಶ್ಲೀಲ ಟೀಕೆಗಳನ್ನು ಮಾಡಿದ್ದಾರೆ.ಈ ಮಧ್ಯೆ ಭೋಪಾಲ್‌ನಲ್ಲಿ ಅಜಯ್ ದೇವಗನ್ ಅಭಿನಯದ ‘ತಾನಾ ಜಿ’ ಚಿತ್ರದ ಉಚಿತ ಟಿಕೆಟ್‌ಗಳನ್ನು ಬಿಜೆಪಿ ವಿತರಿಸುತ್ತಿದ್ದರೆ, ಕಾಂಗ್ರೆಸ್ ಪಕ್ಷವು ನಟಿ ದೀಪಿಕಾ ಪಡುಕೋಣೆ ನಿರ್ಮಿಸಿದ ‘ಚಪಕ್’ ಚಿತ್ರದ ಉಚಿತ ಟಿಕೆಟ್‌ಗಳನ್ನು ವಿತರಿಸುತ್ತಿದೆ. 

ಸಿಎಂ ಕಮಲ್ ನಾಥ್ ಅವರು ಗುರುವಾರದಂದು ದೀಪಿಕಾ ಪಡುಕೋಣೆ ಅವರ ಚಿತ್ರ ಛಪಕ್ ಅನ್ನು ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಿದರು. ಜೆಎನ್‌ಯುನಲ್ಲಿ ಹಿಂಸಾಚಾರದ ವಿರುದ್ಧದ ಪ್ರತಿಭಟನೆಯಲ್ಲಿನ ಸಭೆಯಲ್ಲಿ ವಿದ್ಯಾರ್ಥಿಗಳೊಂದಿಗೆ ದೀಪಿಕಾ ಪಡುಕೋಣೆ ಭಾಗಿಯಾಗಿದ್ದು ಇದರ ಹಿಂದಿನ ಕಾರಣ ಎಂದು ಬಿಜೆಪಿ ತಿಳಿಸಿದೆ.

Trending News