)
Coolie ott release date : ಕೂಲಿ ಇತ್ತೀಚೆಗೆ ಬಿಡುಗಡೆಯಾಗಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ, ಚೌಬಿನ್ ಸಗೀರ್, ನಾಗಾರ್ಜುನ, ಅಮೀರ್ ಖಾನ್, ಶ್ರುತಿ ಹಾಸನ್, ಸತ್ಯರಾಜ್ ಸೇರಿದಂತೆ ಅನೇಕ ಬಿಗ್ ನಟರು ಕಾಣಿಸಿಕೊಂಡಿದ್ದಾರೆ. ರಿಲೀಸ್ ಆದ ದಿನದಿಂದಲೇ ಅಭಿಮಾನಿಗಳಿಂದ ಮಿಶ್ರ ವಿಮರ್ಶೆಗಳನ್ನು ಪಡೆದಿದೆ.
ಕೂಲಿ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ರಜನಿಕಾಂತ್ ಇದರಲ್ಲಿ ದೇವ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಕಥೆಯು ಅಪಹರಣಕಾರರ ಗ್ಯಾಂಗ್ ಮತ್ತು ದೇವಾ ಬಲೆಗೆ ಬಿದ್ದ ತನ್ನ ಸ್ನೇಹಿತನ ಮಗಳನ್ನು ರಕ್ಷಿಸುವ ಸುತ್ತ ಸುತ್ತುತ್ತದೆ. ಚಿತ್ರದ ಸಂಗೀತ, ಹಾಡುಗಳು ಮತ್ತು ಪಂಚ್ ಡೈಲಾಗ್ಗೆ ಪ್ರೇಕ್ಷಕ ಫಿದಾ ಆಗಿದ್ದ.
Choolie on ott : OTT ಪ್ಲಾಟ್ಫಾರ್ಮ್ಗಳ ಜನಪ್ರಿಯತೆ ಹೆಚ್ಚುತ್ತಿರುವಂತೆ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಿನಿಮಾಗಳು OTTಯಲ್ಲಿ ಪ್ರದರ್ಶವಾಗುತ್ತಿವೆ. ಥಿಯೇಟರ್ನಲ್ಲಿ ಚಿತ್ರದ ಟೈಟಲ್ ಕಾರ್ಡ್ ಹಾಕುವಾಗ, ಡಿಜಿಟಲ್ ಸ್ಟ್ರೀಮಿಂಗ್ ಪಾಲುದಾರ ಯಾರು ಎಂಬುದನ್ನು ಸಹ ಅಲ್ಲೇ ಉಲ್ಲೇಖಿಸಲಾಗುತ್ತದೆ. ಕೂಲಿ ಚಿತ್ರದ OTT ಬಿಡುಗಡೆಯ ಬಗ್ಗೆಯೂ ಇತ್ತೀಚೆಗೆ ಮಾಹಿತಿ ಬಿಡುಗಡೆಯಾಯಿತು. ಈ ಚಿತ್ರದ OTT ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ.
ಕೂಲಿ ಚಿತ್ರದ OTT ಬಿಡುಗಡೆ ದಿನಾಂಕದ ಕುರಿತು ಅಧಿಕೃತ ಘೋಷಣೆ ಮಾಡಲಾಗಿಲ್ಲ. ಆದರೆ ಚಲನಚಿತ್ರ ವಲಯಗಳಲ್ಲಿ ಇದರ ಬಗ್ಗೆ ಹೇಳಲಾಗುತ್ತಿರುವ ಮಾಹಿತಿ ತಿಳಿದಿದೆ. ಸೆಪ್ಟೆಂಬರ್ 12 ಅಥವಾ 13 ರಂದು ಅಮೆಜಾನ್ ಪ್ರೈಮ್ OTT ಪ್ಲಾಟ್ಫಾರ್ಮ್ನಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.